ಹೊಸ ವರ್ಷದ ಸಂಭ್ರಮದ ಮಧ್ಯೆ ಅಪಘಾತಕ್ಕೆ ಬಲಿಯಾಗಿ ಮಸಣ ಸೇರಿದ ಯುವಕ.!ಕುಡಿದು ಚಾಲನೆ ಮಾಡಿದ ತಪ್ಪಿಗೆ ಬಲಿ ಅಯ್ತಾ ಒಂದು ಜೀವ.!?
ಅಶ್ವಸೂರ್ಯ/ಶಿವಮೊಗ:ಹೊಸ ವರ್ಷದ ಆಚರಣೆಯ ಸಂಭ್ರಮದ ನಡುವೆ ಶಿವಮೊಗ್ಗ ನಗರದ ಸಿದ್ಧಯ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ದ್ವಿಚಕ್ರ ಸವಾರನೊಬ್ಬ ಬಲಿಯಾಗಿದ್ದಾನೆ.! ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆಯ ಸರ್ಕಲ್ ಬಳಿಕ ತಡರಾತ್ರಿ ಈ ಘಟನೆ ಸಂಭವಿಸಿದ್ದು ದೂರು ದಾಖಲಾಗಿದೆ.
ಸರ್ಕಲ್ ಬಳಿ ಕಾರು ಅಪಘಾತದ ತೀವ್ರತೆಗೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಓರ್ವ ಯುವಕ, ಇಬ್ಬರು ಯುವತಿಯರಿದ್ದರು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಮೊಪೆಡ್‌ನಲ್ಲಿದ್ದ ಯುವಕನ ತಲೆಗೆ ತೀವ್ರ ಪೆಟ್ಟಾಗಿದ್ದು ಆತ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ನಗರದಲ್ಲಿ ಹೊಸವರ್ಷದ ಸಂಭ್ರಮದ ನಡುವೆ ಯುವಕನೊಬ್ಬ ಬಲಿಯಾಗಿರುವುದು ದುರಂತವೆ ಹೌದು.
ಮೃತ ಯುವಕನ ಹೆಸರು ಇನ್ನಷ್ಟೆ ತಿಳಿದು ಬರಬೇಕಿದೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆ ನೆಡೆದ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು ಕಾರಿನಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ತಿಳಿಗೊಳಿಸಿದ್ದರು.
.