ಶಿವಮೊಗ್ಗದ ಅಕ್ರಮ ದಂಧೆ, ಮರಳು ಮಾಫಿಯಾ, ಅಕ್ರಮ ಕಲ್ಲು ಕ್ವಾರೆ ದಂಧೆಗೆ ತಂದೆಯಾರು.?
ಅಶ್ವಸೂರ್ಯ/ಶಿವಮೊಗ್ಗ: ಬಹುಶಃ ಇದು ಈ ಜನ್ಮದಲ್ಲಿ ಬಗೆ ಹರಿಯುವಂತಹ ಸಮಸ್ಯೆಯಲ್ಲ ಅನ್ನಿಸುತ್ತದೆ. ಶಿವಮೊಗ್ಗ ನಗರದ ಮಂಡ್ಲಿ , ಬೈಪಾಸ್ ರಸ್ತೆ ,RML ನಗರ,OT ರೋಡ್, ಅಣ್ಣಾನಗರ, ಮಿಳಘಟ್ಟ, ಮತ್ತೂರು,ಕಡೆಕಲ್,ಹೊಸಳ್ಳಿ , ಕುಸ್ಕೂರು, ಗಾಜನೂರು, ಸಕ್ರೆಬೈಲ್ , ಭಾಗದಲ್ಲಿ ಮತ್ತೆ ಅಕ್ರಮ ದಂಧೆಗಳು ಗರಿಬಿಚ್ಚಿವೆ.!ಇಲ್ಲಿನ ಅಂದಾ ದರ್ಬಾರ್ ನ ಕಲರವ ಮುಗಿಲು ಮುಟ್ಟಿದೆ. ಇಲ್ಲಿಗೆ ಯಾರೇ ಅಧಿಕಾರಿಗಳಾಗಿ ಬರಲಿ ಬಂದ ಬಂದವರನ್ನೆಲ್ಲ ಇಲ್ಲಿಯ ಮರಳು ಮತ್ತು ಕಲ್ಲು ಕ್ವಾರೆ ಮಾಫಿಯಾದ ಕುಳಗಳು ಕೂಡಲೆ ಬುಕ್ ಮಾಡಿಕೊಂಡು ಬಿಡುತ್ತಾರೆಂಬ ಜನಜನಿತವಾದ ಮಾತಿದೆ. ಯಾಕೆಂದರೆ ಗಾಜನೂರು ಸಕ್ರೆಬೈಲ್,ಮಂಡಗದ್ದೆ ಮತ್ತು ಹೊರವಲಯ ಗಳಲ್ಲಿ ಬೆಳೆದು ನಿಂತಿರುವ ಅಕ್ರಮ ಮರಳು ಮಾಫಿಯಾ, ಅಕ್ರಮ ಕಲ್ಲು ಕ್ವಾರೆ ದಂಧೆಯ ಕುಳಗಳು ಯಾವ ಅಧಿಕಾರಿಯನ್ನು ಬೇಕಾದರೂ ಕ್ಷಣ ಮಾತ್ರದಲ್ಲಿ ಬುಕ್ ಮಾಡಿಕೊಳ್ಳ ಬಲ್ಲಷ್ಟು ಪ್ರಬಲರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಅಕ್ರಮ ದಂಧೆ ನಡೆಸುವ ಅಡ್ಡ ಕಸುಬಿಗಳು ಭಯಂಕರವಾಗಿ ಕೊಬ್ಬಿ ಹೋಗಿದ್ದಾರೆ. ಇವರ ದಿನವೊಂದರ ವಹಿವಾಟೇ ಲಕ್ಷಾಂತರ ರೂಪಾಯಿ ಲೆಕ್ಕದಲ್ಲಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಬರುವ ಪೊಲೀಸರಿಗೆ, ಅಧಿಕಾರಿಗಳಿಗೆ ಒಂದಷ್ಟು ಪ್ರಸಾದ ಸಲ್ಲಿಸಿ ಅವರ ಬಾಯಿ ಮುಚ್ಚಿಸಿ ಅವರನ್ನೆ ಪಹರೆಗಿಟ್ಟುಕೊಳ್ಳುವುದು ಕಷ್ಟವೇನಲ್ಲ. ಇವತ್ತು ಮಂಡಗದ್ದೆ, ಕಡೆಕಲ್ಲು, ಗಾಜನೂರು ಭಾಗದಲ್ಲಿ ಅಕ್ರಮ ಕಲ್ಲು ಕ್ವಾರೆ ಮತ್ತು ಮರಳು ಮಾಫಿಯಾ ಭರ್ಜರಿಯಾಗಿ ನೆಡೆಯುತ್ತಿದ್ದರು ಕೇಳುವರಿಲ್ಲದಂತಾಗಿದೆ.
