Headlines

ಅಖಿಲ ಭಾರತ ಗೃಹರಕ್ಷಕ ದಳದ ಸಮಾರಂಭದಲ್ಲಿ ನಿರಂತರ ಉತ್ತಮ ಸೇವೆಗೆ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಅಭಿನಂದನಾ ಪತ್ರ ಪ್ರಧಾನ.

ಅಶ್ವಸೂರ್ಯ/ಶಿವಮೊಗ್ಗ: ಪೊಲೀಸ್ ಡಿಎಆರ್ ಸಭಾಂಗಣದಲ್ಲಿ, 9/12/2024ರ ಸೋಮವಾರ 62ನೇ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಸಮಾರಂಭದಲ್ಲಿ, ನಿಷ್ಕಾಮ ಸೇವೆ (ನಿಸ್ವಾರ್ಥ ಸೇವೆ) “ಸೇವೆಯೇ ಪರಮಗುರಿ” ಇಪ್ಪತ್ತೈದು ವರ್ಷಗಳ ನಿರಂತರ ಉತ್ತಮ ಸೇವೆ ಸಲ್ಲಿಸಿದ ಶಿವಮೊಗ್ಗ ಘಟಕದ “ಪ್ಲಟೂನ್ ಸಾರ್ಜೆಂಟ್ ಚನ್ನವೀರಪ್ಪ ಗಾಮನಗಟ್ಟಿ” ರವರಿಗೆ ಜಿಲ್ಲಾ ಗೃಹರಕ್ಷಕ ದಳದಿಂದ ಸಾಲನ್ನು ಹೊದಿಸಿ ಮುತ್ತಿನ ಹಾರವಹಾಕಿ ಅಭಿನಂದನಾ ಪ್ರಶಂಸೆಯ ಪತ್ರ ನೀಡಿ ನೆನಪಿನ ಕಾಣಿಕೆ ನೀಡಲಾಯಿತು.

ಈ ವೇಳೆ ಮಾತನಾಡಿದ ಚನ್ನವೀರಪ್ಪ ಗಾಮನಗಟ್ಟಿ ರವರು ನಾನು ಬಾಲ್ಯದಿಂದಲೂ ಶಿಸ್ತಿನ ಸಿಪಾಯಿ ಆಗಬೇಕೆಂಬ ಆಸೆ ಅದರಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೇವಾದಳ, ಪ್ರೌಢಶಾಲೆಯಲ್ಲಿ ಎನ್ ಸಿ ಸಿ, ನಂತರ ಕಾಲೇಜಿನಲ್ಲಿ ಎನ್ ಸಿ ಸಿ ಯನ್ನು ಮುಂದುವರಿಸುತ್ತಾ ಹಲವು ಕ್ಯಾಂಪುಗಳನ್ನು ಮಾಡಿರುವೆ, ಶಿವಮೊಗ್ಗ ಜಿಲ್ಲೆ ಸಹ್ಯಾದ್ರಿ ಕಾಲೇಜಿನಿಂದ ಪ್ರಪ್ರಥಮವಾಗಿ ಬೆಸ್ಟ್ ಶೂಟರ್ ಆಗಿ ದೆಹಲಿಯ ಕ್ಯಾಂಪ್ ನಲ್ಲಿ ಪ್ರತಿನಿಧಿಸಿರುವೆ, ನಂತರ ಬಂದಂತ ದಿನಗಳಲ್ಲಿ ಇತರೆ ಕಾಲೇಜಿನ ವಿದ್ಯಾರ್ಥಿಗಳಿಗೆ ದೇಶ ಸೇವೆಯ ಉತ್ತೇಜನ ಬೆಳೆಸಿ, ಬಹಳಷ್ಟು ವಿದ್ಯಾರ್ಥಿಗಳಿಗೆ ಎನ್ ಸಿ ಸಿ ತರಬೇತಿ ನೀಡಿ ಆರ್ಮಿಗೆ ಭರ್ತಿಯಾಗಲು ಸಹಕಾರ ಮಾಡಿರುವೆ, ನನ್ನಲ್ಲಿ ತರಬೇತಿ ಪಡೆದಂತ ಬಹಳಷ್ಟು ಜನರು ದೇಶ ಸೇವೆಯ ಮಾಡಿ 17 ವರ್ಷ ಪೂರ್ಣಗೊಂಡು ಪುನಹ ತನ್ನ ತಾಯಿನಾಡಿಗೆ ಮರಳಿರುವರು. ಇನ್ನು ಬಹಳಷ್ಟು ನನ್ನ ಸ್ನೇಹಿತರು ನಾನಾ ಸರ್ಕಾರಿ ಉನ್ನತ ಹುದ್ದೆಯಲ್ಲಿ ಇರುವರು.

