ಭಾಗ-1:ಅಕ್ರಮ ಕಲ್ಲು , ಮರಳು ಗಣಿಗಾರಿಕೆ ಅಬ್ಬರಕ್ಕೆ ತೀರ್ಥಹಳ್ಳಿ ಚಿತ್ರಾನ್ನ.!

ಭಾಗ -1: ಅಕ್ರಮ ಕಲ್ಲು ಮರಳು ಗಣಿಗಾರಿಕೆ ಅಬ್ಬರಕ್ಕೆ ತೀರ್ಥಹಳ್ಳಿ ಚಿತ್ರಾನ್ನ.!

ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಗಣಿಗಾರಿಕೆ ಎಂದಾಕ್ಷಣ ಎಲ್ಲರ ದೃಷ್ಟಿ ಹರಿಯುವುದು ತೀರ್ಥಹಳ್ಳಿ ತಾಲ್ಲೂಕಿನ ಕಡೆ.! ಅಸಲಿ ಹಕೀಕತ್ತೇನೆಂದರೆ ತೀರ್ಥಹಳ್ಳಿಗಿಂತಲೂ ಭಯಾನಕವಾದ ಗಣಿ ಮಾಫಿಯಾ ಬೇರೊಂದಿಲ್ಲ. ಸರಿಯಾಗಿ ಗಮನಿಸಿದರೆ ತೀರ್ಥಹಳ್ಳಿಯ ಗಣಿ ಧೂಳಿನ ಅಬ್ಬರ ಹಸಿರು ಕಾನನವನ್ನು ಧೂಳಿನಿಂದ ಮುಚ್ಚಿದೆ ತುಂಗೆ ಧೂಳಿನ ಹರಿವಿಗೆ ತಿಳಿಬಣ್ಣದಿಂದ ಮಣ್ಣಿನ ಬಣ್ಣಕ್ಕೆ ಜಾರಿ ಮೈಲಿಗೆ ಆಗಿದ್ದಾಳೆ.! ಇಲ್ಲಿಯ ಗಣಿ ಅಬ್ಬರದ ಸದ್ದು ಸುತ್ತಮುತ್ತಲಿನ ಜನರ ನೆಮ್ಮದಿ ಕೆಡಸಿದೆ.

ಅಕ್ರಮ ಕಲ್ಲು ಗಣಿಗಾರಿಕೆಯ ಕೇಂದ್ರ ಸ್ಥಾನ ಮೇಲಿನ ಕುರುವಳ್ಳಿ ಗ್ರಾಮ

ಯಾಕೆಂದರೆ ಇಲ್ಲಿ ಈ ಹಿಂದೆ ಬಳ್ಳಾರಿಯಲ್ಲಿರುವಂತೆ ಬೃಹತ್ ಗಣಿ ಉದ್ಯಮಿಗಳಿಲ್ಲ. ನೂರಾರು ಸಂಖ್ಯೆಯಲ್ಲಿ ಸಣ್ಣ ಸಣ್ಣ ಕಲ್ಲುಗಣಿ ನೆಡೆಯುತ್ತಿವೆ. ಇಲ್ಲಿ ಅಕ್ರಮವಂತು ನಿತ್ಯಸತ್ಯ. ಒಂದು ಕಾಲದಲ್ಲಿ ಸಂಪದ್ಭರಿತ ಕೃಷಿ ಸಂಪನ್ಮೂಲಗಳ ಆಗರವಾಗಿದ್ದ ತೀರ್ಥಹಳ್ಳಿ ತಾಲ್ಲೂಕು ಕರ್ನಾಟಕದಲ್ಲೆ ಕೃಷಿಗೆ ಹೆಸರು ವಾಸಿಯಾಗಿತ್ತು. ತುಂಗೆ ಇಲ್ಲಿಯ ಜನರ ಜೀವನದಿ ಆಗಿದ್ದಾಳೆ. ಇನ್ನೂ ತಾಲ್ಲೂಕಿನಲ್ಲಿ ಹರಿಯುವ ಸಣ್ಣಪುಟ್ಟ ನದಿ ಹಳ್ಳ ಕೊಳ್ಳಗಳು ಸ್ಥಳೀಯ ರೈತರ ಜೀವನಾಡಿಯಾಗಿವೆ.ಇಲ್ಲಿಯ ರೈತರು ಚಿನ್ನದ ಫಸಲು ತೆಗೆಯುತ್ತಿದ್ದರು.

