Headlines

ಉದ್ಯಮಿ ಹತ್ಯೆ : ಮಂತ್ರವಾದದ ಹೆಸರಲ್ಲಿ ಕೆಜಿ ಗಟ್ಟಲೆ ಚಿನ್ನ ದೊಚಿದ ನಾಲ್ವರು ಹಂತಕರು ಅಂದರ್.

ಉದ್ಯಮಿ ಹತ್ಯೆ : ಮಂತ್ರವಾದದ ಹೆಸರಲ್ಲಿ ಕೆಜಿ ಗಟ್ಟಲೆ ಚಿನ್ನ ದೊಚಿದ ನಾಲ್ವರು ಹಂತಕರು ಅಂದರ್.

ಅಶ್ವಸೂರ್ಯ/ಶಿವಮೊಗ್ಗ: ಕಾಸರಗೋಡು ಬೇಕಲ ಸಮೀಪದ ಪೂಚಕ್ಕಾಡ್ ಫಾರೂಕಿ ಮಸೀದಿ ಸಮೀಪದ ಗಲ್ಫ್ ಉದ್ಯಮಿ ಬೈತುಲ್ ಮಂಜಿಲ್ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ಯನ್ನು ಮಂತ್ರವಾದಿಗಳ ಹೆಸರಲ್ಲಿ 596 ಪವನ್ (4.76 ಕಿಲೋ) ಚಿನ್ನ ಪಡೆದು ಬಳಿಕ ಅತನನ್ನು ಹ್ಯತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ದೊಚಿದ್ದ ಚಿನ್ನದ ಪೈಕಿ 29 ಪವನ್ ಚಿನ್ನವನ್ನು ಈ ಪ್ರಕರಣದ ತನಿಖೆ ಕೈಗೊಂಡಿರುವ ಕ್ರೈಂಬ್ರಾಂಚ್ ಪೊಲೀಸರ ತಂಡ ಕಾಸರಗೋಡು ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಜ್ಯೂವೆಲ್ಲರಿಯೊಂದರಿಂದ ವಶಪಡಿಸಿಕೊಂಡಿದ್ದಾರೆ.!

ಹಂತಕರು‌ ಉದ್ಯಮಿಯಿಂದ ದೊಚಿದ್ದ ಚಿನ್ನವನ್ನು ಕಾಸರಗೋಡಿನ ಹಲವು ಚಿನ್ನ ಅಂಗಡಿಗಳಿಗೆ ಮಾರಾಟ ಮಾಡಿರು ವುದಾಗಿ ವಿಚಾರಣೆ ವೇಳೆ ಹೇಳಿದ್ದು. ತನಿಖಾ‌ ತಂಡ ಚಿನ್ನವನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ತನಿಖಾ ತಂಡ ಮುಂದುವರಿಸಿದ್ದಾರೆ. ಬಂಧನದಲ್ಲಿರುವ ಆರೋಪಿಗಳು ದೊಚಿದ ಚಿನ್ನವನ್ನು ಮಾರಾಟ ಮಾಡಿದ ಜ್ಯೂವೆಲ್ಲರಿ ಅಂಗಡಿಗೆ ತನಿಖಾ ತಂಡದವರು ಆರೋಪಿಗಳನ್ನು ನೇರವಾಗಿ ಕರೆದುಕೊಂಡು ಹೋಗಿ ಅವರ ಮೂಲ ಕವೇ ಮಾರಿದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.

ಈ ಕಾರ್ಯಚರಣೆಯಲ್ಲಿ ಆರೋಪಿಗಳನ್ನು ಜ್ಯುವೆಲ್ಲರಿಗೆ ಅಂಗಡಿಗೆ ಕರೆದುಕೊಂಡು ಹೋಗಿದ್ದರು ಅ ಸಂಧರ್ಭದಲ್ಲಿ ಭಾರೀ ಜನಸಮೂಹ ನೆರೆದಿದ್ದರು.
ಮೂಲತಃ ಮಧೂರು ಸಮೀಪದ ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ ಬಾರ ಮೀತಲ್ ಬೈತುಲ್ ಫಾತಿಮದಲ್ಲಿ ವಾಸಿಸುವ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿ ಕೆ.ಎಚ್. ಶಮೀನ (34), ಮುಕ್ಕೂಟ್ ಜಿಲಾನಿ ನಗರದಲ್ಲಿ ವಾಸಿಸುತ್ತಿರುವ ಮೂಲತಃ ಪೂಚಕ್ಕಾಡ್ ನಿವಾಸಿ ಪಿ.ಎಂ. ಅಸ್ನಿಫ್ (36) ಮತ್ತು ಮಧೂರು ಕೊಲ್ಯ ನಿವಾಸಿ ಆಯಿಶಾ (43) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು ಇವರನ್ನು ಕ್ರೈಂ ಬ್ರಾಂಚ್ ಪೊಲೀಸರು ಈಗಾಗಲೇ ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣದ ಹಿನ್ನಲೆ.

