“ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ.” ನಿರ್ದೇಶಕರ ಚುನಾವಣೆ ಮತ್ತೆ ಗೆಲುವು ಸಾಧಿಸಿದ ಎಸ್ ಕೆ ಮರಿಯಪ್ಪ ,ಉಮಶಂಕರ್ ಉಪಾಧ್ಯ, ಚಾಲುಕ್ಯ ಸೂರಿ,ರಂಗನಾಥ್…..
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ “ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ, 2024 ನೇ ಸಾಲಿನ ನಿರ್ದೇಶಕರ ಚುನಾವಣೆಯು ಡಿಸೆಂಬರ್ “29” ರಂದು ನೆಡೆಯಿತು ಈ ಬಾರಿಯ ಚುನಾವಣೆಯು ಸಾಕಷ್ಟು ಬಲಾ ಬಲದಿಂದ ಕೂಡಿತ್ತು. ಬ್ಯಾಂಕಿನ ಮತದಾನ ಹೊಂದಿದ ಸದಸ್ಯರಲ್ಲಿ ನೂರಕ್ಕೆ 90% ಮತದಾರರು ಹುಮ್ಮಸ್ಸಿನಿಂದ ಮತದಾನದಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರವಾಗಿ ಮತಚಲಾಯಿಸಿದರು. ಮತದಾನ ನೆಡೆದ ದಿನವೆ ಮತ ಏಣಿಕೆಯ ಪ್ರಕ್ರಿಯೆ ಕೂಡ ರಾತ್ರಿ 10ಗಂಟೆ ಸಯಮಾರಿಗೆ ಪೂರ್ಣಗೊಂಡಿದ್ದು ಅದೇ ಹಳೆಯ ಮುಖಗಳ ಜೊತೆಗೆ ನಾಲ್ಕು ಮಂದಿ ಹೊಸ ಮುಖಗಳು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಬಾರಿಯ ಚುನಾವಣೆ ಭರ್ಜರಿಯಾಗಿಯೆ ನೆಡೆದಿದ್ದು ಒಂದಷ್ಟು ಮಂದಿ ಮತದಾರರ ಕಿಸೆಗೆ ಕೆಲವು ಅಭ್ಯರ್ಥಿಗಳ ಹಣ ಕೂಡ ಜಮೆಯಾಗಿದ್ದರಿಂದ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ಹಣ ಹೆಂಡವು ಬಿಕರಿ ಆಯಿತು.! ಒಟ್ಟಿನಲ್ಲಿ ಅಂತಿಮವಾಗಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಗೆಲುವು ಸಾಧಿಸಿದವ ವಿವರ ಈ ಕೆಳಕಂಡಂತಿವೆ…