ಚಿಕ್ಕಮಗಳೂರು: ಪತಿಯ ಜೊತೆ ತೆರಳಿದ್ದಕ್ಕೆ ಮಹಿಳೆ ಕೊಲೆ, ಆರೋಪಿ ಪ್ರಿಯಕರನನ್ನು ಬಂಧಿಸಿದ ಪೊಲೀಸರು
ಅಶ್ವಸೂರ್ಯ/ಚಿಕ್ಕಮಗಳೂರು: ತನ್ನನ್ನು ಬಿಟ್ಟು ಪತಿಯ ಜೊತೆಗೆ ಹೋಗಿದ್ದ ಕಾರಣಕ್ಕೆ ಆಕೆಯ ಮಕ್ಕಳ ಎದುರಲ್ಲೇ ಮಹಿಳೆಯನ್ನು ಪ್ರಿಯಕರ ಬರ್ಬರವಾಗಿ ಹತ್ಯೆಗೈದ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದ.! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದ ಆರೋಪಿಯನ್ನು ಕೇವಲ ಐದು ಗಂಟೆಯ ಅವಧಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಿಯತಮೆಯನ್ನು ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಆರೋಪಿ ಚಿರಂಜೀವಿ ಪ್ರಿಯತಮೆ ತೃಪ್ತಿ (25 ವರ್ಷ)ಯ ಶವವನ್ನು ಹೊಂಡಕ್ಕೆ ಎಸೆದು ಎಸ್ಕೇಪ್ ಆಗಿದ್ದ. ಆರೋಪಿ ಪತ್ತೆಗಾಗಿ ಭಲೇ ಬಿಸಿದ್ದಿ ಬಾಳೆಹೊನ್ನೂರು ಪೊಲೀಸರ ತಂಡ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಚರಣೆಗೆ ಇಳಿದು ಆರೋಪಿ ಚಿರಂಜೀವಿ ಕಾಡಿನಲ್ಲಿ ಅವಿತುಕೊಂಡಿರುವ ಮಾಹಿತಿ ಸಿಕ್ಕ ಕೂಡಲೆ ಕಾರ್ಯಚರಣೆಗೆ ಇಳಿದಿದ್ದಾರೆ. ಆರೋಪಿ ಹತ್ಯೆಮಾಡಿದ ಸ್ಥಳದಿಂದ ಸುಮಾರು 6 ಕಿ.ಮೀ. ದೂರದಲ್ಲಿನ ಬಾಳೆಹೊನ್ನೂರಿನ ಗಡಿಗೇಶ್ವರ ಬಳಿಯಲ್ಲಿ ಆರೋಪಿ ಚಿರಂಜೀವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ತೃಪ್ತಿ ಮತ್ತು ಚಿರಂಜೀವಿ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಒಂದು ತಿಂಗಳು ತೃಪ್ತಿ ಪ್ರಿಯಕರ ಚಿರಂಜೀವಿ ಜೋತೆಗೆ ಓಡಿ ಹೋಗಿದ್ದಳಂತೆ. ಪತಿ ರಾಜು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ವಿಜಯಪುರದಲ್ಲಿ ತಲೆಮರೆಸಿಕೊಂಡಿದ್ದ ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿಯನ್ನು ಪೊಲೀಸರು ಹುಡುಕಿ ಕರೆತಂದಿದ್ದರು. ಪೋಷಕರ ಸಂಧಾನದ ಬಳಿಕ ಪತಿ ರಾಜುವಿನ ಜೊತೆ ತೃಪ್ತಿ ವಾಪಸ್ಸು ತೆರಳಿದ್ದಳು ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.