Headlines

ಬೆಂಗಳೂರು: ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು ಎತ್ತುವಳಿಗೆ ಇಳಿದ ರೌಡಿ ಶೀಟರ್ ಕುಣಿಗಲ್ ಸೂರಿ ವಿರುದ್ಧ ದೂರು ದಾಖಲು!

ಅಶ್ವಸೂರ್ಯ/ಶಿವಮೊಗ್ಗ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ರೌಡಿಶೀಟರ್ ಕುಣಿಗಲ್ ಸೂರಿ, ಹಣ ನೀಡದಾಗ ಆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ರೌಡಿ ಶೀಟರ್ ಒಬ್ಬ ಹಣ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ರೌಡಿಶೀಟರ್ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ಎಂಬಾತ ಖಾಸಗಿ ಫೋಟೋ ಇಟ್ಟುಕೊಂಡು ಹಣ ಸುಲಿಗೆ ಮಾಡುತ್ತಿದ್ದಾನೆ ಎಂದು ಮಾಜಿ ಯೋಧನ ಪತ್ನಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರೌಡಿಶೀಟರ್ ಕುಣಿಗಲ್ ಸೂರಿ ವಿರುದ್ಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ.

ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ರೌಡಿಶೀಟರ್ ಕುಣಿಗಲ್ ಸೂರಿ, ಹಣ ನೀಡದೆ ಹೋದರೆ ಆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕ್ಯಾಬ್ ಡ್ರೈವರ್ ಎಂದು ಪರಿಚಯ
ಕೆಲ ವರ್ಷದ ಹಿಂದೆ ಅಂಧ್ರಹಳ್ಳಿಯಲ್ಲಿ ವಾಸವಿದ್ದ ಕುಣಿಗಲ್ ಸೂರಿ, ಸಂತ್ರಸ್ತ ಮಹಿಳೆಯ ಬಿಲ್ಡಿಂಗ್​ನಲ್ಲಿ ಲೀಸ್​ಗೆ ಇದ್ದ. ಕ್ಯಾಬ್ ಡ್ರೈವರ್ ಎಂದು ಪರಿಚಯ ಮಾಡಿಕೊಂಡಿದ್ದ ಈತ, ಮಹಿಳೆಯ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ. ನಂತರ ಮನೆಯನ್ನು ಖಾಲಿ ಮಾಡಿದ್ದ ಕುಣಿಗಲ್ ಸೂರಿ, ಮಹಿಳೆಯ ಖಾಸಗಿ ಪೋಟೋವನ್ನು ಸೆರೆ ಹಿಡಿದಿದ್ದ. ಇನ್ನೂ ಅ ಪೋಟೋ ತೋರಿಸಿ ಮಹಿಳೆಯನ್ನು ಬೆದರಿಸಿ ಹಣ ಪಡೆಯುತ್ತಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಮೊಬೈಲ್, ಕಾರು, ಚಿನ್ನದ ಕಿತ್ತುಕೊಂಡು ಪರಾರಿ.!
ಆತ ರೌಡಿಶೀಟರ್ ಎಂದು ಗೊತ್ತಾಗಿ ಮಹಿಳೆ ಸೂರಿಯಿಂದ ದೂರವಾಗಿದ್ದಾರೆ. ನವೆಂಬರ್ 30ರಂದು ವಾಲ್ಮೀಕಿ ಸರ್ಕಲ್ ಬಳಿ ಮನೆಗೆ ಹೋಗುತ್ತಿದ್ದಾಗ ಅಡ್ಡ ಹಾಕಿದ್ದ ಸೂರಿ ಹಣ ಕೇಳಿದ್ದಾನೆ. ಹಣವಿಲ್ಲ ಎಂದಿದ್ದಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೊಬೈಲ್, ಕಾರು ಹಾಗೂ 18 ಗ್ರಾಂ ಚಿನ್ನದ ಓಲೆ ಕಿತ್ತುಕೊಂಡು ಪರಾರಿ ಆಗಿದ್ದ ಎಂದು ಮಹಿಳೆ ದೂರಿದ್ದಾರೆ.ತುಮಕೂರು ಜೈಲಿನಲ್ಲಿರುವ ಕುಣಿಗಲ್ ಸೂರಿ
ಹಣ ಕೊಡದೆ ಇದ್ರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಖಾಸಗಿ ಫೋಟೋಗಳನ್ನು ಅಪರಿಚಿತ ನಂಬರ್​ಗಳಿಗೆ ಕಳುಹಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ರೌಡಿಶೀಟರ್ ಸೂರಿ ವಿರುದ್ಧ ಬ್ಲಾಕ್​ಮೇಲ್, ಬೆದರಿಕೆ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಬ್ಯಾಡರಹಳ್ಳಿ ಠಾಣೆಯಲ್ಲಿ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ವಿರುದ್ಧ ಪ್ರಕರಣ ದಾಖಲಗಿದೆ. ತುಮಕೂರು ಜೈಲಿನಲ್ಲಿರುವ ಕುಣಿಗಲ್ ಸೂರಿಯನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

}

Leave a Reply

Your email address will not be published. Required fields are marked *

Optimized by Optimole
error: Content is protected !!