ಸಾಂದರ್ಭಿಕ ಚಿತ್ರ
ಅಕ್ರಮ ಕಲ್ಲು ಕ್ವಾರೆ ಮತ್ತು ಕ್ರಷರ್ ದಂಧೆ ಮತ್ತು ಅಕ್ರಮ ಮರಳು ಮಾಫಿಯಾ
ತೀರ್ಥಹಳ್ಳಿ, ಮಂಡಗದ್ದೆ, ಮುಡುಬ,ತೂದುರು,ಗಬಡಿ, ಬೆಜ್ಜವಳ್ಳಿ,ಭಾಗದಿಂದ ಲೋಡುಗಟ್ಟಲೆ ಅಕ್ರಮ ಮರಳು ರಾತ್ರಿ ಹಗಲೆನ್ನದೆ ಯಾರ ಭಯವಿಲ್ಲದೆ ಶಿವಮೊಗ್ಗದ ನಗರವನ್ನು ತಲುಪುತ್ತಿದೆ.ಈ ಅಕ್ರಮ ಮರಳು ಸಲಿಸಾಗಿ ಶಿವಮೊಗ್ಗ ನಗರ ತಲುಪಲು ಲೋಡಿಗಿಷ್ಟು ಹಣ ಫಿಕ್ಸ್ ಆಗಿ ಕೆಲವು ಅಧಿಕಾರಿಗಳ ಜೇಬಿಗೆ ಸೇರುತ್ತಿದೆ. ಕೆಲವು ಅಧಿಕಾರಿಗಳು ಕಾಸಿನಾಸೆಗೆ ಬಿದ್ದ ಕಾರಣದಿಂದಲೇ ಅಕ್ರಮ ಮರಳು ಮಾಫಿಯಾ ಕುಳಗಳು ಬಲಿತ ಹೋರಿಗಳಾಗಿದ್ದಾರೆ.ಇಂತಹ ಅಕ್ರಮ ದಂಧೆಕೋರರನ್ನು ಮಟ್ಟಹಾಕ ಬೇಕಾದ ಅಧಿಕಾರಿಗಳೆ ಮೌನಕ್ಕೆ ಜಾರಿದ್ದಾರೆ.
ಇನ್ನೂ ಮಿಳ್ಳಘಟ್ಟ, ಗಾಂಧಿ ಬಜಾರ್, ಮಂಡ್ಲಿ, ಬೈಪಾಸ್ ರಸ್ತೆ, ಅಣ್ಣಾನಗರದಲ್ಲಿ ನಕಲಿ ಟೀ ಪುಡಿ, ಕಲಬೆರಕೆ ಪದಾರ್ಥಗಳು,ಗ್ಯಾಸ್ ಫಿಲ್ಲಿಂಗ್ ದಂಧೆಯು ಜೋರಾಗಿಯೆ ನೆಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಅದರಲ್ಲೂ ಕದ್ದ ಲಾರಿಗಳು, ಕಾರುಗಳು ಮತ್ತು ಬೈಕುಗಳು ರಾತ್ರೋ ರಾತ್ರಿ ಪುಡಿ ಪುಡಿಯಾಗಿ ಗುಜುರಿ ಸೇರುತ್ತಿವೆ.
ಈ ಎಲ್ಲಾ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ಅದರಲ್ಲೂ ನಕಲಿ ಟೀ ಪುಡಿ ದಂಧೆಯಂತೂ ಭರ್ಜರಿಯಾಗಿ ತಳವೂರಿದೆ.
ಗಾಂಧಿ ಬಜಾರಿನ ನಕಲಿ ಟೀಪುಡಿ ದಂಧೆಕೋರನೊಬ್ಬ ಮೂರು ದಶಕಗಳಿಂದಲೂ ಈ ಹಡಬೆ ದಂಧೆಯಲ್ಲಿ ತನ್ನನ್ನು ತೊಡಗಿಸಿಕೊಂಡು.ಕೋಟ್ಯಾಂತರ ರೂಪಾಯಿ ಗುಡ್ಡೆಹಾಕಿ ಕುಳಿತಿದ್ದಾನೆ.ಈತ ದಂಧೆಗೆ ರಕ್ಷಣೆ ಸಿಗಲಿ ಮತ್ತು ಸೂಸುತ್ರವಾಗಿ ನಡೆದುಕೊಂಡು ಹೋಗಲಿ ಎಂದು ತನಗೆ ರಕ್ಷಣೆ ನೀಡುವವರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಮಾಮೂಲಿ ನೀಡಿ ನಕಲಿ ಟೀಪುಡಿ ದಂಧೆಯಲ್ಲಿ ಮುಳುಗಿ ಹೋಗಿದ್ದಾನೆ.
ಸದ್ಯದ ಮಟ್ಟಿಗೆ ಮಟ್ಕಾ ದಂಧೆಗೆ ಕಡಿವಾಣ ಬಿದ್ದಿರಬಹುದು. ನಿತ್ಯ ಈ ದಂಧೆಯ ಬೆನ್ನಿಗೆ ಬಿಳುವಂತೆ ಉಳಿದ ಅಕ್ರಮ ದಂಧೆಗಳ ಮೇಲು ಪೋಲಿಸರು ಕಣ್ಣು ಹಾಹಿಸಬೇಕಿದೆ.
