ಹೆಸರಾಂತ ಬೆಂಗಳೂರಿನ ಹೊಟೆಲ್ ಉದ್ಯಮಿ, ಆರಾಧನಾ ಹೊಟೆಲ್ ಮಾಲಿಕ, ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ A A ವೆಂಕಟೇಶ್ ಇನ್ನಿಲ್ಲ.!
ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ಅರೇಹಳ್ಳಿ ಪಂಚಾಯತಿಯ ಮಳಲೂರು ಗ್ರಾಮದ ಅಜ್ಜನಹಳ್ಳಿ ವಾಸಿಯಾದ A A ವೆಂಕಟೇಶ್ (60) ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು,ಬೆಂಗಳೂರಿನಲ್ಲಿ ಹೊಟೆಲ್ ಉದ್ಯಮ ನೆಡೆಸುತ್ತಾ ಅಲ್ಲೆ ನೆಲೆಸಿದ್ದರು,ಆರಾಧನ ಹೆಸರಿನ ಹೊಟೆಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವೆಂಕಟೇಶ್ ಇತ್ತೀಚಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಸೋಮವಾರ ಡಿಸೆಂಬರ್ 2 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಅಪಾರ ಬಂಧು ಬಳಗದವರನ್ನು ಬಿಟ್ಟು ಆಗಲಿದ್ದಾರೆ. ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ದೇವರು ಇವರ ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ನೀಡಲಿ.. ಮೃತ ವೆಂಕಟೇಶ್ ಅವರ ಮೃತದೇಹವನ್ನು ಅವರ ಸ್ವಂತ ಊರಾದ ಮಳಲೂರು ಗ್ರಾಮದ ಅಜ್ಜನಹಳ್ಳಿಗೆ ತರಲಾಗಿದ್ದು ವೆಂಕಟೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು, ನವೆಂಬರ್ 3 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮೃತ ವೆಂಕಟೇಶ್ ಅವರ ಪಾರ್ಥಿವ ಶರೀರದ ಅಂತಿಮ ಕ್ರಿಯೆ ನೆಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.