ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಜೀವನ: ಹೇಳೋರಿಲ್ಲ ಕೇಳೋರಿಲ್ಲ ಕೆಲವು ಖೈದಿಗಳು ಅಡಿದ್ದೆ ಆಟ.!
ಅಶ್ವಸೂರ್ಯ/ಶಿವಮೊಗ್ಗ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಬಿಂದಾಸ್ ಜೀವನ ನೆಡೆಸುತ್ತಿದ್ದಾರೆ. ಖೈದಿಗಳಿಗೆ ಜೈಲು ಮಾವನ ಮನೆಯಂತಾಗಿದೆ.ಹಣ ಕೊಟ್ಟರೆ ಎನು ಬೇಕಾದರು ಸೀಗೊತ್ತೆ ಎನ್ನುವುದು ಕಲಬುರಗಿ ಜೈಲಿನ ಕರ್ಮಕಾಂಡದಿಂದ ಮತ್ತೊಮ್ಮೆ ಬಯಲಾಗಿದೆ.! ಮೊಬೈಲ್ ಬಳಕೆ, ಧೂಮಪಾನ ಮತ್ತು ಮದ್ಯಪಾನ ಇನ್ನಿತರ ಚಟುವಟಿಕೆಗಳಲ್ಲಿ ಖೈದಿಗಳು ತೊಡಗಿರುವ ವಿಡಿಯೋಗಳು ಇದೀಗಾ ವೈರಲ್ ಆಗಿವೆ. ಜೈಲು ಅಧಿಕ್ಷಕಿ ವಿರುದ್ಧ ಷಡ್ಯಂತ್ರ ನಡೆದಿದೆಯೇ ಎಂಬ ಅನುಮಾನಕೂಡ ಬಲವಾಗಿ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ಸತ್ಯ ಸತ್ಯತೆಯನ್ನು ಬಯಲುಮಾಡಬೇಕಿದೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ಬಿಂದಾಸ್ ಜೀವನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೊಬೈಲ್ ಬಳಕೆ, ಸಿಗರೇಟ್ ಸೇದುವುದು, ಎಣ್ಣೆ ಪಾರ್ಟಿಯ ವಿಡಿಯೋ, ರಾಶಿರಾಶಿ ಗುಟ್ಕಾ, ಸಿಗರೇಟ್ ವಿಡಿಯೋಗಳು. ಮತ್ತೊಂದೆಡೆ ಕೈದಿಗಳಿಬ್ಬರು ಹಣ ಮುಂದಿಟ್ಟುಕೊಂಡು ಜೈಲು ಅಧಿಕ್ಷಕಿ ಅನೀತಾ ಮೇಡಂಗೆ ದುಡ್ಡು ಕೊಡೋದಿದೆ ಎನ್ನುತ್ತಿರುವ ಖೈದಿ. ಸುರೇಶ್ ಎಂಬಾತನ ಮೂಲಕ ಡೀಲ್ ಕುದುರಿಸಿಕೊಳ್ಳಲು ಸಲಹೆ ನೀಡಿದ ಖೈದಿ. ಈ ಮೂಲಕ 35 ಸಾವಿರ ರೂ ಹಣ ಜೈಲು ಅಧಿಕ್ಷಕಿ ಡಾ ಅನೀತಾಗೆ ನೀಡಲು ಖೈದಿಗಳ ನಡುವೆ ಮಾತುಕತೆ ನಡೆದಿರುವ ವಿಡಿಯೋಗಳು ಹರಿಬಿಟ್ಟಿರುವ ಉದ್ದೇಶವೇ ಅಧೀಕ್ಷಕಿ ಡಾ. ಅನೀತಾ ವಿರುದ್ದದ ಷಡ್ಯಂತ್ರವಾ ?ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.ಕೆಲವು ಜೈಲು ಸಿಬ್ಬಂದಿಗಳೆ ಈ ಷಡ್ಯಂತ್ರದ ಸೂತ್ರಧಾರಿಗಳ ಎಂದು ಇಲಾಖಾ ವಲಯದಲ್ಲಿ ಕೇಳಿಬರುತ್ತಿದೆ.!
ಜೈಲಿನಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾದರು ಅಧೀಕ್ಷಕಿ ಡಾ. ಅನಿತಾ ಅವರ ಗಮನಕ್ಕೆ ಬಾರದೆ ಹೋಯಿತೆ.? ಜೈಲಿನಲ್ಲಿ ಇಷ್ಟೆಲ್ಲಾ ಸಿಗರೆಟ್,ಬಿಡಿ, ಗುಟ್ಕಾ,ಮೊಬೈಲ್ ಫೋನ್ ಇನ್ನಿತರೆ ವಸ್ತುಗಳು ಪೂರೈಕೆಯಾಗಿದ್ದು ಯಾವಾಗ ?ಇಷ್ಟೆಲ್ಲಾ ಅಕ್ರಮಕ್ಕೆ ಜೈಲಿನ ಕೆಲ ಸಿಬ್ಬಂದಿಗಳೂ ಇದರಲ್ಲಿ ಶಾಮೀಲಿಗಿರುವುದರಲ್ಲಿ ಯಾವುದೇ ಅನುಮಾನ ಬೇಡ.ಈ ಕಾರಣದಿಂದಲೆ ಕಲಬುರಗಿ ಜೈಲಿನ ಆರು ಖೈದಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಗ ವೈರಲ್ ಆಗಿರುವ ವಿಡಿಯೋಗಳು ಹಳೆಯದ ಅಥವಾ ಇತ್ತೀಚಿಗಿನ ದಿನದ ಎನ್ನುವುದರ ಖಚಿತೆ ಮಾಹಿತ ಇಲ್ಲಾ.?
ಆದರೆ ಈ ವಿಡಿಯೋಗಳೆಲ್ಲಾ ಅನಿತಾ ಅವರು ಅಧಿಕ್ಷಕಿಯಾಗಿ ಬಂದ ನಂತರದ್ದೇ ಎಂದು ಹೇಳಲಾಗುತ್ತಿದೆ.! ಇಲ್ಲಿ ಎಲ್ಲರಿಗೂ ಈ ಸೌಲಭ್ಯವಿಲ್ಲ ಕೆಲವರಿಗಷ್ಟೇ ಕಲಬುರಗಿ ಜೈಲಿನಲ್ಲಿ ಬಿಂದಾಸ್ ಬದುಕಿಗೆ ಬೇಕಾದ ಸೌಲಭ್ಯ ಸಿಗುತ್ತಿದೆ ಎನ್ನಲಾಗುತ್ತಿದೆ.? ಇಷ್ಟೆಲ್ಲಾ ಬೆಳವಣಿಗೆಯಾಗಿ ಕಲಬುರಗಿ ಜೈಲಿನ ಕರ್ಮಕಾಂಡ ಬಿದಿಗೆಬಿದ್ದಿದೆ, ರಾಜ್ಯ ಸರ್ಕಾರ ದಕ್ಷ ಅಧಿಕಾರಿಗಳ ಮಟ್ಟದಲ್ಲಿ ಕಲಬುರಗಿ ಜೈಲಿನ ತನಿಖೆಮಾಡಿ ಈ ಪ್ರಕರಣದ ಸತ್ಯಾಂಶವನ್ನು ಹೊರತಂದು ಜೈಲಿನ ಅಕ್ರಮಕ್ಕೆ ಕಾರಣರಾದವರಿಗೆ ಸರಿಯಾದ ಶಿಕ್ಷೆ ನೀಡಬೇಕಿದೆ..