“ದಾಸರಹಳ್ಳಿ” ಟೀಸರ್ ರಿಲೀಸ್.ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಧರ್ಮ ಕೀರ್ತಿರಾಜ್ ದರ್ಬಾರ್.
ಅಶ್ವಸೂರ್ಯ/ಶಿವಮೊಗ್ಗ: ಮಧ್ಯಪಾನದ ಸುತ್ತ ಕಥೆಯ ಚಿತ್ತ
ಕುಡಿತದ ವಿರುದ್ಧ ಹೋರಾಡುವ ನಾಯಕನ ಕಥೆ ‘ದಾಸರಹಳ್ಳಿ’ ಸಿನಿಮಾ, ಧರ್ಮಕೀರ್ತಿ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರ ಈಗಾಗಲೇ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
ನಾಯಕ ನಟ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದು , ಬೆಳ್ಳಿ ತೆರೆಯ ಮೇಲೆ ಭರ್ಜರಿಯಾಗಿ ಕಾಣಲು ಅಣಿಯಾಗಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಎಂ.ಆರ್.ಶ್ರೀನಿವಾಸ್ ದಾಸರಹಳ್ಳಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮತ್ತು ಶಿವಮೊಗ್ಗದ ಯುವ ನಿರ್ಮಾಪಕ ಉಮೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತ ಮತ್ತು ಮಲೆನಾಡು ತವರೂರು ಶಿವಮೊಗ್ಗದ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡಿದೆ.
ತಾರಾಬಳಗದಲ್ಲಿ ಹಿರಿಯ ಕಲಾವಿದ ಹೆಸರಾಂತ ಖಳನಾಯಕರಾಗಿದ್ದ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್,ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನೇಹಾ, ಹಿರಿಯ ನಟ ಉಮೇಶ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ , ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್,
ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಾಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್,ಅರಸಿಕೆರೆ ರಾಜು, ಮತ್ತು 150ತ್ತಕ್ಕೂ ಹೆಚ್ಚು ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟು ದೊಡ್ಡ ಬಳಗ ಒಂದೇ ಸಿನಿಮಾದಲ್ಲಿ ಇರುವುದೇ ವಿಶೇಷವಾಗಿದ್ದು.
ಚಿತ್ರದ ಟ್ರೈಲರ್
ಈ ಚಿತ್ರ ಉಮೇಶ್ ನಿರ್ಮಾಣದಲ್ಲಿ ಎಂ.ಎಸ್. ತ್ಯಾಗರಾಜ ಸಂಗೀತ, ನಾರಾಯಣ್ ಮತ್ತು ಬಾಲು ಛಾಯಾಗ್ರಹಣ, ಆರ್.ಡಿ.ರವಿ (ದೊರೆರಾಜ್) ಸಂಗೀತ, ಥ್ರಿಲ್ಲರ್ ಮಂಜು , ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ, ಸಾಹಸ, ಶಿವರಾಜ್ ಚಿತ್ರಕಥೆ, ಸಂಭಾಷಣೆ, ಸಾಯಿ ಕೃಷ್ಣ ಹೆಬ್ಬಾಳ, ತಾಂತ್ರಿಕ ನಿರ್ದೇಶನ ಶರಣ್ ಗದ್ವಾಲ್, ಗಹನ್ ನಾಯಕ್ ಸಹ ನಿರ್ದೇಶನವಿದೆ.