ಸೌರಭ್ ತಿವಾರಿ ಮರ್ಡರ್ ಕೇಸ್ || ಗಂಡನನ್ನು ಕೊಂದ ಬಳಿಕ ಪ್ರಿಯಕರನ ಜೊತೆ ಹೋಳಿ ಡ್ಯಾನ್ಸ್ ಮಾಡಿದ್ದ ಮುಸ್ಕಾನ್.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಲಕ್ನೋ: ಗಂಡ ಸೌರಭ್‌ನನ್ನು ಹತ್ಯೆಮಾಡಿದ ಬಳಿಕ ಹೆಂಡತಿ ಮುಸ್ಕಾನ್ ರಸ್ತೋಗಿ ಪ್ರಿಯಕರ ಸಾಹಿಲ್ ಜೊತೆ ಹೋಳಿ ಹಬ್ಬ ಆಚರಿಸಿ ಡ್ಯಾನ್ಸ್ ಮಾಡಿ ಕುಣಿದಿದ್ದಾಳೆ.! ಎನ್ನುವುದು ವರದಿಯಾಗಿದೆ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಸೌರಭ್ ತಿವಾರಿ ಕೇಸ್ ಈಗ ರಾಷ್ಟ್ರವ್ಯಾಪ್ತಿ ದೊಡ್ಡಮಟ್ಟದ ಸುದ್ದಿಯಾಗಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆನ್ನುವ ಒಂದೇ ಕಾರಣಕ್ಕೆ ತಾಳಿಕಟ್ಟಿದ ಮುದ್ದಾದ ಗಂಡ ಸೌರಭ್ ತಿವಾರಿಯನ್ನೆ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಮುಸ್ಕಾನ್ ಸ್ಕೆಚ್ ಹಾಕಿ ಕೊಲೆ ಮಾಡಿದ್ದಳು. ಬಳಿಕ ಗಂಡನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಇದಕ್ಕೆಂದೆ ತಂದಿದ್ದ ಪ್ಲಾಸ್ಟಿಕ್ ಡ್ರಮ್ ಒಂದರಲ್ಲಿ ಹಾಕಿ ಅದರ ಜೋತೆಗೆ ಸಿಮೆಂಟ್, ಮರಳು ತುಂಬಿಸಿ ಪ್ಯಾಕ್ ಮಾಡಿದ್ದಳು.ಆದರೆ ಮುಸ್ಕಾನ್ ಮಗಳು ತನ್ನ ತಂದೆಯನ್ನು ತಾಯಿಯೇ ಕೊಲೆ ಮಾಡಿರುವ ವಿಚಾರವನ್ನು ನೆರೆಮನೆಯವರ ಮುಂದೆ ಬಾಯಿಬಿಟ್ಟಿದ್ದಳಂತೆ.!
ಇದೀಗ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಸೌರಭ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಮುಸ್ಕಾನ್ ಮತ್ತು ಸಾಹಿಲ್ ಕುರಿತಾದ ಒಂದಷ್ಟು ಬೆಚ್ಚಿಬೀಳಿಸುವ ವಿಚಾರ ಹೊರಬರುತ್ತಿವೆ.! ಗಂಡನನ್ನು ಅತಿ ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮುಸ್ಕಾನ್ ತನ್ನ ಪ್ರಿಯಕರನ ಜೊತೆ ಹೋಳಿ ಹಬ್ಬ ಆಚರಿಸಿಕೊಙಡಿದ್ದಾಳೆ.!
ಗಂಡನನ್ನು ಕೊಲೆ ಮಾಡಿದ ಕಿಂಚಿತ್ತೂ ಪಶ್ಚಾತ್ತಾಪ, ಭಯವಿಲ್ಲದೇ ಪ್ರಿಯಕರನ ಜೊತೆ ಬಿಂದಾಸ್ ಆಗಿ ಬಣ್ಣ ಎರಚುತ್ತಾ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೊತೆಗೆ ಇನ್ನೊಂದು ಭಯಾನಕ ವಿಷಯ ಕೂಡ ಹೊರಬಿದ್ದಿದೆ.!
ಪತಿಯ ತಲೆ ಕಡಿದು ಹಾಸಿಗೆಯ ತಳಬದಿಯ ಮಂಚದ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳಂತೆ.! ಮೀರತ್‌ನ ಸೌರಭ್ ಕೊಲೆ ಪ್ರಕರಣಲ್ಲಿ ಹೆಂಡತಿಯ ಕ್ರೂರತೆ ವರದಿಯಾಗಿದೆ.!
ಇವರ ಬಂಧನದ ನಂತರ ಸ್ಫೋಟಕ ವಿಷಯ ಹೊರಬಿದ್ದಿದೆ.
