ಪ್ರಣಯ್ ಮರ್ಡರ್ ಪ್ರಕರಣ: ಅಂದು ಪ್ರೀತಿಸಿ ಮದುವೆಯಾದ ಜೋಡಿಯ ಮೇಲೆ ನೆಡೆದಿತ್ತು ಅಟ್ಯಾಕ್.! 7 ವರ್ಷದ ನಂತರ ಬಂತು ತೀರ್ಪು.! ಒಬ್ಬನಿಗೆ ಮರಣದಂಡನೆ, 6 ಮಂದಿಗೆ ಜೀವಾವಧಿ ಶಿಕ್ಷೆ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ತೆಲಂಗಾಣ : ಪ್ರಣಯ್, ಅಮೃತಾ
ಈ ಫೋಟೋದಲ್ಲಿರುವ ಮುದ್ದಾದ ಜೋಡಿನ ನೋಡಿದರೆ ಅಂದು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಈ ಜೋಡಿಯ ಪ್ರಕರಣವೊಂದು ನೆನಪಾಗುತ್ತದೆ.! ಮುದ್ದಾದ ಜೋಡಿಯ ಹೆಸರು ಪ್ರಣಯ್ ಕುಮಾರ್ ಮತ್ತು ಅಮೃತಾ ಇಬ್ಬರು ಕೂಡ ಬಾಲ್ಯ ಸ್ನೇಹಿತರು ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.ಇಬ್ಬರು ಮದುವೆಯಾಗುವ ಸಂಧರ್ಭದಲ್ಲಿ ಅಮೃತಾ ಮನೆಯಲ್ಲಿ ಸಾಕಷ್ಟು ವಿರೋಧವಿತ್ತು. ಮದುವೆಯಾಗಿ ಈ ಜೋಡಿ ಸಂತೋಷವಾಗಿದ್ದರು ಅಮೃತಾ ಗರ್ಭಿಣಿ ಕೂಡ ಆಗಿದ್ದರು. ಅಂದು ಆಸ್ಪತ್ರೆಗೆ ಹೋಗಿ ಚೆಕಪ್ ಮುಗಿಸಿ ಹೊರ ಬಂದಿದ್ದ ಅಮೃತಾ ಹಾಗೂ ಪ್ರಣಯ್ ಕುಮಾರ್ ಮೇಲೆ ಮಾರಣಾಂತಿಕ ಅಟ್ಯಾಕ್ ನೆಡೆದಿತ್ತು.! ಪ್ರಣಯ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹತ್ಯೆಯ ಹಿಂದೆ ಇದ್ದದ್ದು ಅಮೃತಾ ಅವರ ತಂದೆ.!ಮಗಳು ನನ್ನ ಮಾತನ್ನು ಮೀರಿ ಬೇರೆ ಜಾತಿಯವನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ ನಂಜುಕಾರುತ್ತಿದ್ದ ಆಕೆಯ ಅಪ್ಪ ಸುಪಾರಿ ಕೊಟ್ಟು ಅಳಿಯನನ್ನೇ ಕೊಲ್ಲಿಸಿಬಿಟ್ಟಿದ್ದ .! ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕಳೆದ ಏಳು ವರ್ಷದಿಂದ ನ್ಯಾಯಾಲಯದಲ್ಲಿ ವಿಚಾರಣೆ ನೆಡೆಯುತ್ತಿತ್ತು.
ಆರೋಪಿಗಳ ವಿರುದ್ಧ 7 ವರ್ಷದ ನಂತರ ಬಂತು ತೀರ್ಪು.!