ಆದರೀಗ ಅವೆಲ್ಲ ಗತ ವೈಭವವಷ್ಟೇ..! ಇವತ್ತಿನ ಮಟ್ಟಿಗೆ ಅತ್ಯಂತ ಹೀನಾ ಕಲ್ಲುಗಣಿ ಮಾಫಿಯಾ ಮತ್ತು ಮರಳು ಮಾಫಿಯಾ ಜೊತೆಗೆ ಅಕ್ರಮ ಕ್ರಷರ್ ದಂಧೆ ಹೆಡೆ ಎತ್ತಿ ನಿಂತ ಕಾರಣಕ್ಕೆ ಸಂಪೂರ್ಣ ತೀರ್ಥಹಳ್ಳಿ ತಾಲ್ಲೂಕು ಧೂಳಿನ ತಿಪ್ಪೆಗುಂಡಿಯಾಗಿದೆ.!

ಇಲ್ಲಿಯ ಅಂತರ್ಜಲವಂತು ಪಾತಾಳ ಮುಟ್ಟಿದೆ.
ಹೊಲಗದ್ದೆಗಳು, ಕಾಡು, ದಟ್ಟಡವಿಗಳು ವಿನಾಶದ ಅಂಚಿಗೆ ತಲುಪಿವೆ.ವನ್ಯಪ್ರಾಣಿ ಸಂಕುಲವಂತು ಕಲ್ಲು ಕ್ವಾರೆಯ ಮೇಗಾಬ್ಲಾಸ್ಟ್ ನ ಅಬ್ಬರಕ್ಕೆ ಕಂಗೆಟ್ಟು ಹೋಗಿವೆ. ರೈತ ಅಂತರ್ಜಲದ ಜೊತೆಗೆ ಧೂಳಿನಮಯ ವಾತಾವರಣದಿಂದ ದಿಕ್ಕೆತೋಚದಂತೆ ಕುಳಿತಿದ್ದಾನೆ.
ಅಕ್ರಮ ಮರಳು,ಕಲ್ಲು ಗಣಿಗಾರಿಕೆ ದಂಧೆಯ ಅಬ್ಬರಕ್ಕೆ ತೀರ್ಥಹಳ್ಳಿ ಸಂಪೂರ್ಣ ಸುಡುಗಾಡಾಗಿದೆ.! ಇಷ್ಟಕ್ಕೂ
ಅತ್ಯಮೂಲ್ಯ ಕಲ್ಲಿನ ಸಂಪತ್ತು ಮತ್ತು ಮರಳಿನ ಸಂಪತ್ತನ್ನು
ಅಕ್ರಮವಾಗಿ ಕೊಳ್ಳೆ ಹೊಡೆಯುತ್ತಿರುವವರು ಯಾರೋ
ಅಡ್ರೆಸ್ಸು ರೇಷನ್ ಕಾರ್ಡ್ ಇಲ್ಲದ ಅಪರಿಚಿತ ವ್ಯಕ್ತಿಳಲ್ಲ. ತೀರ್ಥಹಳ್ಳಿ ಮಣ್ಣಲ್ಲೆ ಬೆಳೆದು.ಈ ನೆಲದ ಅನ್ನ ತಿಂದು ಹಸಿವು ನೀಗಿಸಿಕೊಳ್ಳುತ್ತಿರುವ ಕೆಲವು ಪುಡಿ ಪುಡಾರಿಗಳು, ರೌಡಿಗಳು, ಅಕ್ರಮ ದಂಧೆಕೋರರು, ಇವರಿಗೆ ಹೆಗಲು‌ ಕೊಟ್ಟ ಕೆಲವು ಪೊಲೀಸರು ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇವತ್ತು ಸರತಿ ಪ್ರಕಾರ ತೀರ್ಥಹಳ್ಳಿಯ ಒಡಲನ್ನು ಬಗೆ ಬಗೆದು ಬರಿದುಮಾಡುತ್ತಿದ್ದಾರೆ,
ವೈಯುಕ್ತಿಕ ಸ್ವರ್ಥಕ್ಕಾಗಿ ತೀರ್ಥಹಳ್ಳಿಯನ್ನು ಬೆಂಗಾಡಾಗಿಸಲು ಹೊರಟಿರುವ ಈ ದಂಧೆಕೋರ ಮಹನೀಯರನ್ನು ತೀರ್ಥಹಳ್ಳಿಯ ಜನ ಇನ್ನು ಸಹಿಸಿಕೊಂಡಿದ್ದಾರೆಂಬುವುದೇ ದುರಂತ..! ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಯ ಅಗಾಧತೆಯನ್ನು ಅರಿಯಬೇಕಾದರೆ ಮೇಲಿನ ಕುರುವಳ್ಳಿ ,ಮಂಡಗದ್ದೆ, ಮುಡುಬ, ತೂದುರು, ಗಬಡಿ,ಬೆಜ್ಜವಳ್ಳಿ,ಕುಶಾವತಿ,ಮೇಗರವಳ್ಳಿ,ಬಾಗೋಡು,ಕಮ್ಮರಡಿ,ಬೀದರಗೋಡು,ಆಗುಂಬೆ,ಆರಗ,ಆರೆಹಳ್ಳಿ, ಬಗ್ಗೊಡಿಗೆ, ಅರಮನಗದ್ದೆ,ಪಡುಬೈಲು,ತಲ್ಲೂರುಅಂಗಡಿ,ಹೊಸಗದ್ದೆ ಈ ಎಲ್ಲಾ ಪ್ರದೇಶಗಳನ್ನೊಮ್ಮೆ ಕಣ್ಣಾರೆ ಕಂಡು ಬರಬೇಕು. ಈ ಗ್ರಾಮಳಲ್ಲಿನ ಹೊಲಗಳ ರೋಗಿಷ್ಟ ಬೆಳೆಗಳನ್ನು ಯಾವುದೊ ಶಾಪಕ್ಕೀಡಾದಂತೆ ಕೆಂದೂಳಿನಿಂದ ಆವೃತವಾಗಿರುವ ಮರಗಳನ್ನು.! ಕೆಲವೇ ದಿನಗಳ ಹಿಂದೆ ಹೆಬ್ಬಂಡೆಯಾಗಿ ಕಂಗೊಳಿಸುತ್ತಿದ ಮೇಲಿನ ಕುರುವಳ್ಳಿಯ ಬೆಟ್ಟಗುಡ್ಡಗಳು ಅಕ್ರಮ ದಂಧೆಕೋರರ ಉಳಿ ಪೆಟ್ಟಿಗೆ ಮೇಗಾಬ್ಲಾಸ್ಟ್ ಗೆ ದಿನದಿಂದ ದಿನಕ್ಕೆ ಬೆತ್ತಲಾಗುತ್ತಿದೆ. ಹೇಳ ಹೆಸರಿಲ್ಲದಂತಾಗಿದ್ದು ಕಲ್ಲು ಬಂಡೆಗಳ ಗುಡ್ಡಗಳ ಬೋಳು ಎದೆಯನ್ನು ಪ್ರತ್ಯಕ್ಷವಾಗಿಯೇ ನೋಡಬಹುದು..! ತೀರ್ಥಹಳ್ಳಿ ಎಂದಾಕ್ಷಣ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆಯ ಸದ್ದು ಜೋರಾಗಿಯೆ ಕೇಳಿಬರುತ್ತಿದೆ.!

