ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.?
ASHWASURYA/SHIVAMOGGA
ಅಶ್ವಸೂರ್ಯ/ಶಿವಮೊಗ್ಗ: ಸಂದೀಪನೆಂಬ ಓಸಿ ಬೆಡ್ಡರ್ ನ ಆನ್ಲೈನ್ ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಶಿವಮೊಗ್ಗ ನಗರದ ನೆಮ್ಮದಿ ಅನ್ನೊದು ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಸಂದೀಪನ ಅಕ್ರಮ ಆನ್ಲೈನ್ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಆನ್ಲೈನ್ ಮಟ್ಕಾ ದಂಧೆಗಳಾದ ಶ್ರೀಲಕ್ಷ್ಮೀ,ಜನತಾ ಬಜಾರ್.ವರ್ಲಿ ಮುಂಬೈ,ಸೆಂಟ್ರಲ್ ಬಜಾರ್ ನ ಅಬ್ಬರ ದಿನದಿಂದ ದಿನಕ್ಕೆ ಜುಗಾರಿ ದಂಧೆಯ ಕಲರವ ಮುಗಿಲು ಮುಟ್ಟಿದೆ.!ಮಟ್ಕಾ ಮಹಾಮಾರಿ ರಾತ್ರಿ ಹಗಲೆನ್ನದೆ ಅಮಾಯಕರನ್ನು ಆನ್ಲೈನ್ ಮಟ್ಕಾ ದಂಧೆಯ ಮಹಾ ಕೂಪಕ್ಕೆ ಕೆಡವಿಕೊಂಡು ಬರ್ಬಾತ್ ಮಾಡಿದೆ. ಕೆಲವು ಏರಿಯಾದಲ್ಲಿ ಮನೆ ಮನೆಯ ಮೊಬೈಲ್ ನಲ್ಲಿ ಹೊಕ್ಕಿ ಕುಳಿತಿದೆ ಮಟ್ಕಾ ಮಹಾಮಾರಿ.! ಮನೆಯ ಯಜಮಾನ ಮತ್ತು ಮನೆಯ ಜವಬ್ದಾರಿ ಹೊತ್ತು ಬದುಕು ದೂಡಬೇಕಾದ ವಯಸ್ಸಿಗೆ ಬಂದ ಕೆಲವು ಗಂಡು ಮಕ್ಕಳು ಆನ್ಲೈನ್ ಮಟ್ಕಾ ದಂಧೆಗೆ ಬಲಿಯಾಗುತ್ತಿದ್ದಾರೆ. ಬೆಳಿಗ್ಗೆಯಿಂದ ತಡರಾತ್ರಿ ವರೆಗೂ ನಂಬರ್ ಏಣಿಕೆಯಲ್ಲೆ ತಮ್ಮ ಜೀವನವನ್ನು ಸುಡುಗಾಡು ಮಾಡಿಕೊಂಡಿದ್ದಾರೆ. ಕೂಲಿ ನಾಲಿಮಾಡಿ ಕೈಗೆ ಸಿಕ್ಕ ಹಣವನ್ನೇಲ್ಲ ಆನ್ಲೈನ್ ಮಟ್ಕಾ ಆಟದ ಚಟಕ್ಕೆ ಬಿದ್ದು ಬಿದಿ ಪಾಲಾಗಿದ್ದಾರೆ. ಶಿವಮೊಗ್ಗ ನಗರ ಸಂಪೂರ್ಣ ಅನ್ ಲೈನ್ ಮಟ್ಕಾ ದಂಧೆಕೋರ ಸಂದೀಪ್ ನ ಕಪಿಮುಷ್ಠಿಗೆ ಸಿಲುಕಿ.ಕೆಲವು ಮನೆಗಳ ದೀಪಾ ಅರಿದೆ.!ಅನ್ ಲೈನ್ ಓಸಿ ನಂಬರಿನ ಬೆನ್ನಿಗೆ ಬಿದ್ದ ಮನೆಯ ಯಜಮಾನ ಓಸಿ ಆಡಲು ಹಣಕ್ಕಾಗಿ ಇದ್ದಪದ್ದ ಅಲ್ಪಸ್ವಲ್ಪ ಆಸ್ತಿಯನ್ನು ಚೂರುಪಾರು ಬಂಗಾರವನ್ನು ಮಾರಿ ಅನ್ ಲೈನ್ ಓಸಿ ನಂಬರಿನ ಬೆನ್ನಿಗೆ ಬಿದ್ದು ಬಾರದ ಹಣದ ಆಸೆಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬಿದಿಗೆ ಬಿಳುತ್ತಿದ್ದಾರೆ.!ಕೆಲವರಂತು ಸಾಲ ಸೂಲದ ಸುಳಿಗೆ ಸಿಲುಕಿ ಸಾವಿನ ಮನೆ ಸೇರುತ್ತಿದ್ದಾರೆ! ಇನ್ನೂ ಕೆಲವು ಗಂಡುಮಕ್ಕಳು ಅನ್ ಲೈನ್ ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಬಿದಿಗೆ ಬಿಳುತ್ತಿದ್ದಾರೆ.
