Headlines

ಸುಂದರಿ ಹಿಂದೆ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!?

ಸುಂದರಿ ಹಿಂದೆ ಹೋಗಿ ‘ಹನಿ’ ಸವಿಯಲು ಹೋಗಿ ಮನಿ ಕಳೆದುಕೊಂಡ ಅಂಕಲ್.!?

ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಸುಂದರಿಯೊಬ್ಬಳು ಕರೆದಳು ಅಂತಾ ಆಕೆಯ ಹಿಂದೆ ಜೊಲ್ಲು ಸೇರಿಸಿಕೊಂಡು ಹೋದ ಅಂಕಲ್ ಒಬ್ಬರಿಗೆ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.!
ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ.ಇಂತಹುದೇ ಘಟನೆಗೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಸುಂದರ ಯುವತಿಯೊಬ್ಬಳು ಕರೆದಳು ಎಂದು ಆಕೆಯ ಬೆನ್ನತ್ತಿ ಹೋದ ಅಂಕಲ್ಲಿಗೆ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಒಂದು ವರ್ಷದ ಲವ್ ಕಹಾನಿ

ಹೌದು ಇದು 57 ವರ್ಷದ ಅಂಕಲ್ ಹಾಗೂ 20 ವರ್ಷದ ಸುಂದರಿಯ ಒಂದು ವರ್ಷದ ಲವ್ ಕಹಾನಿ ಇದು. ನಯನಾ ಎನ್ನುವ ಸುಂದರ ಯುವತಿ ಕೇಳಿದ್ಲು ಅಂತಾ ಅಂಕಲ್ ಆಗಾಗ ಹಣ ಕೊಡುತ್ತಿದ್ದರಂತೆ. ಸಿವಿಲ್‌ ಕಂಟ್ರಾಕ್ಟರ್ ಆಗಿರೋ ಅಂಕಲ್ ಶ್ರೀಮಂತ ವ್ಯಕ್ತಿ ಅಂತಾ ಪ್ಲಾನ್‌ ಟಾರ್ಗೆಟ್ ಮಾಡಿದ ಸುರ ಸುಂದರಿ ನಯನ ಟೀ‌ ಕುಡಿದುಕೊಂಡು ಹೋಗಿ ಅಂತಾ ಮನೆಗೆ ಕರೆಯುತ್ತಾಳೆ. ಸುಂದರ ಯುವತಿ ಕರೆದ್ಲೂ ಅಂತ ಮನೆಗೆ ಬಂದಾಗ ಅವರನ್ನು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್ ಒಂದು ನಾವು ಪೊಲೀಸರು ಎಂದು ಹೇಳಿಕೊಂಡು ಹಣ, ಮೊಬೈಲ್ ಹಾಗೂ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಾವು ಪೊಲೀಸರು ಅಂತ ಬ್ಯೂಟಿ ಗ್ಯಾಂಗ್ ಎಂಟ್ರಿ ಕೊಟ್ಟಿದೆ.!
ಯುವತಿ ನಯನಾ ಕರೆದ್ಲೂ ಅಂತಾ ಮನೆಗೆ ಬಂದ ಅಂಕಲ್ ಒಳ್ಳೆ ಮೂಡ್ನಲ್ಲಿ ಇರೋ ವೇಳೆ ಪೊಲೀಸರು ಅಂತ ಬ್ಯೂಟಿ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಮೊದಲೇ ಮಾಡಿದ್ದ ಪ್ಲ್ಯಾನ್ ನಂತೆ ಸುಂದರಿ ಅಂಡ್ ಗ್ಯಾಂಗ್ ಅಂಕಲ್ ಬಳಿ ಇರೋದನೆಲ್ಲಾ ದೋಚಿದ್ದಾರೆ. ವ್ಯಭಿಚಾರ ನಡೆಸ್ತಿದ್ದಾರ ಅಂತ ಪೊಲೀಸರ ಸೋಗಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಕೆಳಗಡೆ ಮೇಡಂ ಇದಾರೆ ಇಲ್ಲೆ ಸೆಟಲ್ ಮಾಡ್ಕೋ ಅಂತ ಅಂಕಲ್ ಗೆ ಬೆದರಿಸಿದ್ದಾರೆ. ಬೆದರಿರ ಅಂಕಲ್ ಜೇಬಿನಲ್ಲಿದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26 ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷದ ರೂಪಾಯಿ ಮೌಲ್ಯದ ಚಿನ್ನದ ಸರ, ಉಂಗುರ ಬ್ರಾಸ್ ಲೇಟ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ದಿಕ್ಕುತೋಚದ ಅಂಕಲ್ ನಂತರ ಯುವತಿಯ ಬಳಿ ಹೋಗಿ ಬಾ ಹೋಗಿ ಕಂಪ್ಲೈಂಟ್ ಕೊಡೋಣ ಅಂತ ಕರೆದಿದ್ದಾರೆ. ಈ ವೇಳೆ ನಯನಾ ಹೊಸ ವರಸೆ ತೆಗೆದಿದ್ದಾಳೆ. ಸ್ಟೇಷನ್ ಕಂಪ್ಲೈಂಟ್ ಅಂತ ಹೋದ್ರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತ ಅಂಕಲ್‌ನ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದಾದ ನಂತರ ಧೈರ್ಯಮಾಡಿ ಅಂಕಲ್ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಸ್ನೇಹಿತನೊಬ್ಬನ ಮೂಲಕ 57 ವರ್ಷದ ಕಂಟ್ರಾಕ್ಟರ್‌ಗೆ ನಯನ ಎಂಬ ಯುವತಿ ಪರಿಚಯವಾಗಿದ್ದು ಆರಂಭದಲ್ಲಿ ಆಕೆ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ ನಂತರ10 ಸಾವಿರ ಹಣ ಹಾಕಿಸಿಕೊಂಡಿದ್ದಾಳೆ. ಬಳಿಕ ನಿತ್ಯ ಕಾಲ್ ಮಾಡಿ ಮನೆ ಬನ್ನಿ ಅಂತ ಕರೆಯುತ್ತಿದ್ದಳಂತೆ.!

ಡಿಸೆಂಬರ್ 9ರಂದು ಬೆಳಿಗ್ಗೆ ಬೈಕ್ ನಲ್ಲಿ ಹೋಗ್ತಿದ್ದ ವೇಳೆ, ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ ಕರೆದು ಮಾತಡಿಸಿದ್ದಾಳೆ. ಇಲ್ಲೇ ಮನೆ ಇದೆ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮನೆಗೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿ ನಾವು ಕ್ರೈಂ ಪೊಲೀಸ್ ಎಂದು ಬೆದರಿಸಿ ಎರಡು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು ನಯನ ಎಸ್ಕೇಪ್ ಆಗಿದ್ದಾಳೆ.
ಸದ್ಯ ಬ್ಯಾಡರಹಳ್ಳಿ ಪೊಲೀಸರು ನಯನಾಳ ಸುಲಿಗೆ ಗ್ಯಾಂಗಿನ ಸಂತೋಷ್, ಅಜಯ್ ಹಾಗೂ ಜಯರಾಜ್ ಎಂಬುವವರನ್ನು ಕೆಡವಿಕೊಂಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಸುಂದರಿ ನಯನಳಿಗಾಗಿ ಪೊಲೀಸರು ಭಲೇ ಬಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!