ತೀರ್ಥಹಳ್ಳಿಯಿಂದ ಕೂಗಳತೆ ದೂರದಲ್ಲಿರುವ ಮೇಲಿನ ಕುರುವಳ್ಳಿಯ ಹೆದ್ದಾರೆಗೆ ಮೈಚಾಚಿಕೊಂಡಿರುವ ಬೆಟ್ಟಗುಡ್ಡಗಳಲ್ಲಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾತ್ರಿ ಹಗಲೆನ್ನದೆ ನಡೆಯುತ್ತಿದೆ. ಇಲ್ಲಿನ ದಾಖಲೆಗಳಲ್ಲಿ ಬೆರಳೆಣಿಕೆಯ ಕೆಲವು ಗುತ್ತಿಗೆ ದಾರರನ್ನು ಬಿಟ್ಟರೆ ನಿರ್ಧಿಷ್ಟ ಒಪ್ಪಿಗೆ ಪಡೆಯದ ಪ್ರದೇಶದಲ್ಲಿ ಅಕ್ರಮ ದಂಧೆಕೋರರಿಂದ ಅಕ್ರಮ ಕಲ್ಲು ಗಣಿಗಾರಿಕೆ ಭರ್ಜರಿಯಾಗಿ ನೆಡೆಯುತ್ತಿದೆ, ಕೆಲವರಂತು ಸಬ್‌ಲೀಸ್‌ ನಂತಹ ಕಳ್ಳದಾರಿಯ ಅಕ್ರಮ ಕಲ್ಲು ಗಣಿಗಾರಿಕೆಯಿಂದ ತೀರ್ಥಹಳ್ಳಿಯ ಒಡಲು ಬಗೆ ಬಗೆದು ಮೇಗಾಬ್ಲಾಸ್ಟ್ ನ ಬಿಕರತೆಗೆ ಇವತ್ತಿಗೂ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಪರಿಸರ ಸಂಪೂರ್ಣ ಬೆತ್ತಲಾಗಿದೆ. ಅದರಲ್ಲೂ ರಾತ್ರಿ ಹೊತ್ತು ರಾಜಾರೋಷವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಭರ್ಜರಿಯಾಗಿಯೆ ನೆಡೆಯುತ್ತಿದೆ.
ಇನ್ನೂ ತೀರ್ಥಹಳ್ಳಿ ತಾಲ್ಲೂಕಿನ ಶಾಸಕನ ಕಣ್ಣಳತೆಯ ದೂರದಲ್ಲೆ ಕಲ್ಲು ಗಣಿ ಮಾಫಿಯಾ ಅಂಕೆ ಮೀರಿ ಚಿಗಿತುಕೊಂಡಿದೆ.

