ಹೊಸನಗರ ಬಿಜೆಪಿ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ
ಅಶ್ವಸೂರ್ಯ/ಹೊಸನಗರ: ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಇಂದು (ಜನವರಿ 12, ಭಾನುವಾರ) ಸ್ವಾಮಿ ವಿವೇಕಾನಂದ ಜಯಂತಿ. ಪ್ರತಿವರ್ಷದಂತೆ ಈ ಬಾರಿಯು ಹೊಸನಗರ ಬಿಜೆಪಿಯ ಮಂಡಲ ವತಿಯಿಂದ ಕಾರ್ಯಕ್ರಮಗಳನ್ನು ಆಚರಿಸಲಾಯಿತ್ತು.
ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ವರ್ಷ ದೆಹಲಿಯ ಭಾರತ್ ಮಂಟಪದಲ್ಲಿ ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದವನ್ನು ಆಯೋಜಿಸಿತ್ತು. ಈ ಮೂಲಕ ಯುವ ಸಬಲೀಕರಣ ಮತ್ತು ನಾಯಕತ್ವಕ್ಕೆ ಒತ್ತು ನೀಡಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಯುವ ಪೀಳಿಗೆಯ ವೈಯಕ್ತಿಕ ಬೆಳವಣಿಗೆ, ಸ್ವಯಂ ಸುಧಾರಣೆ ಹಾಗೂ ಸಾಮಾಜಿಕ ಪ್ರಗತಿಯತ್ತ ಶ್ರಮಿಸಲು ಪ್ರೋತ್ಸಾಹ ಹಾಗೂ ಯುವಕರ ಏಳಿಗಾಗಿ ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳ ಇಂದಿಗೂ ಪ್ರಸ್ತುತ ಎನಿಸಿವೆ ಎಂದು ಹೊಸನಗರ ಬಿಜೆಪಿ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯ ಸಂಧರ್ಭದಲ್ಲಿ ಯುವಜನತೆಗೆ ತಿಳಿಸಲಾಯಿತ್ತು.
ಈ ಒಂದು ಕಾರ್ಯಕ್ರಮದಲ್ಲಿ ಪ್ರಮುಖರಾದ. ಎನ್ ಆರ್ ದೇವಾನಂದ್, ಮಲ್ಲಿಕಾರ್ಜುನ್, ಶ್ರೀಧರ್ ಉಡುಪ, ಹಾಲ್ಗದ್ದೆ ಉಮೇಶ್, ಸುಧಾಕರ್, ಶ್ರೀಪತಿ ರಾವ್. ಯುವ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ್ ಗಂದರಳ್ಳಿ,, ಪ್ರಧಾನ ಕಾರ್ಯದರ್ಶಿಗಳಾದ ಅಂಕಿತ ಮಕೇರಿ, ಅಭಿಲಾಶ್ ಚಿಕ್ಕಮಣತಿ. ಸೋಶಿಯಲ್ ಮೀಡಿಯಾ ಗಗನ್ ಎಲ್ ಗುಡ್ಡೇಕೊಪ್ಪ, ಯುವ ಮೋರ್ಚಾ ಅಧ್ಯಕ್ಷರಾದ ಮಹೇಂದರ್ ಹಾಗೂ ಪಕ್ಷದ ವಿವಿಧ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.