ತೆಲಂಗಾಣದ ಮಿರ್ಯಾಲಗುಡದಲ್ಲಿ ನಡೆದ ಪ್ರಣಯ್ ಕುಮಾರ್ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ನಲ್ಗೊಂಡ ಜಿಲ್ಲೆಯ ತ್ವರಿತ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿದೆ. ಪ್ರಮುಖ ಆರೋಪಿಗೆ ಮರಣದಂಡನೆ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಅಂದು ರಾಷ್ಟ್ರವ್ಯಾಪ್ತಿ ಸುದ್ದಿಯಾಗಿದ್ದ ಈ ಮರ್ಯಾದಾ ಹತ್ಯೆ!ಪ್ರಕರಣ ಆ ಸಮಯದಲ್ಲಿ ದೊಡ್ಡ ಸಂಚಲವನ್ನೆ ಮೂಡಿಸಿತ್ತು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದರು. ನಲ್ಗೊಂಡ ನ್ಯಾಯಾಲಯದಲ್ಲಿ ಈ ಪ್ರಕರಣದ ಸುಮಾರು 1600 ಪುಟಗಳ ಆರೋಪಪಟ್ಟಿ ಸಲ್ಲಿಸಲಾಯಿತು.ಸುದೀರ್ಘ ವಿಚಾರಣೆ ನೆಡೆದು 7ವರ್ಷದ ನಂತರ ನಲ್ಗೊಂಡ ಎಸ್‌ಸಿ ಮತ್ತು ಎಸ್‌ಸಿ ನ್ಯಾಯಾಲಯವು ಈ ವಿಷಯದ ಕುರಿತು ಅಂತಿಮ ತೀರ್ಪು ನೀಡಿದೆ.
ಅಳಿಯನನ್ನು ಸುಫಾರಿ ಕೊಟ್ಟು ಹತ್ಯೆಮಾಡಿಸಿ ಸೂಸೈಡ್ ಮಾಡಿಕೊಂಡಿದ್ದ ಹುಡುಗಿಯ ತಂದೆ ಮಾರುತಿರಾವ್!
ಸೋಮವಾರ, ನ್ಯಾಯಾಲಯವು ಸುಭಾಷ್ ಕುಮಾರ್ ಶರ್ಮಾ (A2) ಗೆ ಕ್ರೂರ ಕೊಲೆಯಲ್ಲಿನ ಪಾತ್ರಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿತು. ಉಳಿದ ಐದು ಆರೋಪಿಗಳಾದ ಅಜ್ಗರ್ ಅಲಿ (A3), ಅಬ್ದುಲ್ ಭಾರಿ (A4), ಕರೀಮ್ (A5), ಶಿವ (A6), ಮತ್ತು ನದೀಮ್ (A7) ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಪ್ರಮುಖ ಆರೋಪಿ, ಪ್ರಣಯ್ ಅವರ ಪತ್ನಿ ಅಮೃತ ಅವರ ತಂದೆ ಮಾರುತಿರಾವ್ (A1), ಪ್ರಕರಣ ತನಿಖೆಯಲ್ಲಿರುವಾಗಲೇ ಮಾರ್ಚ್ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸೆಪ್ಟೆಂಬರ್ 14 2018ರಂದು ಪ್ರಣಯ್ ಕೊಲೆ!
ಸೆಪ್ಟೆಂಬರ್ 14, 2018 ರಂದು ನಡೆದ ಈ ಹತ್ಯೆಯು ಮಾರುತಿರಾವ್ ನೀಡಿದ್ದ ಸುಪಾರಿ ಕೊಲೆಯಾಗಿತ್ತು. ತನ್ನ ಮಗಳು ಅಮೃತಾ ಪ್ರಣಯ್ ಜೋತೆಗೆ ಅಂತರ್ಜಾತಿ ವಿವಾಹ ಆಗಿವುದನ್ನು ಬಲವಾಗಿ ವಿರೋಧಿಸಿದ್ದರು. ಅವರ ಸಂಬಂಧವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಪ್ರಣಯ್ ಅವರನ್ನು ಕೊಲ್ಲಲು ಅಜ್ಗರ್ ಅಲಿ ನೇತೃತ್ವದ ಗ್ಯಾಂಗಿಗೆ ಕೊಲೆಮಾಡಲು ಸುಪಾರಿ ಕೊಟ್ಟು ನೇಮಿಸಿಕೊಂಡಿದ್ದನು. ಹಾಡಹಗಲೇ ನಡೆದ ಈ ಕೊಲೆ ತೆಲಂಗಾಣ ಮತ್ತು ರಾಷ್ಟ್ರವ್ಯಾಪ್ತಿ ದೊಡ್ಡಮಟ್ಟದ ಸುದ್ದಿಯಾಗಿತ್ತು.
ಈ ಪ್ರಕರಣವು ಜಾತಿ ಆಧಾರಿತ ಹಿಂಸೆ ಮತ್ತು ಮರ್ಯಾದಾ ಹತ್ಯೆಗಳ ಅಪಾಯಗಳ ಕರಾಳ ಪ್ರಕರಣವಾಗಿ ನಿಂತಿದೆ.