ಸ್ವತಃ ಹಾಲಿ ಶಾಸಕರ, ಮಾಜಿ ಮಂತ್ರಿಗಳ ಜೊತೆಗೆ ಮತ್ತು ರಾಜಕೀಯ ಪುಡಾರಿಗಳ ಓಡಾಡಿಕೊಂಡಿರುವ ಕೆಲವು ಮಂದಿ ಚೆಲಾಗಳು, ರೌಡಿಗಳು ಈ ಅಕ್ರಮ ಕಲ್ಲು ಗಣಿಗಾರಿಕೆಯ ದಂಧೆಕೋರರಾಗಿದ್ದಾರೆ. ಇಲ್ಲಿ ಸರ್ಕಾರಕ್ಕೆ ಸೇರಬೇಕಾದ ರಾಯಲ್ಟಿ ಹಣಕ್ಕಿಂತ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆಯ ದಂಧೆಯ ಹಣದ ರಾಶಿಯೆ ದಿನಕ್ಕೆ ಕೋಟ್ಯಾಂತರ ರೂಪಾಯಿ.! ಈ ಹಣ ಅಕ್ರಮ ದಂಧೆಕೋರರ ಪಾಲಾಗುತ್ತಿದೆ.!ಇನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲವು ಲಂಚಬಾಕರ ಗ್ಯಾಂಗ್ ಲಕ್ಷಾಂತರ ರೂಪಾಯಿ ಹಣವನ್ನು ಅಕ್ರಮ ಕಲ್ಲು‌ ಮತ್ತು ಮರಳು ಮಾಫಿಯಾದ ದಂಧೆಕೋರರಿಂದ ನುಂಗಿ‌ ನೀರು ಕುಡಿಯುತ್ತಿದ್ದಾರೆ. ಇನ್ನೂ ಮರಳು ಕ್ವಾರೆ ಮತ್ತು ಮೇಲಿನ ಕುರುವಳ್ಳಿಯಲ್ಲಿ ಸಾವಿರಾರು ಏಕೆರೇಗೆ ಮೈಚಾಚಿಕೊಂಡಿರುವ ಹೆಬ್ಬಂಡೆಗಳ ಸುತ್ತ ಮುತ್ತ ಹಾಡು ಹಗಲೇ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ಭರ್ಜರಿಯಾಗಿ ನೆಡೆಯುತ್ತಿದೆ. ಈ ಬಗ್ಗೆ ಹಲವಾರು ದೂರುಗಳು ದಾಖಲಾಗಿದ್ದರು ಯಾರಿಂದಲೂ ತಡೆಯಲಾಗಿಲ್ಲ ಕಾರಣ ಕೆಲವು ಅಧಿಕಾರಿಗಳೆ ಹಡಬೆ ಹಣಕ್ಕೆ ಕೈಯೊಡ್ಡಿ ಕುಳಿತಿರುವುದರಿಂದ..!

ಮುಂದುವರಿಯವುದು.. ಭಾಗ -2

Leave a Reply

Your email address will not be published. Required fields are marked *

Optimized by Optimole
error: Content is protected !!