Headlines

ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ಆರು ಬಾರಿ ಚಾಕುವಿನಿಂದ ಇರಿತ.!ಪ್ರಾಣಪಾಯದಿಂದ ಸೇಫ್ ಅದ ಸೈಫ್. ಪೊಲೀಸರಿಂದ ತನಿಖೆ ಚುರುಕು

ಸೈಫ್​ಗೆ ಇರಿದ ಹಂತಕ.! ಒಂದು ಕೋಟಿ ರೂ. ಬೇಡಿಕೆ? ಮುಂದೆನಾಯ್ತು.?

ಮುಂಬಯಿ: ಬಾಲಿವುಡ್ ನಟ ಸೈಫ್​ ಅಲಿ ಖಾನ್​ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೋಳಿಸಿದ್ದಾರೆ ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದ್ದು,ಒಂದಷ್ಟು ಮಾಹಿತಿ‌ಲಭ್ಯವಾಗಿದೆ. ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ತಡರಾತ್ರಿ ಅವರ ಮನೆಯಲ್ಲೇ  ನಡೆದ ಮಾರಣಾಂತಿಕ ಹಲ್ಲೆಯಿಂದ ಬಾಲಿವುಡ್ ಅಂಗಳವನ್ನೆ ತಲ್ಲಣಗೊಳಿಸಿದೆ.! ನಟ ಸೈಫ್ ಅಲಿಗೆ ಹಂತಕ 6 ಬಾರಿ ಚಾಕುವಿನಿಂದ ಇರಿದಿದ್ದಾನೆ.!ದೇಹದ ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಲ್ಲಿ ಚಾಕುವಿನಿಂದ ಇರಿದ ಬಲವಾದ ಗಾಯವಾಗಿದೆ. ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್​ ಅಲಿ ಅವರಿಗೆ,ಈಗಾಗಲೇ ಕೆಲ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು,ನಟ ಸೈಫ್ ಪ್ರಾಣಪಾಯದಿಂದ ಸೇಫ್ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.  ಈ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಊಹಾಪೋಹಗಳೇ ಹರಿದಾಡುತ್ತಿವೆ. ಸೈಫ್​ ಮನೆಯಲ್ಲಿ ಕೆಲಸ  ಮಾಡುತ್ತಿರುವಾಕೆ ಪೊಲೀಸರಲ್ಲಿ ಹೇಳಿದಂತೆ ಆ ಕಳ್ಳ ಒಂದು ಕೋಟಿ ರೂಪಾಯಿಗೆ ಸೈಫ್ ಅವರಿಗೆ ಡಿಮಾಂಡ್​ ಮಾಡಿದ್ದ ಎನ್ನಲಾಗಿದೆ. ಆದರೆ ಈ ಸಂದರ್ಭದಲ್ಲಿ ನಡೆದದ್ದು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. 
ಇದೀಗ ಪೊಲೀಸರು ಶಂಕಿತನ ಫೋಟೋ ಒಂದನ್ನು ರಿಲೀಸ್​ ಮಾಡಿದ್ದಾರೆ. ಅಷ್ಟಕ್ಕೂ ಘಟನೆಯ ಬಳಿಕ ಈ ಆರೋಪಿ, ಸುಮಾರು ಒಂದು ಗಂಟೆ ಸೈಫ್ ಮನೆಯೊಳಗೆ ಅವಿತು ಕುಳಿತಿರುವ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಆತ ಮುಂಬೈನ ಬಾಂದ್ರಾದಲ್ಲಿರುವ ಸೈಫ್​ ಅಲಿಯ ಅಪಾರ್ಟ್​ಮೆಂಟ್​ ಒಳಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಆತ ಓಡಿ ಹೋಗುತ್ತಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇವುಗಳ ನಡುವಿನ ಸಮಯ ಸುಮಾರು ಒಂದು ಗಂಟೆ ಎನ್ನಲಾಗಿದೆ. ಒಳಗೆ ನುಗ್ಗಿದ ಆರೋಪಿ, ಹಣದ ಉದ್ದೇಶಕ್ಕಾಗಿ ಬಂದಿದ್ದನೋ ಅಥವಾ ಕೊಲೆ ಮಾಡಲು ಬಂದಿದ್ದನೋ ಗೊತ್ತಿಲ್ಲ. ಈ ಬಗ್ಗೆ ಕೂಡ ಇನ್ನಷ್ಟೇ ತನಿಖೆ ನೆಡೆಯಬೇಕಿದೆ. ಆದರೆ ಸೈಫ್​ ಅಲಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಗೊತ್ತಿದ್ದೇ ಬಂದಿರುವುದಂತೂ ಸತ್ಯ.

