Headlines

ಶಿವಮೊಗ್ಗ ಪಶ್ಚಿಮ ವಲಯ ಸಂಚಾರ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ – 2024

ಶಿವಮೊಗ್ಗ ಪಶ್ಚಿಮ ವಲಯ ಸಂಚಾರ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ –2024

 

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಚರಿಸಲಾಗುತ್ತಿರುವ ಅಪರಾಧ ತಡೆ ಮಾಸಾಚರಣೆ–2024 ರ ಅಂಗವಾಗಿ, ದಿನಾಂಕ,ಡಿ 09 ರಂದು ಬೆಳಗ್ಗೆ ಶ್ರೀ ತಿರುಮಲೇಶ್ ಪಿಎಸ್ಐ ಶಿವಮೊಗ್ಗ ಪಶ್ಚಿಮ ವಲಯ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ KSRCT ಬಸ್ ನಿಲ್ದಾಣದ ಹತ್ತಿರದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಈ ಕೆಳಕಂಡ ಮಾಹಿತಿಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಿದ್ದಾರೆ.

1) 18 ವರ್ಷಕ್ಕಿಂತ ಕಡಿಮೆವಯಸ್ಸಿನವರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಚಾಲನಾ ಪರವಾನಿಗೆಯನ್ನು ಪಡೆದ ನಂತರವೇ ವಾಹನವನ್ನು ಚಾಲನೆ ಮಾಡಬೇಕು.

2) ಮಧ್ಯ ಸೇವನೆ ಮಾಡಿ / ಯಾವುದೇ ಮಾದಕ ದ್ರವ್ಯಗಳ ಅಮಲಿನಲ್ಲಿ, ವಾಹನ ಚಾಲನೆ ಮಾಡಬೇಡಿ,

3) ವಾಹನಗಳಲ್ಲಿ ಮಾರ್ಪಡಿಸಿದ / ದೋಷಪೂರಿತ ಸೈಲೆನ್ಸರ್ ಗಳ ಬಳಕೆ ಮತ್ತು ಕರ್ಕಷ ಶಬ್ದವನ್ನುಂಟು ಮಾಡುವ ಹಾರ್ನ್ ಗಳ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

4) ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ದ್ವಿ ಚಕ್ರ ವಾಹನದ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಅನ್ನು ಧರಿಸಿ ಮತ್ತು ಕಾರು / ನಾಲ್ಕು ಚಕ್ರದ ವಾಹನ ಚಾಲಕ ಹಾಗೂ ಸವಾರರು ಸೀಟ್ ಬೆಲ್ಟ್ ಅನ್ನು ಧರಿಸಿ ವಾಹನ ಚಾಲನೆ ಮಾಡಬೇಕು

5) ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಿದ್ದು, ವಿಮೆಯ ಚಾಲ್ತಿ ಅವಧಿ ಮುಕ್ತಾಯವಾಗಿದ್ದರೆ ತಕ್ಷಣವೇ ವಿಮೆಯನ್ನು ಮರು ನವೀಕರಿಸಿ, ಅಪಘಾತದಂತಹ ಸಂದರ್ಭದಲ್ಲಿ ಭರಿಸಲಾಗದ ಆರ್ಥಿಕ ಹೊರೆಯಿಂದ ಸುರಕ್ಷಿತವಾಗಿರಿ ಎಂದು ಮಾಹಿತಿ ತಿಳಿಸಿಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರು ಹಾಗೂ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

Optimized by Optimole
error: Content is protected !!