2023 ಎಪ್ರಿಲ್ 14ರಂದು ಮುಂಜಾನೆ ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ತಮ್ಮ ಮನೆ ಬೆಡ್ರೂಂನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರ ಬಹುದೆಂದು ಮೊದಲು ಅನುಮಾನಿಸಲಾಗಿತ್ತು. ಅದರ ಹಿಂದಿನ ದಿನ ಆ ಮನೆಯಲ್ಲಿ ಮಂತ್ರವಾದ ಚಿಕಿತ್ಸೆ ನಡೆಸಲಾಗಿತ್ತು. ಈ ಚಿಕಿತ್ಸೆ ವೇಳೆ ಮನೆಯಲ್ಲಿ ಯಾರೂ ಇರಬಾರದೆಂದು ಹೇಳಿ ಆರೋಪಿಗಳು ಗಫೂರ್ ಹಾಜಿಯ ಪತ್ನಿ ಹಾಗೂ ಮಕ್ಕಳನ್ನು ಮೇಲ್ಪರಂಬದಲ್ಲಿರುವ ಅವರ ತವರು ಮನೆಗೆ ಕಳುಹಿಸಿಕೊಟ್ಟಿದ್ದರು. ಮಂತ್ರವಾದ ಚಿಕಿತ್ಸೆಗೆ ನೀಡಲಾದ ಚಿನ್ನವನ್ನು ಗಫೂರ್ ಹಾಜಿ ಹಿಂತಿರುಗಿಸುವಂತೆ ಆರೋಪಿಗಳಲ್ಲಿ ಕೇಳಿದ್ದರೆಂದೂ ಅದಕ್ಕಾಗಿ ಅವರ ತಲೆಯನ್ನು ಗೋಡೆಗೆ ಬಡಿದು ಕೊಲೆಗೈಯ್ಯಲಾಗಿತ್ತೆಂದು ತನಿಖೆಯಿಂದ ಬಯಲಾಗಿದೆ ಎಂದು ಕ್ರೈಂಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಗಫೂರ್ ಹಾಜಿಯವರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರ ಪುತ್ರ ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ತನಿಖೆಯು ಆರಂಭಗೊಂಡು ಮೊದಲ ಹೆಜ್ಜೆಯಾಗಿ ಸಮಾಧಿ ಮಾಡಿದ್ದ ಗಫೂರ್ ಹಾಜಿಯವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು.

ತಲೆಗೆ ಉಂಟಾದ ಆಳದ ಗಾಯವೇ ಗಫೂರ್ ಹಾಜಿಯ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿತ್ತು.! ಆ ಹಿನ್ನೆಲೆಯಲ್ಲಿ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಊರವರು ನಾಗರಿಕ ಕ್ರಿಯಾ ಸಮಿತಿ ರೂಪು ನೀಡಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಪ್ರಸ್ತುತ ಪ್ರಕರಣದ ತನಿಖೆಯನ್ನು ಸರ್ಕಾರ ಕ್ರೈಂಬ್ರಾಂಚ್ ಗೆ ಹಸ್ತಾಂತರಿಸಿತ್ತು. ಅದರಂತೆ ಕ್ರೈಂಬ್ರಾಂಚ್ ಅಧಿಕಾರಿ ಮತ್ತು ಪೊಲೀಸರ ತಂಡ ಕಾರ್ಯಚರಣೆಗೆ ಇಳಿದು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರು.ಇನ್ನಷ್ಟು ತನಿಖೆ ಮುಂದುವರೆದಿದ್ದು ಆರೋಪಿಗಳಿಂದ‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆಹಾಕುವಲ್ಲಿ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!