ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ!
ASHWASURYA/SHIVAMOGGA
ಅಶ್ವಸೂರ್ಯ/ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಚ್ಚರಿ ಘಟನೆ ನಡೆದಿದು ಹೋಗಿದೆ.! ಮಗನಿಗೆ ಮದುವೆ ಮಾಡಿಸ ಬೇಕೆಂದು ಹುಡುಕಿದ್ದ ಹುಡುಗಿಯ ಮೇಲೆ ಅಪ್ಪನಿಗೆ ಮನಸ್ಸಾಗಿದೆ. ಮಾವ ನಾಗಬೇಕಿದ್ದ ವ್ಯಕ್ತಿಯ ಜೋತೆಗೆ ಹುಡುಗಿಗೂ ಪ್ರೇಮಾಂಕುರವಾಗಿದೆ.ಪ್ರೀತಿ ಚಿಗುರಿದ್ದೂ ಆಯ್ತು. ಆಮೇಲೆ ಏನಾಯ್ತು ನೀವೆ ಓದಿ…?
ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧ ವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಅತ್ತೆ ತಾಯಿಗೆ ಸಮಾನ ಎನ್ನುವ ಕಾಲ ಈಗ ಬದಲಾಗಿದೆ. ಸಂಬಂಧಕ್ಕೆ ಬೆಲೆಯೆ ಇಲ್ಲದಂತಾಗಿದೆ.ಗಂಡು ಹೆಣ್ಣು ವಯಸ್ಸಿನ ಅಂತರವಿಲ್ಲದೆ ಪ್ರೀತಿ ಸುಳಿಗೆ ಸಿಲುಕುತ್ತಿದ್ದಾರೆ.!ವಯಸ್ಸಿನ ಅಂತರ ಮರೆತು ಮದುವೆ ಆಗ್ತಾರೆ. ಯಾರನ್ನೋ ಮದುವೆಯಾಗಲು ಬಂದ ಹುಡುಗಿ, ಹುಡುಗ ಇನ್ಯಾರನ್ನೋ ಮದುವೆಯಾದ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕ್ಷಿಯಾಗಿ ನಿಂತಿವೆ. ಈಗ ಇಂತಹುದೇ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಸಾಸಿಕ್ ನಿಂದ ವರದಿಯಾಗಿದೆ.!ತಂದೆಯೊಬ್ಬ ತನ್ನ ಮಗನಿಗೆ ನೊಡಿದ್ದ ಭಾವಿ ಸೊಸೆಯನ್ನೇ ಮದುವೆ ಆಗಿದ್ದಾನೆ.! ತನಗೆ ಮದುವೆ ನಿಶ್ಚಯವಾಗಿದ್ದ ಹುಡುಗಿಯನ್ನು ತನ್ನ ತಂದೆಯೆ ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ ಮಗ ಕಿನ್ನತೆಗೆ ಒಳಗಾಗಿ ತಂದೆ ಮಾಡಿದ ದ್ರೋಹಕ್ಕೆ ನೊಂದು ಇನ್ನೇಂದು ನನಗೆ ಮದುವೆ ಬೇಡ ಎಂದು ತಿರ್ಮಾನಿಸಿ ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಹಾಗೆ ನಾಸಿಕ್ ನ ಜನರೆ ಗಾಬರಿಯಾಗಿದ್ದಾರೆ.
ಅಷ್ಟಕ್ಕೂ ತಂದೆ ಸ್ಥಾನದಲ್ಲಿರುವ ಭಾವಿ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದೆ. ಮಗನ ಮದುವೆಗೆಂದು ತಂದೆ ಎಲ್ಲಾ ತಯಾರಿ ನಡೆಸಿದ್ದ. ಮಗನಿಗಾಗಿ ಹುಡುಗಿಯನ್ನು ಹುಡುಕಿ ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು.ಮದುವೆಯ ನಿಶ್ಚಯವಾಗಿ ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮಗ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣುತ್ತಿದ್ದರೆ.ಇತ್ತ ಅಪ್ಪನೆನ್ನಿಸಿಕೊಂಡ ಭೂಪನಿಗೆ ಭಾವಿ ಸೊಸೆಯ ಮೇಲೆ ಪ್ರೀತಿಯಾಗಿದೆ.!ಸೊಸೆ ಆಗಬೇಕಿದ್ದ ಹುಡುಗಿಗು ಮಾವನ ಮೇಲೆ ಮನಸ್ಸಾಗಿದೆ.! ಇಬ್ಬರ ಪ್ರೀತಿ ಒಳಗೊಳಗೇ ಬೇರೆ ಬಿಟ್ಟಿದೆ.! ಇಬ್ಬರು ಮುಹೂರ್ತ ನೋಡದೆ ಮನೆಯವರಿಗೆ ವಿಷಯವನ್ನು ತಿಳಿಸದೆ ಮದುವೆ ಆಗಿದ್ದಾರೆ.! ಇದನ್ನು ಕೇಳಿದ ಮಗ ದಿಗ್ಭ್ರಮೆಗೊಂಡಿದ್ದಾನೆ.
