Headlines

ಕೊಲೆ ಮಾಡದಿದ್ದರು 30 ವರ್ಷ ಜೈಲು ಶಿಕ್ಷೆ.!ಬಿಡುಗಡಯ ನಂತರ ಪರಿಹಾರವಾಗಿ ಸಿಕ್ತು 1,097,325,554 ರೂಪಾಯಿ..!

ಕೊಲೆ ಮಾಡದಿದ್ದರು 30 ವರ್ಷ ಜೈಲು ಶಿಕ್ಷೆ.!ಬಿಡುಗಡಯ ನಂತರ ಪರಿಹಾರವಾಗಿ ಸಿಕ್ತು 1,097,325,554 ರೂಪಾಯಿ..!

ಅಶ್ವಸೂರ್ಯ/ನ್ಯೂಯಾರ್ಕ್: ತಾನು ಕೊಲೆ ಮಾಡದಿದ್ದರೂ ಅಮೆರಿಕಾದ ವ್ಯಕ್ತಿಯೊಬ್ಬ ಸುಮಾರು ಮೂವತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಶಿಕ್ಷೆ ಅನುಭವಿಸಿದ ವ್ಯಕ್ತಿ ಅಪರಾಧಿಯಲ್ಲ ಎನ್ನುವ ವಿಚಾರ ಬೆಳಕಿಗೆ ಬಂದ ನಂತರ ಪರಿಹಾರವಾಗಿ ಭಾರೀ ಮೊತ್ತವನ್ನು ಪಡೆದಿದ್ದಾರೆ.
ಅಪರಾಧಿ ಎನ್ನುವ ಕಾರಣಕ್ಕಾಗಿ ಶಿಕ್ಷೆಗೊಳಗಾಗಿದ್ದ ಮೈಕೆಲ್ ಸುಲ್ಲಿವಾನ್ ಅವರು ಜೈಲು ಶಿಕ್ಷೆ ಒಳಗಾದ ಸಂಧರ್ಭದಲ್ಲಿ ಅವರ ತಾಯಿ ಮತ್ತು ನಾಲ್ವರು ಒಡಹುಟ್ಟಿದವರನ್ನು ಕಳೆದುಕೊಂಡಿದ್ದರಂತೆ.ಇವರ ಗೆಳತಿ ಕೂಡ ಮತ್ತೊಬ್ಬರೊಂದಿಗೆ ಜೀವನ ಆರಂಭಿಸಿದ್ದಳಂತೆ. ಅಲ್ಲದೇ ಸಾಕಷ್ಟು ಬಾರಿ ಜೈಲು ದಾಳಿಗಳಲ್ಲಿ ಕ್ರೂರವಾಗಿ ಥಳಿಸಲ್ಪಟ್ಟಿದ್ದರಂತೆ.
ಈ ತಿಂಗಳ ಆರಂಭದಲ್ಲಿ, 64 ವರ್ಷದ ಸುಲ್ಲಿವಾನ್ ಅವರು 1986 ರ ವಿಲ್ಫ್ರೆಡ್ ಮೆಕ್‌ಗ್ರಾತ್‌ನ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ನಿರಪರಾಧಿ ಎಂದು ಮ್ಯಾಸಚೂಸೆಟ್ಸ್ ನ್ಯಾಯಾಲಯ ತೀರ್ಪು ನೀಡಿದ್ದು, ಅವರಿಗೆ 13 ಮಿಲಿಯನ್ ಅಮೆರಿಕನ್‌ ಡಾಲರ್‌ ನೀಡಲಾಯಿತು, ಆದರೂ ರಾಜ್ಯದ ನಿಯಮಗಳು ತಪ್ಪಾದ ಅಪರಾಧಗಳಿಗೆ USD 1 ಮಿಲಿಯನ್ ಪರಿಹಾರ ನೀಡುತ್ತವೆ.

1987 ರ ಪ್ರಕರಣದ ಹಿನ್ನಲೆ ಏನು?
ಅಂದು ಮೆಕ್‌ಗ್ರಾತ್‌ ಎಂಬಾತನನ್ನು ದರೋಡೆ ಮಾಡಿ ಥಳಿಸಲಾಗಿದ್ದು, ಇದರ ಪರಿಣಾಮ ಸಾವಿಗೀಡಾದ ನಂತರ ಸೂಪರ್‌ ಮಾರ್ಕೆಟ್‌ನ ಹಿಂದೆ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಸುಲ್ಲಿವಾನ್‌ ರನ್ನು ಬಂಧಿಸಲಾಗಿತ್ತು.
“ನಾನು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದೇನೆ ಎಂದು ನನಗೆ ನಂಬಲಾಗಲಿಲ್ಲ” ಎಂದು ಸುಲ್ಲಿವಾನ್ ಹೇಳಿದ್ದರು. ತೀರ್ಪು ಬಂದಾಗ ನನ್ನ ತಾಯಿ, ಸಹೋದರರು ಅಳುತ್ತಿದ್ದರು. ನಾನೂ ಅಳುತ್ತಿದ್ದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಇದು ತುಂಬಾ ಕಷ್ಟಕರವಾಗಿತ್ತು ಎಂದಿದ್ದಾರೆ. ಅಂತಿಮವಾಗಿ ಮಾಡದ ಕೊಲೆಗಾಗಿ ಜೈಲು ಶಿಕ್ಷೆಗೊಳಗಾಗಿದ್ದ ಸುಲ್ಲಿವಾನ್‌ ಬಿಡುಗಡೆಗೊಂಡಿದ್ದು, ಪರಿಹಾವನ್ನೂ ಪಡೆದರು.

Leave a Reply

Your email address will not be published. Required fields are marked *

Optimized by Optimole
error: Content is protected !!