ಘಟನೆ ನಡೆದಾಗ ಸಂಧರ್ಭದಲ್ಲಿ ಮಡದಿ ಕರೀನಾ ಮತ್ತು ಮಕ್ಕಳು ಮನೆಯಲ್ಲಿ ಇದ್ದರಂತೆ.  ಕರೀನಾ ತಮ್ಮ ಅಕ್ಕ ಕರೀಷ್ಮಾ ಕಪೂರ್ ಮತ್ತು ರಿಯಾ, ಸೋನಂ ಜೊತೆ ಪಾರ್ಟಿಯೊಂದಕ್ಕೆ ತೆರಳಿ ಆಗಷ್ಟೇ ಮನೆಗೆ ಬಂದು ‌ನಿದ್ರೆಗೆ ಜಾರಿದ್ದರಂತೆ.! ಕಳ್ಳ ಎಲ್ಲರೂ ನಿದ್ರೆಗೆ ಜಾರಿದ್ದ ಸಮಯದಲ್ಲೇ ಎಂಟ್ರಿ ಕೊಟ್ಟಿದ್ದಾನೆ.!ಈಗ ಆರೋಪಿಯ ಬಂಧನಕ್ಕಾಗಿ ಪೊಲೀಸರು ಭಲೇ ಬಿಸಿದಗದಾರೆ. ಇದೇ ವೇಳೆ ಸೈಫ್​ ಮನೆಯಲ್ಲಿ ನಡೆಯುತ್ತಿರುವ ಫ್ಲೋರಿಂಗ್ ಮತ್ತು ಫಿನಿಶಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೂ ಪೊಲೀಸರ ಕಣ್ಣು ಬಿದ್ದಿದೆ.
ಕೆಲ ದಿನಗಳಿಂದ ಸೈಫ್​ ಮನೆಯಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರೆ. ನಿನ್ನೆ ಕೆಲಸ ಮುಗಿಸಿ ಒಬ್ಬ ಮನೆಯೊಳಗೆ ಅಡಗಿಕೊಂಡಿರಬಹುದು ಎನ್ನುವ ಸುದ್ದಿಯೂ ಇದೆ.  ಅದೇ ಇನ್ನೊಂದೆಡೆ, ನಟನ ಮನೆಕೆಲಸದಾಕೆ ಲಿಮಾ ಜೊತೆ ಆ ಆರೋಪ ಜಗಳಕ್ಕಿಳಿದಿದ್ದಾನೆ. ಆಗ ಎಂಟ್ರಿ ಕೊಟ್ಟ ಸೈಫ್​ಗೆ ಇರಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲಸದಾಕೆ ಹೇಳುವಂತೆ ಆತ ಒಂದು ಕೋಟಿಯ ಡಿಮಾಂಡ್​ ಇಟ್ಟಿದ್ದ. ಕೊನೆಗೆ ಇರಿದು ಹೋದ ಎನ್ನುವುದು. ಒಟ್ಟಿನಲ್ಲಿ ಪೊಲೀಸ್​ ತನಿಖೆಯಿಂದ ಎಲ್ಲವೂ ಬಹಿರಂಗವಾಗಬೇಕಿದೆಯಷ್ಟೇ. 

Leave a Reply

Your email address will not be published. Required fields are marked *

Optimized by Optimole
error: Content is protected !!