ಕುವೆಂಪು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಹ್ಯಾದ್ರಿ ಉತ್ಸವ.
ಅಶ್ವಸೂರ್ಯ/ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗವು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಮೂರು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಲಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ ಸಂಚಾಲಕ ನೆಲ್ಲಿಕಟ್ಟೆ ಸಿದ್ದೇಶ್, ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ, ಬಯಲಾಟ, ಮಲೆನಾಡಿನ ಪುರುಷ ಮತ್ತು ಮಹಿಳೆಯರ ಸಂಪ್ರದಾಯಿಕ ಉಡುಪು, ಕೊಡವ, ಲಂಬಾನಿ, ಬುಡಕಟ್ಟು ವೇಷಧಾರಿಗಳು, ಪೂಜಾ ಕುಣಿತ, ಸೋಮನಕುಣಿತ, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಕಂಸಾಲೆ, ವೀರನಾರಿಯರು,
ದೇವತೆಗಳ ಅಷ್ಟವತಾರ, ಸಾಧಕರು, ಮತ್ತಿತರರು ವೇಷಭೂಷಣಗಳನ್ನು ಧರಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಆಯ್ದ ಕಾಲೇಜುಗಳ ಸುಮಾರು 2000ಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಸಹ್ಯಾದ್ರಿ ಉತ್ಸವ ಹಬ್ಬದ ವಾತಾವರಣ ನಿರ್ಮಾಣವಾಗಿದೆ: ಪ್ರೋ.ಶರತ್ ಅನಂತಮೂರ್ತಿ
ಅಶ್ವಸೂರ್ಯ/ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಹ್ಯಾದ್ರಿ ಉತ್ಸವ ರಾಜ್ಯದ ವಿವಿಧ ಬಗೆಯ ಸಾಂಸ್ಕೃತಿಕ ವೈವಿದ್ಯತೆಯನ್ನು ಪ್ರತಿನಿಧಿಸುವ ಉತ್ಸವವಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಸೊಬಗನ್ನು ಪರಿಚಯಿಸಲು ಇದು ಸಹಕಾರಿಯಾಗಿದೆ. ವಿವಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ದಾರೆ.
ಅಂತರ್ ಕಾಲೇಜು ವಿದ್ಯಾರ್ಥಿಗಳಲ್ಲಿ ಭಾಂದವ್ಯವನ್ನು ಮೂಡಿಸುವ ವೇದಿಕೆಯಾಗಿದ್ದು ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಈ ಉತ್ಸವದಿಂದ ವಿವಿಯ ಹೆಸರು ಇನ್ನೂ ಹೆಚ್ಚು ಪ್ರಜ್ವಲಿಸಲಿದ್ದು, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳು ಮಾತ್ರವಲ್ಲದೇ ಜಿಲ್ಲೆಯ 80 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಹಲವಾರು ವರ್ಷಗಳಿಂದ ಸಹ್ಯಾದ್ರಿ ಉತ್ಸವ ನಿಂತುಹೋಗಿತ್ತು ವಿವಿಯ ಎಲ್ಲಾ ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿಗಳ ಶ್ರಮದಿಂದ ಪುನರ್ ಆರಂಭಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ರೀತಿಯ ಸ್ಪರ್ದೆಗಳು ಮೂರು ದಿನಗಳ ಕಾಲ ನಡೆಯಲಿದ್ದು ಇಡೀ ವಿಶ್ವವಿದ್ಯಾಲಯದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ ಎಂದರು.
ಮೆರವಣಿಗೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಕಲಾಮೇಳಗಳು, ವೇಷಭೂಷಣಗಳು ಗಮನ ಸೆಳೆದಿದ್ದು, ಡೊಳ್ಳು ಕುಣಿತ, ಯಕ್ಷಗಾನ, ಬಯಲಾಟ, ಮಲೆನಾಡಿನ ಪುರುಷ ಮತ್ತು ಮಹಿಳೆಯರ ಸಾಂಪ್ರದಾಯಿಕ ಉಡುಪು, ದೀವರ ಸಂಸ್ಕೃತಿ, ಕೊಡವ, ಲಂಬಾಣಿ, ಬುಡಕಟ್ಟು ವೇಷಧಾರಿಗಳು, ಪೂಜಾ ಕುಣಿತ, ಹುಲಿಕುಣಿತ, ಕಾಂತಾರ ದೈವ ಕುಣಿತ, ದಸರ ಉತ್ಸವದ ನವ ದುರ್ಗೆಯರ ಅವತಾರ, ಸೋಮನಕುಣಿತ, ನಂದಿಕೋಲು, ವೀರಗಾಸೆ, ಕಂಸಾಲೆ, ವೀರನಾರಿಯರು, ದೇವತೆಗಳ ಅಷ್ಟವತಾರ, ಸಾಧಕರು ಮತ್ತಿತರ ವೇಷಭೂಷಣಗಳನ್ನು ಧರಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಆಯ್ದ ಕಾಲೇಜುಗಳ ಸುಮಾರು 3000ಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ ಸಂಚಾಲಕ ನೆಲ್ಲಿಕಟ್ಟೆ ಸಿದ್ದೇಶ್, ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸಹ್ಯಾದ್ರಿ ಉತ್ಸವ 5 ವರ್ಷಗಳ ನಂತರ ಮತ್ತೆ ಆರಂಭಿಸಿದ್ದು ಸ್ಪರ್ದೆಯಲ್ಲಿ ಭಾಗವಹಿಸಲು ನಮಗೆ ಸಂತೋಷವಾಗಿದೆ. ಸಹ್ಯಾದ್ರಿ ಉತ್ಸವ ಬಗ್ಗೆ ನಾವು ನಮ್ಮ ಹಿರಿಯ ವಿದ್ಯಾರ್ಥಿಗಳಿಂದ ಕೇಳಿದ್ದೇವೆ ಈಗ ಸ್ವತಃ ನಾವೆ ನೊಡಿ ಆನಂದಿಸುತ್ತಿದ್ದೇವೆ.
- ಅಂಕಿತ ವಿದ್ಯಾರ್ಥಿನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ.
ಸಹ್ಯಾದ್ರಿ ಉತ್ಸವವೂ ಒಂದು ಹಬ್ಬದ ರೀತಿಯಲ್ಲಿ ನಡೆಸಲಾಗುತ್ತಿದ್ದು ಕರ್ನಾಟಕ ರಾಜ್ಯವ ವಿವಿಧ ಜಿಲ್ಲೆಗಳ ವೇಷಭೂಷಣ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದು ನಾವು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ. ಒಂದೊಂದು ಕಲಾ ಮೇಳಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು ನಾವು ಇದನ್ನು ಸ್ಪರ್ಧೆ ಎಂದುಕೊಳ್ಳದೇ ಸಂಭ್ರಮದಿಂದ ಭಾಗವಹಿಸಿದ್ದೇವೆ.
- ಇಂಚರ ವಿದ್ಯಾರ್ಥಿನಿ- ಕಮಲಾ ನೆಹರು ಕಾಲೇಜು ಶಿವಮೊಗ್ಗ.