ಇಲ್ಲವಾದರೆ ಶಿವಮೊಗ್ಗದ ಶಹರು ಅಕ್ರಮ ದಂಧೆಕೋರರ ಸುಳಿಗೆ ಸಿಲುಕಿ ನಲುಗಿ ಹೋಗಲಿದೆ.
ಇನ್ನೂ ಗಡದ್ದಾಗಿ ತಿಂದುಂಡ್ಡು ಮಲಗಿರುವ ಶಿವಮೊಗ್ಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಅಕ್ರಮ ಕಲ್ಲು ಕ್ವಾರೆ ದಂಧೆ ಮತ್ತು ಮರಳು ಮಾಫಿಯಾ ದಂಧೆಕೋರರ ವಿರುದ್ಧ ಪೋಲಿಸ್ ಇಲಾಖೆ ಸಮರ ಸಾರ ಬೇಕಿದೆ.ಈ ಎಲ್ಲಾ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕಿದೆ.
ನೀವು ಬ್ರಾಂಡೆಡ್ ಟೀ ಪುಡಿಯನ್ನು ತಗೆದು ಕೊಳ್ಳುವುದಾದರೆ ಎಚ್ಚರದಿಂದ ಇರಬೇಕು.ಸ್ವಲ್ಪ ಯಾಮಾರಿದ್ರೂ ನಿಮ್ಮ ಟೀ ಕಲಬೆರಕೆ ಯಾಗುತ್ತದೆ. ನಕಲಿ ಟೀ ಪೌಡರ್ ಕಲಬೆರಕೆ ಮಿಕ್ಸಿಂಗ್ನ ಕರಾಳ ಜಾಲವೊಂದು ಶಿವಮೊಗ್ಗದಲ್ಲಿ ಕಳೆದ ಮೂವತ್ತು ವರ್ಷದಿಂದ ಬಿಡು ಬಿಟ್ಟಿದೆ.! ತ್ರೀ ರೋಸಸ್, ತಾಜ್ಮಹಲ್,ಕಣ್ಣನ್ ದೇವನ್,ರೆಡ್ ಲೇಬಲ್ ಮುಂತಾದ ಬ್ರಾಂಡೆಡ್ ಟೀ ಕುಡಿದರೂ ಬಾಯಿಗೆ ರುಚಿ ಸಿಕ್ತಿಲ್ಲ, ಗಂಗಾವತಿಯ ಮರದ ಹೊಟ್ಟಿನ ಘಮಲು ನೆತ್ತಿಗೆರುತದೆ.! ಎಂದಾದರೆ ನೀವು ಬಳಸುತ್ತಿರುವ ಟೀ ಪುಡಿ ಅಸಲಿ ಅಲ್ಲದೆ ನಕಲಿ ಆಗಿರಬಹುದು.
ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ದ್ರವ್ಯಗಳನ್ನು ಕಲಬೆರಕೆ ಮಾಡುವ ಜಾಲವೂ ಶಿವಮೊಗ್ಗದ ಗಾಂದಿಬಜಾರಿಗೆ ಎಡತಾಗಿಕೊಂಡು ಶಿವಮೊಗ್ಗದ ಹೊರವಲಯದಲ್ಲಿ ಬಿಡುಬಿಟ್ಟಿದೆ.!
ನಗರದ ಹೊರವಲಯದ ಮಂಡ್ಲಿ, ಸಂತೆಕಡೂರು ರಸ್ತೆಯಲ್ಲಿ ಮತ್ತು ಇನ್ನಿತರ ನಿಗೂಢ ಸ್ಥಳಗಳಲ್ಲಿ ಈ ಅಕ್ರಮದ ಟೀಪುಡಿಯ ಮಿಕ್ಸಿಂಗ್,ಪ್ಯಾಕಿಂಗ್, ಒಂದು,ಎರಡು,ಐದು ರೂಪಾಯಿಯ ಪ್ಯಾಕೆಟ್ ಗಳು ತಯಾರಾಗುತ್ತಿವೆ.! ಇವರು ತಯಾರಿಸುವ ನಕಲಿ 3 ರೋಜಸ್ ಮತ್ತು ತಾಜ್ ಹಾಗೂ ರೆಡ್ ಲೇಬಲ್ ಟೀ ಪುಡಿಯ ಪ್ಯಾಕೆಟ್ ಕಂಡು ನೀವು ಶಾಕ್ ಆಗಬಹುದು.ಆ ಮಟ್ಟದಲ್ಲಿ ರಾರಾಜಿಸುತ್ತವೆ ನಕಲಿ ಟೀ ಪುಡಿ ಪ್ಯಾಕಿಂಗ್. ಈ ಎಲ್ಲಾ ಅಕ್ರಮ ದಂಧೆಗಳಿಗೆ ಪೋಲಿಸ್ ಇಲಾಖೆ ಬ್ರೇಕ್ ಹಾಕಬೇಕಿದೆ.