ನಾಂಪಲ್ಲಿ ಕೊರ್ಟ್ ನಲ್ಲಿ 14 ದಿನ ಜೈಲ್, ಹೈಕೋರ್ಟ್‌ನಿಂದ ಬೇಲ್ ! ಬೇಲ್ ಸಿಕ್ಕರು ನಟ ಅಲ್ಲು ಅರ್ಜುನ್ ಜೈಲಲ್ಲೆ.!
ಅಶ್ವಸೂರ್ಯ/ಶಿವಮೊಗ್ಗ: ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದ ಬಳಿ ಕಾಲ್ತುಳಿತದಲ್ಲಿ ಮಹಿಳೆ ಒಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಪುಷ್ಪ-2 ಖ್ಯಾತಿಯ ನಟ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮೃತ ರೇವತಿ ಅವರ ಪತಿ ಭಾಸ್ಕರ್ ನೀಡಿದ ದೂರಿನ ಮೇಲೆ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಅಲ್ಲು ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದರು. ಇದೀಗ ಭಾಸ್ಕರ್ ದೂರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಭಾಸ್ಕರ್, ದೂರನ್ನು ಹಿಂಪಡೆಯಲು ನಾನು ಸಿದ್ಧ.
ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ನಿರಪರಾಧಿ. ಅಲ್ಲು ಅರ್ಜುನ್ ಅವರನ್ನು ಬಂಧಿಸುತ್ತಾರೆ ಎಂದು ನಾನು ಅಂದು ಕೊಂಡಿರಲಿಲ್ಲ. ಕಾಲ್ತುಳಿತದಿಂದ ಪತ್ನಿ ಮರಣ ಹೊಂದಿದ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲಎಂದು ತಿಳಿಸಿದ್ದಾರೆ.ಈ ಬೆಳವಣಿಗೆಯಿಂದ ಈ ಪ್ರಕರಣಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ಜಾಮೀನು ಸಿಕ್ಕರು ಬಿಡುಗಡೆ ಇಲ್ಲಾ.!
ಜಾಮೀನು ಪ್ರಕ್ರಿಯೆ ವಿಳಂಬವಾದ ಕಾರಣಕ್ಕೆ ಅಲ್ಲು ಅರ್ಜುನ್ ರಾತ್ರಿ ಜೈಲಿನಲ್ಲೇ ಕಳೆಯ ಬೇಕಾಯಿತು ಅಲ್ಲು ಅರ್ಜುನ ಜಾಮೀನು ಪ್ರಕ್ರಿಯೆ ವಿಳಂಬವಾಯುತು ಈ ಕಾರಣದಿಂದ ನಟ ಅಲ್ಲು ಅರ್ಜುನ್ ಚಂಚಲ್‌ಗುಡ ಜೈಲಲ್ಲೇ ಉಳಿಯುವಂತಾಗಿದೆ. ಶನಿವಾರ ಆದೇಶ ಪ್ರತಿ ತಲುಪಿದರೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅರ್ಜುನ್ ಅವರು ಹೈದರಾಬಾದ್ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದಾರೆ.
ಬಂಧನದ ಬಗ್ಗೆ ವಾಕ್ಸಮರ: ಅರ್ಜುನ್ ಬಂಧನ ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸಾವಾಗಿದೆ. ಕಾಂಗ್ರೆಸ್ ವಿರೋಧಿ ಪಕ್ಷಗಳು, ಚಿತ್ರರಂಗದ ಗಣ್ಯರು.ದೇಶದಾದ್ಯಂತ ಕೋಟ್ಯಾಂತರ ಅಲ್ಲು ಅಭಿಮಾನಿಗಳು ಈ ಬಂಧನ ವಿರೋಧಿಸಿದ್ದರು. ಸಿಎಂ ರೇವಂತ ರೆಡ್ಡಿ ವಿರುದ್ಧ ಕಿಡಿಕಾರಿದ್ದ ಅವರು, ‘ಸಾವಿಗೆ ಅರ್ಜುನ್ ಒಬ್ಬರನ್ನೇ ಹೊಣೆ ಮಾಡುವುದು ಸರಿ ಅಲ್ಲಾ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರು.ಸೋಷಿಯಲ್ ಮಿಡಿಯಾಗಳಲ್ಲಿ ನಟ ಅಲ್ಲು ಅರ್ಜುನ್ ಪರ ಧ್ವನಿ ಕೇಳಿ ಬಂದಿದೆ.ಅದರೆ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಪೊಲೀಸರು, ‘ಸಿನಿಮಾದ ಪ್ರೀಮಿಯರ್ ಪ್ರದರ್ಶನಕ್ಕೆ ಚಿತ್ರದ ತಾರಾಗಣ ಬರುವ ಬಗ್ಗೆ ನಟ ಅಥವಾ ಚಿತ್ರಮಂದಿರದವರು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಜಾಮೀನು ನೀಡಿದ ಹೈಕೋರ್ಟ್: ಇದೆಲ್ಲದರ ಬಳಿಕ ಸಂಜೆ 5.30ರ ಸುಮಾರಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ಆದೇಶ ಹೊರಡಿಸಿತು. ನಟ ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು ನೀಡಬೇಕು.ಕೇವಲ ಪ್ರೀಮಿಯರ್ ನೋಡಲು ಹೋದರೆಂಬ ಕಾರಣಕ್ಕೆ ಅವರು ಕಾಲ್ತುಳಿತದಲ್ಲಿ ಅದ ಸಾವಿಗೆ ಕಾರಣ ಎಂದು ಹೇಳಲಾಗದು ಎಂದು ಹೇಳಿ 4 ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದೆ. ಜೊತೆಗೆ ಇಬ್ಬರು ಚಿತ್ರಮಂದಿರದ ಮಾಲೀಕರಿಗೂ ಜಾಮೀನು ನೀಡಿದೆ, ಅಲ್ಲಿಯವರೆಗೆ ಪೊಲೀಸರಿಗೆ ತನಿಖೆ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ ಹಾಗೂ ವಿಚಾರಣೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ನಿರ್ದೇಶಿಸಿದೆ.