ಎರಡು ದಿನಗಳ ಹಿಂದೆಯಷ್ಟೇ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೆ ಸೇರಿ ಪತಿಯನ್ನೆ ತನ್ನ ತೆವಲಿಗೆ ತೊಂದರೆಯಾಗಬಹುದೆನ್ನುವ ಕಾರಣಕ್ಕೆ ಹತ್ಯೆ ಮಾಡಿದ್ದಳು. ಬಳಿಕ ದೇಹವನ್ನು ಪೀಸ್ ಪೀಸ್ ಮಾಡಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದಳು.
ಪತ್ನಿ ಮುಸ್ಕಾನ್, ಪತಿಯ ಹತ್ಯೆಗೈದು ತಲೆ ಕಡಿದಿರುವುದಾಗಿ ಒಪ್ಪಿಕೊಂಡಿದ್ದಾಳಂತೆ.! ಎಂದು ಮೀರತ್‌ನ ಪೊಲೀಸ್ ಅಧಿಕಾರಿ ಚೌಧರಿ ಚರಣ್ ಸಿಂಗ್ ಮಾಧ್ಯಮದವರಿಗೆ ತಿಳಿಸಿದ್ದಾರೆ ಬುಧವಾರ ಇಬ್ಬರನ್ನೂ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನೂ ಕೋರ್ಟ್‌ನಿಂದ ಕರೆದೊಯ್ಯುವ ವೇಳೆ ಇಬ್ಬರ ಮೇಲೆ ವಕೀಲರ ಗುಂಪೇ ಮುಸ್ಕಾನ್, ಸಾಹಿಲ್ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಸಂಗವೂ ನಡೆದಿದೆಯಂತೆ.!
ಮುಸ್ಕಾನ್, ಸಾಹಿಲ್ ಒಂದೇ ಶಾಲೆಯಲ್ಲಿ ಓದಿದ್ದರಂತೆ.? ತಮ್ಮ ಶಾಲೆಯ ವಾಟ್ಸಪ್ ಗ್ರೂಪ್‌ನಲ್ಲಿದ್ದ ಇವರು 2019ರಿಂದಲೂ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಕೆಲ ದಿನಗಳ ಹಿಂದೆ ಮೀರತ್‌ನ ಮಾಲ್‌ನಲ್ಲಿ ನಡೆದ ಪಾರ್ಟಿ ವೇಳೆ ಇಬ್ಬರು ಭೇಟಿಯಾಗಿದ್ದರು. ಬಳಿಕ ಇಬ್ಬರ ಪ್ರೇಮ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಂಬಂಧಕ್ಕೆ ಪತಿ ಸೌರಭ್ ಅಡ್ಡಿಯಾಗುತ್ತಾನೆನ್ನುವ ಕಾರಣಕ್ಕೆ ಆತನನ್ನು ಹತ್ಯೆಮಾಡುವ ಪ್ಲ್ಯಾನ್ ಮಾಡಿದ್ದರು. ಕೊಂದ ನಂತರ ಸ್ನಾನದ ಕೊಠಡಿಗೆ ಸೌರಭ್‌ನ ಮೃತದೇಹವನ್ನು ಎಳೆದೊಯ್ದು, ರೇಜರ್‌ನಿಂದ ತಲೆ ಕಡಿದಿದ್ದರಂತೆ. ಕೈಗಳನ್ನು ಕಟ್ಟಿ ಹಾಕಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರಂತೆ.! ಬಳಿಕ ಅದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಮಂಚದ ಬೆಡ್‌ಬಾಕ್ಸ್‌ನಲ್ಲಿಟ್ಟು ಅದರ ಮೇಲೆಯೇ ಪತ್ನಿ ನಿದ್ರೆ ಮಾಡಿದ್ದಳಂತೆ. ಅತ್ತ ಪ್ರಿಯಕರ ಸಾಹಿಲ್ ಅವನ ಕೈಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ, ಬೆಡ್‌ರೂಮ್‌ನಲ್ಲಿಟ್ಟುಕೊಂಡಿದ್ದಾನೆ.
ಬಳಿಕ ಈ ತಿಂಗಳ ಆರಂಭದಲ್ಲಿ ತುಂಡು ಮಾಡಿದ ದೇಹವನ್ನು ನಗರದ ಹೊರ ಭಾಗದಲ್ಲಿ ಎಸೆಯುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಒಂದು ನೀಲಿ ಡ್ರಮ್, ಸಿಮೆಂಟ್ ತಂದು ಅದರೊಳಗೆ ಹಾಕಿ ಮುಚ್ಚಿಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
CRIME NEWS….