ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024 ರ ಮುಕ್ತಾಯ ಸಮಾರಂಭ
ಅಶ್ವಸೂರ್ಯ/ಶಿವಮೊಗ್ಗ: ಡಿಸೆಂಬರ್ 04 ರಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ಕ್ಕೆ ತೆರೆಬಿದ್ದಿದೆ.
ಈ ಕ್ರೀಡಾ ಕೂಟದ ಸಮಾರೋಪ ಸಮಾರಂಭವನ್ನು ಡಿಸೆಂಬರ್ 06 ರ ಸಂಜೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದು ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್,ರವರು ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತವನ್ನು ಕೋರಿದರು,
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀ ರಮೇಶ್ ಬಿ, ಐಪಿಎಸ್, ಮಾನ್ಯ ಉಪ ಪೊಲೀಸ್ ಮಹಾನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ ರವರು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿವಿಧ ಪಂದ್ಯಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡುವುದರ ಜೊತೆಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಹಾಜರಿದ್ದವರ ಕುರಿತು ಮಾತನಾಡಿ ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಒತ್ತಡ ನಿರ್ವಹಣೆಯು ಮುಖ್ಯವಿದ್ದು ಈ ರೀತಿಯ ಕ್ರೀಡಾ ಕೂಟವನ್ನು ಆಯೋಜಿಸುವುದರಿಂದ ಒತ್ತಡ ನಿರ್ವಹಣೆಗೆ ಅನುಕೂಲವಾಗಲಿದೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯು ಸಹಕಾರಿಯಾಗಲಿದ್ದು,
ಆದ್ದರಿಂದ ನಿಮ್ಮ ದೈನಂದಿನ ಜೀವನದಲ್ಲಿ ಯಾವುದಾದರೂ ಒಂದು ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಹಾಗೂ ಕರ್ತವ್ಯದ ಜೊತೆಗೆ ಕುಟುಂಬಕ್ಕೂ ಸಹಾ ಸಮಯಕೊಡಿ ಎಂದು ಹೇಳಿದರು.
ನಂತರ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ರವರು ಎಲ್ಲರಿಗೂ ವಂದನಾರ್ಪಣೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, ಶ್ರೀ ಕೃಷ್ಣಮೂರ್ತಿ, ಡಿವೈಎಸ್ಪಿ ಡಿಎಆರ್ ಶಿವಮೊಗ್ಗ, ಶ್ರೀ ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಶ್ರೀ ಗೋಪಾಲ ಕೃಷ್ಣ ಟಿ ನಾಯಕ್, ಡಿವೈಎಸ್ಪಿ, ಸಾಗರ ಉಪ ವಿಭಾಗ, ಶ್ರೀ ಬಾಬು ಆಂಜನಪ್ಪ, ಡಿವೈಎಸ್ಪಿ, ಶಿವಮೊಗ್ಗ-ಎ ಉಪ ವಿಭಾಗ, ಶ್ರೀ ಕೇಶವ್, ಡಿವೈಎಸ್ಪಿ, ಶಿಕಾರಿಪುರ ಉಪ ವಿಭಾಗ, ಶ್ರೀ ಸುರೇಶ್ ಎಂ, ಡಿವೈಎಸ್ಪಿ, ಶಿವಮೊಗ್ಗ-ಬಿ ಉಪ ವಿಭಾಗ, ಶ್ರೀ ಗಜಾನನ ವಾಮನ ಸುತರ, ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ
ಮತ್ತು ಶ್ರೀ ಕೃಷ್ಣ ಮೂರ್ತಿ, ಡಿವೈಎಸ್ಪಿ ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಅವರ ಕುಟುಂಬದವರು ಉಪಸ್ಥಿತರಿದ್ದು ಕ್ರೀಡಾ ಕೂಟದ ಅಂತಿಮ ಕಾರ್ಯಕ್ರಮಕ್ಕೆ ಮೆರಗು ತಂದರು.