ಬೆಂಗಳೂರು: ಮಾಗಡಿ ಶಾಸಕ ಬಾಲಕೃಷ್ಣ ಆಪ್ತನ ಹತ್ಯೆ.! ಗನ್ಮ್ಯಾನ್ ಇದ್ದು ನಡು ಹಾದಿಯಲ್ಲೇ ಹೆಣವಾದ ಹಸೆಮಣೆ ಏರಬೇಕಿದ್ದ ಉದ್ಯಮಿ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು : ಇದೇ ತಿಂಗಳು ಉದ್ಯಮಿ ಲೋಕನಾಥ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಲೋಕನಾಥ್ ಮದುಮಗನಾಗುವ ಮೊದಲೆ ಮಾರ್ಚ್ 22ರಂದು ಹೆಣವಾಗಿ ಹೋಗಿದ್ದಾರೆ.
ಹೌದು ತಾನು ನೋಡಿ ನಿಶ್ಚಯವಾಗಿದ್ದ ಹುಡುಗಿಯೊಂದಿಗೆ ಕೇಲವೆ ದಿನಗಳಲ್ಲಿ ಹಸೆಮಣೆಯಲ್ಲಿ ಏರಬೇಕಿದ್ದ ಉದ್ಯಮಿ ಲೋಕನಾಥ್ ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಮಾಡಿದ್ದಾರೆ.
ಈ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಬಿಜಿಎಸ್ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ 37 ವರ್ಷದ ಲೋಕನಾಥ್ ಸಿಂಗ್ ಅವರು ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದರಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರೆ.
ಶಾಸಕ ಬಾಲಕೃಷ್ಣ ಅವರ ಆಪ್ತರಾಗಿದ್ದ ಲೋಕನಾಥ್ !
ಕೊಲೆಯಾದ ಉದ್ಯಮಿ ಲೋಕನಾಥ್ ಅವರು ಮಾಗಡಿ ಶಾಸಕ ಬಾಲಕೃಷ್ಣ ಅವರ ಆಪ್ತರೆಂದು ತಿಳಿದುಬಂದಿದೆ.ಇದೇ ತಿಂಗಳಲ್ಲೇ ಲೋಕನಾಥ್ ಮದುವೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಲೋಕನಾಥ್ ನಿನ್ನೆ (ಮಾರ್ಚ್ 22) ಹೆಣವಾಗಿ ಹೋಗಿದ್ದಾರೆ.ಹಂತಕರು ಉದ್ಯಮಿಯ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎಂದು ತಿಳುದುಬಂದಿದೆ.
ಚಾಕು ಇರಿದು ಹಂತಕರು ಎಸ್ಕೇಪ್.!
ತಮ್ಮ ಗನ್ ಮ್ಯಾನ್ ಜೊತೆ ಉದ್ಯಮಿ ಲೋಕನಾಥ್ ಅವರು ಬಿಳಿಜಾಜಿ ಬಿಜಿಎಸ್ ಲೇಔಟ್ ಬಳಿ ಬಿಲ್ಡಿಂಗ್ ಕನ್ಸಟ್ರಕ್ಷನ್ ನೋಡಲು ಬಂದಿದ್ದರು. ಲೋಕನಾಥ್ ಫಾರ್ಚೂನರ್ ಕಾರಿನಲ್ಲಿ ಇದ್ದಾಗ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮಾರ್ಚ್ 22ರ ಸಂಜೆ 5.30ರ ಸುಮಾರಿಗೆ ಈ ರ್ಘಟನೆ ನೆಡೆದಿದೆ.
ಸ್ನೇಹಿತರಿಂದಲೇ ಕೊಲೆ ಶಂಕೆ.!
ತಕ್ಷಣ ಲೋಕನಾಥ್ ಕಾರಿನಿಂದ ಇಳಿದು 100 ಮೀಟರ್ ದೂರ ಓಡಿ ಆಟೋದಲ್ಲಿ ಕುಳಿತಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಲೋಕನಾಥ್ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು
ಸೋಲದೇವನಹಳ್ಳಿ ಪೊಲೀಸರು ಹಂತಕರ ಹೆಡೆಮುರಿಕಟ್ಟಲು ಕಾರ್ಯಚರಣೆ ಚುರುಕು ಗೋಳಿಸಿದ್ದಾರೆ.!
ಸ್ಥಳಕ್ಕೆ ಸೋಲದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ, ಪೊಲೀಸರು ಘಟನಾ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಗನ್ಮ್ಯಾನ್ ನಾಪತ್ತೆ.!
ಲೋಕನಾಥ್ ಸಿಂಗ್ ಜತೆ ಬಂದಿದ್ದ ಅವರ ಗನ್ಮ್ಯಾನ್ ಕೂಡ ನಾಪತ್ತೆಯಾಗಿದ್ದಾನೆ. ಆತನ ಮೇಲೂ ಅನುಮಾನ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉದ್ಯಮಿಯಾಗಿದ್ದ ಲೋಕನಾಥ್ ಸಿಂಗ್ ವಿರುದ್ಧ ನಗರದ ಕೆಲವು ಠಾಣೆಗಳಲ್ಲಿ ಕೆಲ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.