ದೇಶ ಸೇವೆಯೇ ನಮ್ಮ ಗುರಿ ಎಂದ ವಿದ್ಯಾರ್ಥಿಗಳು ನಾವು ದೇಶದ ರಕ್ಷಣೆಗೆ ಕರೆಕೊಟ್ಟಾಗ ದೇಶ ರಕ್ಷಣೆಗೆ ಸದಾ ಸಿದ್ಧ ಎಂದು ಸಂಕಲ್ಪ ತೊಟ್ಟವರು, ನಮ್ಮ ಕಾಲೇಜಿನ ತರಬೇತಿ ವೇಳೆ ಗೃಹರಕ್ಷಕ ದಳದ ಅಂದಿನ ಡೆಪ್ಯೂಟಿ ಕಮಾಂಡ್ಮೆಂಟ್ ಶ್ರೀ ಯುತ ನಾಗೇಂದ್ರಪ್ಪ, ಬೋಧಕರಾದ ಶ್ರೀ ಯುತ ಬಸವಣ್ಣಪ್ಪ ರವರು, ಬಂದು ಗೃಹರಕ್ಷಕ ದಳದ ಬಗ್ಗೆ ಮಾಹಿತಿ ನೀಡಿ, ಪ್ರಕೃತಿ ವಿಕೋಪಗಳಾದ ಭೂಕಂಪ, ಪ್ರವಾಹ, ಮಾನವ ನಿರ್ಮಿತ ಗಲಭೆಗಳು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆಗಾಗಿ ತಮ್ಮಗಳ ಸೇವೆ ಅಮೂಲ್ಯವಾಗಿರುತ್ತದೆ.

ಹಾಗಾಗಿ ನಮ್ಮ ಗೃರಕ್ಷಕ ದಳಕ್ಕೆ ಸೇರಿ ಸರ್ಕಾರ ಕರೆ ಕೊಟ್ಟಾಗ ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆಗಾಗಿ ಸರ್ಕಾರದ ಇತರೆ ಇಲಾಖೆಗಳ ಜೋತೆಗೂಡಿ ರಕ್ಷಿಸೋಣ ಎಂದು ಸಂಸ್ಥೆ ಸೇರಲು ಹೇಳಿದರು, ಕಾಲೇಜಿನ ವಿದ್ಯಾಬ್ಯಾಸ ಮುಗಿದ ನಂತರ ಗೃಹರಕ್ಷಕ ದಳಕ್ಕೆ 1999 ಜೂನ್ 1ರಂದು ಸಂಸ್ಥೆಗೆ ಸೇರಿ 2000ರಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಹಾಗೂ ರಾಜ್ಯದಿಂದ ಪ್ರಪ್ರಥಮವಾಗಿ ಅಖಿಲ ಭಾರತ ಗೃಹ ರಕ್ಷಕ ದಳ ಹರಿಯಾಣದ ಸ್ಪೋರ್ಟ್ಸ್ ಮೀಟಿನಲ್ಲಿ ಪಥಸಂಚನದಲ್ಲಿ ರೈಟ್ ಗೈಡ್ ಆಗಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದವು. ವಾರ್ಷಿಕ ಕ್ರೀಡಾಕೂಟದಲ್ಲಿ ನಿರಂತರ ವಲಯ ಮಟ್ಟದಲ್ಲಿ ಜಿಲ್ಲೆಗೆ ಹಲವು ಭಾರಿ ಚಾಂಪಿಯನ್ ಶಿಪ್ ಪಡೆದು, ಒಂದು ಭಾರಿ ರಾಜ್ಯಮಟ್ಟದಲ್ಲಿ ಚಾಂಪಿಯನ್ ಶಿಪ್ ಪಡೆದಿರುವ ಬಗ್ಗೆ ಹೇಳಿದರು.

