ಪ್ರೀತಿಸಿದವನಿಗಾಗಿ ಹೆತ್ತವರಿಗೆ ಕೈ ಕೊಟ್ಟ ಯುವತಿ.!ಮದುವೆಯಾದ ಮೂರೆ ತಿಂಗಳಿಗೆ ಮಸಣ ಸೇರಿದಳು.!
ಅಶ್ವಸೂರ್ಯ/ಶಿವಮೊಗ್ಗ: ತಿರುವನಂತಪುರಂ ಜಿಲ್ಲೆಯ. ಪಾಲೋಡ್‌ನ ಇಳವಟ್ಟಂನಲ್ಲಿ ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದ್ದು. ಮಗಳ ಸಾವಿನ ಬಗ್ಗೆ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಾಲೋಡ್ – ಇಟಿಂಜಾರ್ ಕೊಳಚಲ್ ಕೊನ್ನಮೂಡ್ ಮೂಲದ ಇಂದುಜಾ (25) ಕಳೆದ ಶುಕ್ರವಾರ (ಡಿ,06) ಮಧ್ಯಾಹ್ನ ಗಂಡನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಪ್ರೀತಿಸಿ ಮದುಯಾಗಿ ಗಂಡನ ಮನೆ ಸೇರಿದ್ದ ಯುವತಿಗೆ ನಿತ್ಯ ಮಾನಸಿಕ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದರಂತೆ.!
ಮಗಳು ಗಂಡನ ಮನೆಯಲ್ಲಿ ಚಿತ್ರಹಿಂಸೆಗೆ ಒಳಗಾಗಿದ್ದಳು ಈ ಎಲ್ಲ ವಿಷಯವನ್ನು ಮಗಳು ನಮಗೆ ತಿಳಿಸಿದ್ದಳು. ನಮ್ಮ ಮನೆಗೆ ಬರಲು ನಮ್ಮ ಮಗಳಿಗೆ ಬಿಡುತ್ತಿರಲಿಲ್ಲ. ಎಂದು ಇಂದುಜಾಳ ಕುಟುಂಬದವರು ಆಕೆಯ ಗಂಡನ ವಿರುದ್ಧ ಆರೋಪಿಸಿದ್ದಾರೆ. ಮಗಳ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಅವಳ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲೋಡ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 1.30ಕ್ಕೆ ಇಂದುಜಾಳನ್ನು ಗಂಡ ಅಭಿಜಿತ್‌ರ ಮನೆಯ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಯ ಕಿಟಕಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ.. ಅಭಿಜಿತ್ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣವೇ ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮೂರು ತಿಂಗಳ ಹಿಂದಷ್ಟೇ ಇಂದುಜಾಳನ್ನು ಅಭಿಜಿತ್ ಆಕೆಯ ಮನೆಯಿಂದ ಓಡಿಸಿಕೊಂಡು ಹೋಗಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದನಂತೆ.! ಆ ಬಳಿಕ ಇಂದುಜಾ, ಅಭಿಜಿತ್ ಮನೆಯಲ್ಲಿಯೇ ವಾಸವಿದ್ದಳು. ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಭಿಜಿತ್ ಖಾಸಗಿ ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ನಡೆದಾಗ ಮನೆಯಲ್ಲಿ ಅಭಿಜಿತ್‌ರ ಅಜ್ಜಿ ಮಾತ್ರ ಇದ್ದರು.
ಇಂದುಜಾ ತನ್ನ ತಾಯಿ ಮತ್ತು ಸಹೋದರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಗಂಡನ ಮನೆಯವರು ಹೇಳಿದ್ದಾರೆ.. ಅಭಿಜಿತ್‌ರ ಮನೆಯಲ್ಲಿ ಮಾನಸಿಕ ಕಿರುಕುಳ ಅನುಭವಿಸಿದ್ದಾಗಿ ಮಗಳು ಹೇಳಿದ್ದಾಳೆ ಎಂದು ಇಂದುಜಾಳ ಕುಟುಂಬದವರು ದೂರುತಿದ್ದಾರೆ. ಮಗಳ ಸಾವಿನಲ್ಲಿ ಸಾಕಷ್ಟು ಅನುಮಾನವಿದೆ ಎಂದು ಇಂದುಜಾಳ ತಂದೆ ಪಾಲೋಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹವನ್ನು ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರೀತಿ ಪ್ರೇಮದ ಸುಳಿಗೆ ಸಿಲುಕಿದ ಇಂದುಜಾ, ಹೆತ್ತವರನ್ನೆ ತೊರೆದು ಪ್ರೀತಿಸಿದವನ ಜೋತೆಗೆ ಓಡಿಹೋಗಿ ಮದುವೆಯಾದ ಮೂರೆ ತಿಂಗಳಿಗೆ ಮಸಣದ ಹಾದಿ ಹಿಡಿದಿದ್ದಾಳೆ….ಹೆತ್ತವರ ಮಾತು ಕೇಳಿ ಬದುಕು ಕಟ್ಟಿಕೊಂಡಿದ್ದರೆ ನೆಮ್ಮದಿಯ ಜೀವನ ಕಾಣಬಹುದಿತ್ತೇನೊ.?ಆದರೆ ಬಾಳಿ ಬದುಕ ಬೇಕಾಗಿದ್ದ ಮುದ್ದಾದ ಹುಡುಗಿ ಇಂದುಜಾ ಆತ್ಮಹತ್ಯೆಯ ಹೆಸರಿನಲ್ಲಿ ಸಾವಿನ ಮನೆ ಸೇರಿದ್ದು ಮಾತ್ರ ದುರಂತವೆ ಹೌದು.!