ಅದರಲ್ಲೂ ಶಿವಮೊಗ್ಗ ನಗರದ ವೆಂಕಟೇಶ್ ನಗರ, ಹೊಸಮನೆ, ನವುಲೇ, ವಿನೋಬಾ ನಗರ, ಲಕ್ಷೀ ಟಾಕೀಸ್ ಹತ್ತಿರ, ಶರಾವತಿ ನಗರ, ಕಾಶಿಪುರ, ಬೊಮ್ಮನಕಟ್ಟೆ, ಸೌಳಂಗ ರಸ್ತೆ, ಅಂಗ್ಲಯ್ಯನ ಕೆರೆ,ಗಾಂಧಿಬಜಾರ್, ನೇತಾಜಿ ಸರ್ಕಲ್, ಜೊತೆಗೆ ಶಿವಮೊಗ್ಗ ಗ್ರಾಮಾಂತರದ ಅಯನೂರು , ಸವಳಂಗ,ಕುಂಸಿ,ಹೊಳೆಹುನ್ನೂರು,ಏರಿಯಾಗಳಲ್ಲಿ ಸಂದೀಪನ ಅನ್ ಲೈನ್ ಮಟ್ಕಾ ದಂಧೆಯ ಅಬ್ಬರ ಮುಗಿಲು ಮುಟ್ಟಿದೆ. ನಾನು ಮಟ್ಕಾ ದಂಧೆ ಬಿಟ್ಟೆ ಎಂದು ಜಪಿಸುತ್ತಿರುವ ಸಂದೀಪ ತನ್ನದೆ ಸಾರಥ್ಯದ ವರ್ಲಿ ಮುಂಬೈ, ಜನತಾ ಬಜಾರ್, ಶ್ರೀಲಕ್ಷ್ಮಿ, ಸೆಂಟ್ರಲ್ ಬಜಾರ್ ಅನ್ ಲೈನ್ ಮಟ್ಕಾ ಮಾರಿಯ ರುದ್ರನರ್ತನಕ್ಕೆ ಅದೆಷ್ಟೋ ಮನೆಯ ದೀಪಾ ಅರಿ ಹೋಗಿದೆ. ಸಂದೀಪ ಕೋಟಿ ಕೋಟಿ ಹಣ ಮಟ್ಕಾ ದಂಧೆಯಿಂದ ಲೂಟಿ ಮಾಡಿದ ಮೇಲೆ ತನ್ನ ದಂಧೆಯನ್ನು ನೋಡಿಕೊಳ್ಳಲು ಒಂದಷ್ಟು ಹುಡುಗರನ್ನು ನೇಮಿಸಿಕೊಂಡಿದ್ದಾನೆ ಇವರು ಅನ್ ಲೈನ್ ಮಟ್ಕಾ ದಂಧೆಯ ಜೋತೆ ಜೋತೆಗೆ ಮಾಮೂಲಿ ಮಟ್ಕಾ ದಂಧೆಯ ಪಟ್ಟಿಯನ್ನು ತಮ್ಮ ಏಜೆಂಟ್ ಗಳಿಂದ ಕಲೆಕ್ಟ್ ಮಾಡುವುದರಲ್ಲಿ ನಿಸ್ಸಿಮರಾಗಿದ್ದಾರೆ.
ಮಾಜಿ ಓಸಿ ಬೆಡ್ಡರ್ ಗೋಪಿಯ ಬಲಗೈ ಬಂಟ ಹರೀಷ ಯಾರು.? ಆತನ ಓಸಿ ದಂಧೆಯ ಗೇಮ್ ಫ್ಲಾನ್ ಏನು.? ಇವನನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ಸಂದೀಪ ಆಡುತ್ತಿರುವ ನಾಟಕವೇನು.ಸಂದೀಪನ ಕಡೆಯವರನ್ನು ಯಾರನ್ನೆ ಪೊಲೀಸರು ಹಿಡಿದರು ನಿಮ್ಮ ಬೆಡ್ಡರ್ ಯಾರು ಎಂದು ಕೇಳಿದರ ಮುಸ್ಲಿಂ ವ್ಯಕ್ತಿಯೊಬ್ಬನ ಹೆಸರು ಹೇಳಲು ಕಾರಣವನು.? ಹರೀಶನ ದಂಧೆಯ ಅಳ ಅಗಲವೇನು.?ಸಂದೀಪ ಓಸಿ ಬಿಟ್ಟನಾ? ತೆರೆಯಿಂದೆ ಸೂತ್ರದಾರನಾಗಿ ಆಡುತ್ತಿರುವ ನಾಟಕವೇನು ನಿರೀಕ್ಷಿಸಿ.. ಮುಂದಿನ ಸಂಚಿಕೆಯಲ್ಲಿ… ಸೂತ್ರದಾರಿ ಸಂದೀಪ.!
ಇದನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಪೋಲಿಸ್ ಇಲಾಖೆ ಸಂದೀಪ ಓಸಿ ದಂಧೆ ಬಿಟ್ಟಿದ್ದಾನೆ ಎನ್ನುವ ಗುಂಗಿನಲ್ಲಿದ್ದಾರೆ. ಹೊರತು ಡೆಂಜರಸ್ ಓಸಿ ಬೆಡ್ಡರ್ ಸಂದೀಪನ ಸಹವಾಸಕ್ಕೆ ಹೋಗುತ್ತಿಲ್ಲ. ಅದರಲ್ಲೂ ಕೆಲವು ಪೋಲಿಸರಂತು ಇವನ ಬೆನ್ನಗೆ ನಿಂತು ತಿಂಗಳ ಅಕ್ರಮ ಹಣಕ್ಕೆ ಪವಿತ್ರ ಖಾಕೀಗೆ ಕಲೆ ಅಂಟಿಸಿಕೊಳ್ಳುತ್ತಿದ್ದಾರೆ.ಸಂದೀಪನ ನಾಲ್ಕು ಅನ್ ಲೈನ್ ಮಟ್ಕಾ ದಂಧೆಯಿಂದ ಶಿವಮೊಗ್ಗದ ಸ್ವಾಸ್ಥ್ಯ ಹದಗೆಟ್ಟು ಹೋಗುತ್ತಿದ್ದರು ಪೋಲಿಸ್ ಇಲಾಖೆಯ ನಿರ್ಲಕ್ಷ್ಯವೇಕೆ.? ದಕ್ಷ ರಕ್ಷಣಾ ಅಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಅವರು ಈಗಾಗಲೇ ಬೇರು ಬಿಟ್ಟಿರುವ ಸಂದೀಪನ ಆನ್ಲೈನ್ ಮಟ್ಕಾ ದಂಧೆಯನ್ನು ಮಟ್ಟಹಾಕದೆ ಹೋದರೆ ಬಡವರ ಹಣ ಮಟ್ಕಾ ದಂಧೆಕೋರ ಸಂದೀಪನ ಪಾಲಾಗಿ ಅದೆಷ್ಟೋ ಮನೆಯ ದೀಪಾ ಅರಿ ಹೋಗುವುದರಲ್ಲಿ ಅನುಮಾನವಿಲ್ಲ.! ಕೂಡಲೇ ಸಂದೀಪನೆಂಬ ಮಟ್ಕಾ ದಂಧೆಕೋರನ ದಂಧೆಯ ಅಳ ಆಗಲವೇನು.ಈತನ ಆನ್ಲೈನ್ ಮಟ್ಕಾ ದಂಧೆಯ ಸಂಪೂರ್ಣ ಮಾಹಿತಿ ಓಸಿ ದಂಧೆ ಬಿಟ್ಟೆ ಎಂದು ಅವನು ಮಾಡಿದ ಪ್ಲಾನ್ ಏನು.!ಇವನ ಬೆನ್ನಿಗೆ ನಿಂತ ಐದು ಮಂದಿ ಸಬ್ ಬೆಡ್ಡರ್ ಗಳು ಯಾರು.? ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ..
ದೀಪು ಮತ್ತು ಹರೀಶನೇಬ ಇಬ್ಬರು ಸಂದೀಪನ ಬಲಗೈ ಬಂಟರು.! ಇವರನ್ನೆ ತನ್ನ ಆನ್ಲೈನ್ ಮಟ್ಕಾ ದಂಧೆ ಮತ್ತು ಹತ್ತು ಹಲವು ಓಸಿ ಮಾರ್ಕೆಟ್ ನ ಪಟ್ಟಿಯನ್ನು ತರಲು ನೇಮಿಸಿಕೊಂಡಿದ್ದಾನೆ.ಇವರಿಬ್ಬರು ಕೂಡ ಸಂದೀಪನ ಅಷ್ಟೂ ಆದೇಶವನ್ನು ಪಾಲಿಸಿ ರಾತ್ರಿ ಹಗಲೆನ್ನದೆ ಮಟ್ಕಾ ದಂಧೆಯಲ್ಲಿ ಮುಳುಗಿಹೋಗಿ ಹೋಗಿದ್ದಾರೆ. ಸಂದೀಪನ ಪರಮಾಪ್ತ ಶಿಷ್ಯರಾಗಿದ್ದಾರೆ. ಪೊಲೀಸರು ಇವರನ್ನು ತಮ್ಮದೆ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದರೆ ಸಂದೀಪನ ಅಷ್ಟೂ ಅಕ್ರಮ ಮಟ್ಕಾ ದಂಧೆಯ ವಹಿವಾಟು ಬಯಲಾಗುತ್ತದೆ…