ನಂತರದ ದಿನಗಳಲ್ಲಿ ಪ್ರಕೃತಿ ವಿಕೋಪದ ಪ್ರವಾಹ, ಗಲಭೆಗಳು, ಚುನಾವಣೆ ಸಂದರ್ಭದಲ್ಲಿ ಸರ್ಕಾರ ಕರೆ ನೀಡಿದಾಗ ನಾವು ಬಂದು ನಿಷ್ಕಾಮಾ (ನಿಸ್ವಾರ್ಥ) ಸೇವೆ ಮಾಡುತ್ತ ಬಂದು 25 ವರ್ಷಗಳು ಕಳೆದಿದ್ದು ತಿಳಿಯಲೇ ಇಲ್ಲ, ಈ ಜೀವ ಇರುವವರೆಗೂ ಸಮಾಜ ಸೇವೆ ಮಾಡುವ ಹಂಬಲವಿದೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇದರಲ್ಲಿ ಉದ್ಯೋಗ ಹುಡುಕುತ್ತಾ ಬರುತ್ತಿರುವರು, ಪೊಲೀಸ್ ಇಲಾಖೆಯಲ್ಲಿ ಅಲ್ಲದೆ ಕೆಲವು ಇಲಾಖೆಗಳಲ್ಲಿ ನಿರಂತರ ಉದ್ಯೋಗ ನೀಡಲು ಸಿದ್ಜರಿರುವರು, ಆದರೆ ಪ್ರಕೃತಿ ವಿಕೋಪ, ಗಲಭೆ, ಚುನಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ನಮ್ಮನು ಮಾತೃ ಸಂಸ್ಥೆ ಮರಳಿ ಕರೆಯುವುದರಿಂದ ಅ ಸಂದರ್ಭದಲ್ಲಿ ಅವರಿಗೆ ಅಂಗರಕ್ಷಕರು ಇಲ್ಲದೆ ತೊಂದರೆ ಆಗುವುದು ಆದರಿಂದ ಹಿಂದೆಟು ಆಕುತ್ತಿರುವರು, ಹಿಂದೆ ಸರಕಾರಿ ಆಸ್ಪತ್ರೆ, ಮಹಾ ನಗರ ಪಾಲಿಕೆಯಲ್ಲಿ ಕೇಳಲಾಯಿತು ಅವರು ನಮಗೆ ಉದ್ಯೋಗ ನೀಡಲು ಸಿದ್ದರಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ಮತ್ತು ಮುಖ್ಯ ಮಂತ್ರಿ ಪದಕ ಪಡೆದವರಿಗೆ, 25 ವರ್ಷ ಸೇವೆ ಸಲ್ಲಿಸಿದವರಿಗೆ, ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಿದ ಎಲ್ಲರಿಗೂ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮೀಥುನ್ ಕುಮಾರ್ ಜಿಕೆ. ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಗೃಹರಕ್ಷಕ ದಳ ನಿಕಟಪೂರ್ವ ಸಮಾದೇಷ್ಟರು ಚಂದನ್ ಪಟೇಲ್ ಎಂಪಿ. ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟರು ಡಾ.ಚೇತನ್ ಹೆಚ್.ಪಿ ಜಿಲ್ಲಾ ತರಬೇತಿ ಅಧಿಕಾರಿ ಹರೀಶ್ ಎಸ್ ಪಾಟೀಲ್ ಹಾಗೂ ಜಿಲ್ಲೆಯ ಗೃಹರಕ್ಷಕ ದಳದ ಘಟಕಾಧಿಕಾರಿಗಳು ಎನ್ ಸಿಓ ಅಧಿಕಾರಿಗಳು, ಗೃಹರಕ್ಷಕರು ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!