ಶಿವಮೊಗ್ಗ: ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಬಾಲರಾಜ್ ಅರಸ್ ರಸ್ತೆಯ ಎಸ್ ಸಿ ಎಸ್ ಟಿ ಬಾಲಕಿಯರ ಹಾಸ್ಟೆಲ್ ಗೆ ಭೇಟಿ.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಶುಕ್ರವಾರ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಎಸ್ ಸಿ ಎಸ್ ಟಿ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ,
ಹಾಸ್ಟೆಲ್ ಮುಂಭಾಗದಲ್ಲಿ ಮುರಿದು ಬಿದ್ದಿರುವ ಚರಂಡಿ ಚೇಂಬರ್ ರಿಪೇರಿ ಮಾಡುವಂತೆ ತಾಕೀತುಮಾಡಿದ ಅವರು ತೆರೆದ , ಹಾಳಾದ ಚರಂಡಿಯಿಂದ ಸೊಳ್ಳೆ, ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ. ಸೂಕ್ತ ಕ್ರಮವಹಿಸುವಂತೆ ಸೂಚಿಸಿದರು.
ನಂತರ ಮಕ್ಕಳ ಮಲಗುವ ಕೊಠಡಿ ವೀಕ್ಷಿಸಿ, ಹಾಸಿಗೆ, ಮಂಚಗಳನ್ನು ವೀಕ್ಷಿಸಿದರು. ಸುಣ್ಣ ಬಣ್ಣ ಮಾಡುವಂತೆ ತಿಳಿಸಿದರು. ಏನೇನು ಸೌಲಭ್ಯಗಳನ್ನು ಕೊಡಬೇಕೋ ಎಲ್ಲವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಡುಗೆ ಮನೆ, ದಾಸ್ತಾನು ಕೊಠಡಿ, ತರಕಾರಿ ಶೌಚಾಲಯ ವೀಕ್ಷಿಸಿ, ಒಡೆದು ಹೋದ ಕಿಟಕಿಗಾಜು, ಪರದೆಯನ್ನು ಶೀಘ್ರ ವೇ ಹಾಕಿಸುವಂತೆ ಸೂಚಿಸಿದರು. ಶೌಚಾಲಯ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಹಾಸ್ಟೆಲ್ ನ ಹಳೆಯ ಕೊಠಡಿಯಲ್ಲಿರುವ ಹಳೆಯ ಮತ್ತು ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಬೇಕು. ದಾಸ್ತಾನು ಮಾಡಲಾಗಿದ್ದ ಪುಸ್ತಕ ಗಳನ್ನು ರ್ಯಾಕ್ ಗಳಲ್ಲಿ ಜೋಡಿಸಿ, ರೀಡಿಂಗ್ ಕೊಠಡಿ ಮಾಡಿ, ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡಬೇಕು. ಹಾಸ್ಟೆಲ್ ಅಷ್ಟು
ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ, ಹೀಗೇ ಮುಂದುವರಿದರೆ ಕ್ರಮವಹಿಸಲಾಗುವುದು ಎಂದರು.