ನಿನ್ನ ಕಾಲಿಗೆ ಬೀಳ್ತೀನಿ ಹೋಗಬೇಡ ಮಗಳೆ “ಪ್ರೀತಿಸಿದವನ ಜೊತೆಗೆ ಓಡಿ ಹೋಗಲು ತಯಾರಾಗಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ!! ವಿಡಿಯೋ ವೈರಲ್..
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಚೆನ್ನೈ: ಇಂತಹ ಮಕ್ಕಳನ್ನು ಹೆತ್ತು ಸಾಧಿಸಬೇಕಾದ್ದು ಏನು.? ಯಾರಿಗೂ ಬೇಡ ಈ ಪಾಪಿ ಮಕ್ಕಳು. ತಂದೆಯೆ ಮಗಳ ಕಾಲು ಹಿಡಿದು ಅಂಗಲಾಚುವ ಪರಿಸ್ಥಿತಿ.!
ಪ್ರೀತಿ ಎಂಬ ಮೋಹದ ಭಲೇಗೆ ಬಿಳುವ ಯುವಕ ಯುವತಿಯರು ತಂದೆತಾಯಂದಿರನ್ನೂ ಕಡೆಗಣಿಸಿ ಪ್ರೇಮಿಗಳ ಜೊತೆ ಓಡಿ ಹೋಗುವ ಸಾಕಷ್ಟು ಪ್ರಕರಣಗಳು ನಮ್ಮ ಮುಂದೆ ಸಾಲು ಸಾಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಪ್ರೀತಿಸಿ ಮದುವೆಯಾದವರಲ್ಲಿ ಆರಂಭದಲ್ಲಿ ಎಲ್ಲವೂ ಸರಿ ಇದ್ದರೂ ನಂತರ ಸಂಸಾರದ ಎಪಿಸೋಡ್ ದುಃಖ ಮಯವಾಗಿರುತ್ತದೆ.
ಹುಡುಗನಾಗಿರಲಿ ಹುಡುಗಿಯಾಗಿರಲಿ ನಾನಾ ರೀತಿಯ ಕಷ್ಟ ಅನುಭವಿಸ ಬೇಕಾಗುತ್ತದೆ. ಎಲ್ಲೊ ಬೆರಳೆಣಿಕೆಯಷ್ಟು ಜೋಡಿಗಳು ಮಾತ್ರ ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿರುತ್ತಾರೆ.
ಮಗಳ ಕಾಲಿಗೆ ಬಿದ್ದು ಅಂಗಲಾಚುತ್ತಿರುವ ತಂದೆ.!
ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ ಆತ ಮಗಳೆ ನಿನ್ನ ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ..ದಯವಿಟ್ಟು ಹೋಗಬೇಡ ಇದು ಪ್ರೀತಿಸಿದವನ ಜೊತೆಗೆ ಹೆತ್ತವರನ್ನು ಬಿಟ್ಟು ಮನೆಯಿಂದ ಹೊರಹೋಗಲು ತಯಾರಾಗಿದ್ದ ಮಗಳಿಗೆ ಅಸಾಹಯಕ ತಂದೆ ಒಬ್ಬರು ಮಗಳೆದುರು ಅಂಗಲಾಚುತ್ತಿರುವುದನ್ನು ನೋಡಿದರೆ ಈ ಸ್ಥಿತಿ ಯಾವ ತಂದೆಗೂ ಬಾರದಿರಲಿ ಅನ್ನಿಸದೆ ಇರದು ..
ಹೌದು.. ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಕ ಯುವತಿಯರು ತಂದೆ ತಾಯಂದಿರನ್ನೂ ದಿಕ್ಕರಿಸಿ ಪ್ರೀತಿಸಿದವರ ಜೊತೆಗೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ನಾವು ಮೊದಲೇ ಹೇಳಿದಂತೆ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ. ಆ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದವರು ಸಕ್ಸಸ್ ಫುಲ್ ಜೋಡಿಯಾದರೆ, ಆ ಕಷ್ಟಗಳನ್ನು ಎದುರಿಸಲಾಗದೇ ಕೆಲವರು ದೂರವಾಗುತ್ತಾರೆ. ಆದರೆ ಈ ಹಂತದಲ್ಲಿ ಮಕ್ಕಳ ಕಳೆದುಕೊಂಡು ಕೊರಗುವವರು ಮಾತ್ರ ಪೋಷಕರು.
ಅಂತಹುದೇ ಒಂದು ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು,ಮಗಳೆ ನನ್ನನ್ನು ಬಿಟ್ಟು ಹೋಗಬೇಡ ಮಗಳೇ ಎಂದು ತಂದೆಯೊಬ್ಬರು ಮಗಳೆದುರು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಮಗಳು ನಡು ರಾತ್ರಿಯಲ್ಲಿ ಪ್ರೀತಿಸಿದವನೊಂದಿಗೆ ಓಡಿ ಹೋಗಲು ತಯಾರಾದ್ದಾಳೆ.
ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮಿಂದ ದೂರವಾಗಬೇಡ.ನಮ್ಮನ್ನು ಬಿಟ್ಟು ಹೋಗಬೇಡ ಮಗಳೇ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ. ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಪ್ರೀತಿಸಿದವನೊಂದಿಗೆ ಓಡಿ ಹೋಗಲು ತಯಾರಾಗಿದ್ದಾಳೆ.ತಂದೆಯೊಬ್ಬ ಮಗಳಿಗಾಗಿ ಮಗಳ ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಎನ್ನುವ ದೃಶ್ಯ ( ವಿಡಿಯೋ) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಓಡೋಡಿ ಹೋಗುವ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.ಈ ಸ್ಥಿತಿ ಯಾವ ತಂದೆಗೂ ಬಾರದಿರಲಿ ಎಂದು ಮೇಸೆಜ್ ಮಾಡಿದ್ದಾರೆ…