ಕೋಲಾರದ ರಾಜಕೀಯ ವ್ಯಕ್ತಿಯಿಂದ ಶ್ವೇತಾಗೆ ಥಾರ್ ಜೀಪ್ ಗಿಫ್ಟ್.! ʼಮೈಸೂರ್‌ಪಾಕ್ʼ ನನ್ನು ಖೆಡ್ಡಾಕ್ಕೆ ಕೆಡವಲು ಶ್ವೇತಾ ಪ್ಲ್ಯಾನ್!
ಅಶ್ವಸೂರ್ಯ/ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ವರ್ತೂರ್ ಪ್ರಕಾಶ್ ಅಪ್ತೆ ಎನ್ನಲಾಗುತ್ತಿರುವ ಶ್ವೇತಾ ಗೌಡಗೆ ಕೋಲಾರದ ಪ್ರಮುಖ ರಾಜಕೀಯ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದ ವಿಚಾರ ಈಗ ತನಿಖೆಯಿಂದ ಬಯಲಾಗಿದೆ.
ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿದ್ದು ಕೋಲಾರ ರಾಜಕೀಯ ನಾಯಕನೊಬ್ಬನನ್ನು ಇತ್ತೀಚೆಗಷ್ಟೇ ಶ್ವೇತಾಗೌಡ ಪರಿಚಯ ಮಾಡಿಕೊಂಡಿದ್ದಳಂತೆ. ಫೇಸ್‌ಬುಕ್ ಮೂಲಕ ಪರಿಚವಾಗಿ ಕೋಲಾರದಲ್ಲೇ ಶ್ವೇತಾಗೌಡ ಭೇಟಿಯಾಗಿದ್ದಳಂತೆ.
ಈ ವೇಳೆ ಕೋಲಾರದ ವೆಂಕಟೇಶ್ವರ ಸ್ವೀಟ್‌ನಲ್ಲಿ ರಾಜಕೀಯ ಮುಖಂಡ ಮೈಸೂರು ಪಾಕ್ ತಂದು ಕೊಟ್ಟಿದ್ದ. ಈ ಕಾರಣಕ್ಕೆ ಆ ಮುಖಂಡನ ಹೆಸರನ್ನು ಪೋನ್ ನಲ್ಲಿ ʼಮೈಸೂರು ಪಾಕ್ʼ ಎಂದು ಸೇವ್ ಮಾಡಿದ್ದಳಂತೆ ಶ್ವೇತಾ.!
ವ್ಯವಹಾರದ ನೆಪದಲ್ಲಿ ಆ ಮುಖಂಡನಿಗೆ ಶ್ವೇತಾ ಗೌಡ ತುಂಬಾ ಅಪ್ತವಾಗಿದ್ದಳಂತೆ. ಮಧುರ ಸ್ನೇಹದ ಕಾಣಿಕೆಯಾಗಿ ಶ್ವೇತಾಗೆ ರಾಜಕೀಯ ಮುಖಂಡ ಹೊಸ ಥಾರ್ ಜೀಪ್ ಕೊಡಿಸಿದ್ದನಂತೆ. ಪೊಲೀಸರು ಬಂಧನದ ವೇಳೆ ಅದೇ ಜಿಪ್ ನಲ್ಲಿ ಮೈಸೂರಿನಲ್ಲಿ ಶ್ವೇತಾ ಸಿಕ್ಕಿಬಿದ್ದಿದ್ದಳು.
ಪೊಲೀಸರು ತನಿಖೆ ನಡೆಸಿದ ವೇಳೆ ಆ ಮುಖಂಡನನ್ನು ಖೆಡ್ಡಾಗೆ ಬೀಳಿಸಲು ಸಿದ್ದತೆ ನಡೆಸಿದ್ದ ವಿಚಾರ ಬೆಳಕಿಗೆ ಬಂದಿದೆ. ಖೆಡ್ಡಾಗಿ ಬೀಳಿಸಲು ಎಲ್ಲಾ ಪ್ಲಾನ್‌ಗಳನ್ನು ಶ್ವೇತಾ ಮಾಡಿಕೊಂಡಿದ್ದಳಂತೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಮುಖಂಡನನ್ನು ಖೆಡ್ಡಾಗೆ ಬಿಳಿಸೋಕೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದಾಗ ಜ್ಯುವೆಲ್ಲರಿಯಿಂದ ಚಿನ್ನ ಪಡೆದು ವಂಚನೆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು.
ಮೈಸೂರು ಪಾಕ್ ಗೆ ಖೆಡ್ಡ ತೊಡಲು ಹೋದ ಶ್ವೇತಾ ಗೌಡ ಪೋಲಿಸರ ಅತಿಥಿಯಾಗಿದ್ದು ಇನ್ನಷ್ಟು ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.