ನಿಶ್ಚಿತಾರ್ಥವಾಗಿದ್ದ ಹುಡುಗಿ ಕೈಕೊಟ್ಟ ಮೇಲೆ ಮಗ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾನೆ. ಅಪ್ಪನ ಮೋಸದಿಂದ ಬೇಸತ್ತು ಹೋಗಿರುವ ಮಗ,ನನ್ನ ಜೀವನದಲ್ಲಿ ಎಂದೆಂದಿಗೂ ನನಗೆ ಮದುವೆ ಬೇಡ ಎಂದು ತಾನು ಒಂಟಿಯಾಗಿರುವ ನಿರ್ಧಾರಕ್ಕೆ ಬಂದಿದ್ದಾನೆ. ತಂದೆ, ಮಗನಿಗೆ ಇನ್ನೊಂದು ಹುಡುಗಿ ಹುಡುಕುವುದಾಗಿ ಭರವಸೆ ನೀಡಿದ್ದಾನೆ. ಮನೆಯವರೆಲ್ಲ ಆತನ ಮನವೊಲಿಸುವ ಪ್ರಯತ್ನಕೂಡ ಮಾಡಿದ್ದಾರೆ. ತಂದೆಯಿಂದ ಬೇರೆಯಾಗಿ ವಾಸವಾಗುವಂತೆ ಸಲಹೆ ಕೂಡ ನೀಡಿದ್ದರು. ಮದುವೆ ಆಗಲು ಬೇರೆ ಹುಡುಗಿ ಹುಡುಕುವುದಾಗಿ ಅವರೆಲ್ಲ ಭರವಸೆ ನೀಡಿದರು ಮಗನ ಮನಸ್ಸು ಮಾತ್ರ ಬದಲಿಸಲಯ ಸಾಧ್ಯವಾಗಲಿಲ್ಲ. ತನ್ನನ್ನು ಮದುವೆ ಆಗಬೇಕಿದ್ದ ಹುಡುಗಿ ತನ್ನ ಅಪ್ಪನ ಕೈ ಹಿಡಿದು ಸಂಸಾರ ನಡೆಸಲು ಮುಂದಾಗಿದ್ದು ಆತನ ಮನಸ್ಸಿಗೆ ಸಾಕಷ್ಟು ಆಘಾತವನ್ನುಂಟು ಮಾಡಿದೆ. ಪ್ರೀತಿ, ಮದುವೆ ಮೇಲಿನ ನಂಬಿಕೆಯನ್ನು ಆತ ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ.
ಮಗ ಈಗ ತನ್ನ ತಂದೆ ಹಾಗೂ ಪತ್ನಿಯಾಗಬೇಕಾಗಿದ್ದ ಅಮ್ಮನ ಜೊತೆಗಿಲ್ಲ. ಆತ ಮನೆಯಿಂದ ಹೊರಗೆ ಹೋಗಿ ಬೀದಿಯಲ್ಲಿ ವಾಸಮಾಡಲು ಮುಂದಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಇಂಥ ಘಟನೆ ಇದೇ ಮೊದಲಲ್ಲ. ಈ ಹಿಂದೆಯು ಕೂಡ ಸಾಕಷ್ಟು ಈ ರೀತಿಯ ಘಟನೆಗಳು ನಡೆದು ಹೋಗಿವೆ. ಮಗಳನ್ನು ಮದುವೆಯಾಗಲು ಬಂದ ಹುಡುಗನನ್ನು ಹುಡುಗಿ ತಾಯಿ ಮದುವೆಯಾದ ಘಟನೆ ಈ ಹಿಂದೆ ನಡೆದಿತ್ತು.
ಕೆಲ ದಿನಗಳ ಹಿಂದೆ ಚೀನಾದಲ್ಲೂ ಈ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹುಡುಗನೊಬ್ಬ ತಾನು ಮದುವೆಯಾಗಬೇಕಿದ್ದ ಹುಡುಗಿಯನ್ನು ತನ್ನ ತಂದೆಗೆ ಪರಿಚಯಿಸಿದ್ದ. ಆಕೆಯನ್ನು ನೋಡುತ್ತಿದ್ದಂತೆ ತಂದೆ ಪ್ರೀತಿಯಲ್ಲಿ ಬಿದ್ದಿದ್ದ. ಮಗನ ಗೆಳತಿಗೆ ದುಬಾರಿ ಉಡುಗೊರೆಗಳನ್ನು ಕಳುಹಿಸುವ ಮೂಲಕ ಅವಳ ಹೃದಯವನ್ನು ಗೆದ್ದಿದ್ದಲ್ಲದೆ ಮದುವೆ ಯಾಗಿದ್ದ.