ಅಂಡರ್ 19 ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್: ಕುಂದಾಪುರ ಮೂಡ್ಲಕಟ್ಟೆ ವಿದ್ಯಾರ್ಥಿ ಸಾಧನೆ
ಅಶ್ವಸೂರ್ಯ/ಕುಂದಾಪುರ: ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಷನ್’ ಪ್ರಾಯೋಜಕತ್ವದ ಅಡಿಯಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಅಂಡರ್ 19 ವರ್ಷದೊಳಗಿನ ಟಿ20 ಕ್ರಿಕೆಟ್ ಪಂದ್ಯ ಕೂಟದಲ್ಲಿ ಐಎಂಜೆ ಪದವಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಸನಿತ್ ಶೆಟ್ಟಿ ಒಡಿಶಾ ತಂಡವನ್ನು ಪ್ರತಿನಿಧಿಸಿ ಶ್ರೇಷ್ಠ ಮಟ್ಟದ ಆಟವನ್ನು ಪ್ರದರ್ಶಿಸಿ ಒಡಿಶಾ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂದ್ಯಕೂಟದ ಫೈನಲ್ನಲ್ಲಿ ಒಡಿಶಾ ತಂಡ ಹರಿಯಾಣ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅತ್ಯುತ್ತಮ ಪ್ರದರ್ಶನ ತೋರಿದ ಸನಿತ್ ಶೆಟ್ಟಿ ’ಸರಣಿ ಶ್ರೇಷ್ಠ’, ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು. ಫೈನಲ್ನಲ್ಲಿ ಪಂದ್ಯದಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿ ಪಂದ್ಯದ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗಡರಿಸಿಕೊಂಡರು. ಹಾಗೂ ’ಉತ್ತಮ ದಾಂಡಿಗ’ ಪ್ರಶಸ್ತಿಯನ್ನು ಪಡೆದರು. ಕುಂದಾಪುರದ ಹುಡುಗ ಸನಿತ್ ಶೆಟ್ಟಿ
ಕಳೆದ ಬಾರಿಯೂ ರಾಷ್ಟ್ರೀಯ ಮಟ್ಟದ ’ಟಿ-20’ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ತೋರಿದ್ದರು.