SHOCKING NEWS : ತಂದೆಯ ಪಿಂಚಣಿ, ಬರುವ ಹಣಕ್ಕಾಗಿ ಸೋದರರನ್ನೇ ಹೆಣವಾಗಿಸಿದ ಸಹೋದರಿ.!!
ASHWASURYA/SHIVAMOGGA
ಆಂಧ್ರಪ್ರದೇಶ: ಕಾಲ ಬದಲಾಗಿದೆ.ಸಂಬಂಧಗಳಿಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಂಬಂಧಿಗಳು, ಒಡಹುಟ್ಟಿದವರು,ನನ್ನವರು ಎನ್ನುವ ಪ್ರೀತಿ ಇಲ್ಲದೇ ಹಣಕ್ಕಾಗಿ ಪ್ರಾಣ ತೆಗೆಯುವ ಕೃತ್ಯಕ್ಕಿಳಿಯುತ್ತಿದ್ದಾರೆ. ಇಂಥಹದ್ದೇ ಘನ ಘೋರವಾದ ಕೃತ್ಯವೊಂದು ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ತಂದೆಯ ಆಸ್ತಿ,ಕರ್ತವ್ಯ ಮುಗಿಸಿದ ನಂತರದಲ್ಲಿ ಬರುವ ಹಣ ಮತ್ತು ಪಿಂಚಣಿ ಪಡೆಯಲು ಸಹೋದರಿಯೊಬ್ಬಳು ತನ್ನ ಸೋದರರನ್ನೇ ಹತ್ಯೆ ಮಾಡಿರುವ ಪ್ರಕರಣವೊಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪಲ್ನಾಡು ಜಿಲ್ಲೆಯ ನಕರಿಕಲ್ಲು ಯಾನಾಡಿ ಕಾಲೋನಿ ನಿವಾಸಿ ಪೌಳಿರಾಜು ಅವರು ನಕರಿಕಲ್ಲು ಗಿರಿಜನ ಕಲ್ಯಾಣ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಸರ್ಕಾರಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ವರ್ಷದ ಜನವರಿಯಲ್ಲಿ ಪಾರ್ಶ್ವವಾಯು ಕಾಯಿಲೆಯಿಂದ ನಿಧನರಾಗಿದ್ದರು.ತಂದೆಯ ಸಾವಿನ ನಂತರದಲ್ಲಿ ಅಪ್ಪನ ಹಣ ಆಸ್ತಿಗಾಗಿ ಸಹೋದರ ಸಹೋದರಿ ನಡುವೆ ಕಿತ್ತಾಟವಾಗಿದೆ.ಇದೆ ಸಂಧರ್ಭದಲ್ಲಿ
ಬೊಳ್ಳಪಲ್ಲಿ ಮಂಡಲದ ಬಂಡ್ಲಮೋಟು ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಮೃತ ಪೌಳಿರಾಜು ಅವರ ಪುತ್ರರಲ್ಲಿ ಒಬ್ಬರಾದ ಗೋಪಿಕೃಷ್ಣ ಅವರು ಕೆಲವು ದಿನಗಳಿಂದ ಕರ್ತವ್ಯಕ್ಕೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದರು. ಕಾರ್ಯಚರಣೆಗೆ ಇಳಿದ ಪೊಲೀಸರಿಗೆ ಆಘಾತ ಎದುರಾಗಿತ್ತು.!ಇಬ್ಬರು ಸಹೋದರ ಹತ್ಯೆಯ ಘಟನೆ ಬೆಳಕಿಗೆ ಬಂದಿದೆ.ಈ ಪ್ರಕರಣದ ಬೆನ್ನಿಗೆ ಬಿದ್ದ ಪೊಲೀಸರಿಗೆ
ಸಹೋದರರಾದ ಗೋಪಿಕೃಷ್ಣ, ದುರ್ಗಾ ರಾಮಕೃಷ್ಣ ಮತ್ತು ಸೋದರಿ ಕೃಷ್ಣವೇಣಿ ತಮ್ಮ ತಂದೆಯ ಪಿಂಚಣಿ ಮತ್ತು ಆಸ್ತಿಯ ಹಕ್ಕನ್ನು ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಪೈಪೋಟಿ ಬಿದಿದ್ದರು. ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ನಂತರ, ತಮ್ಮ ತಂದೆಗೆ ಸರ್ಕಾರದಿಂದ ಕನಿಷ್ಠ 40 ಲಕ್ಷ ರೂ. ಬರುತ್ತದೆ ಎಂದು ನಂಬಿದ್ದರು.
ಕೃಷ್ಣವೇಣಿ ನಾನು ತಂದೆಯನ್ನು ನೋಡಿಕೊಂಡಿದ್ದೇನೆ ಹಾಗಾಗಿ ತಂದೆಯ ಪಿಂಚಣಿ ಮತ್ತು ಹಣಕ್ಕೆ ನಾನು ಅರ್ಹಳು ಎಂದು ಹೇಳಿಕೊಂಡರೆ, ಆಕೆಯ ಸಹೋದರರು ತಾವು ಆಸ್ತಿ, ಹಣವನ್ನು ಹಂಚಿಕೊಳ್ಳಲು ಅರ್ಹರು ಎಂದು ಹೇಳಿದ್ದರು. ಕೃಷ್ಣವೇಣಿ, ಗ್ರಾಮದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳಂತೆ ಆತನ ನೆರವಿನಿಂದ ತನ್ನ ಸಹೋದರರನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದು ಇದಕ್ಕೆ ಪುಷ್ಟಿ ನೀಡುವ ಸಾಕಷ್ಟು ವಿಷಯಗಳು ಪೊಲೀಸರಿಗೆ ತನಿಖೆಯ ವೇಳೆ ಲಭಿಸಿದೆಯಂತೆ.!
ನವೆಂಬರ್ 26ರಂದು ನಕರಿಕಲ್ಲು ಬಳಿ ತನ್ನ ಕಿರಿಯ ಸಹೋದರ ರಾಮಕೃಷ್ಣನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಳು. ಈ ತಿಂಗಳ 10 ರಂದು ಆಕೆ ತನ್ನ ಅಣ್ಣ ಗೋಪಿಕೃಷ್ಣನನ್ನು ಹಗ್ಗದಿಂದ ಕತ್ತು ಹಿಸುಕಿ ಶವವನ್ನು ವಿಲೇವಾರಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಕೃಷ್ಣವೇಣಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಮುಂದಾಗಿದ್ದು ಇನ್ನಷ್ಟು ಮಾಹಿತಿಯ ಜೊತೆಗೆ ಇಬ್ಬರ ಮೃತದೇಹ ಪತ್ತೆಯಾಗಬೇಕಿದೆ.