ಬೀದರ್: 10 ಲಕ್ಷ ಲಂಚದ ಹಣಕ್ಕೆ ಕೈಯೊಡ್ಡಿ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಖೆಡ್ಡಕ್ಕೆ.
ಅಶ್ವಸೂರ್ಯ/ಬೀದರ್: ಎನ್‌ಎ ನಿವೇಶನಗಳ ಮಾರಾಟದ ಅನುಮೋದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರಿಂದ 10 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಆಯುಕ್ತ , ಯೋಜನಾ ಸದಸ್ಯ ಸೇರಿ ಮೂವರನ್ನು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬೀದರ್‌ನ ಪ್ರತಾಪ ನಗರದಲ್ಲಿ ನಡೆದಿದೆ.
ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ, ಆಪ್ತ ಸಿದ್ದೇಶ್ವರ ಬಂಧಿತರು. ನಗರದ ಗುಂಪಾ ನಿವಾಸಿಯಾಗಿರುವ ಸತೀಶ್ ನೌಬಾದೆ ಎಂಬುವರು ಚಿಕ್ಕಪೇಟ್ ಗ್ರಾಮದಲ್ಲಿ 2.11 ಎಕರೆ ಭೂಮಿಗೆ 2022ರಲ್ಲಿ ವಸತಿ ಉದ್ದೇಶಕ್ಕಾಗಿ ವಿನ್ಯಾಸ ಮಂಜೂರಾತಿ ಆದೇಶ ಪಡೆದುಕೊಂಡಿದ್ದು, ನಿಯಮದಂತೆ ಆರಂಭಿಕ ಹಂತದಲ್ಲಿ ಶೇ.40 ರಷ್ಟು ಅನುಪಾತದ ನಿವೇಶನಗಳನ್ನು ಬಿಡುಗಡೆ ಮಾಡಲಾಗಿತ್ತು.
ಉಳಿದ ಶೇ. 60ರಷ್ಟು ನಿವೇಶನಗಳ ಬಿಡುಗಡೆಗಾಗಿ ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ್ ರೆಡ್ಡಿ50 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಇದರಿಂದ ನೊಂದಿದ್ದ ಸತೀಶ್ ನ. 22 ರಂದು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅಲ್ಲೆ ಲಂಚ ಬಾಕರನ್ನು ಕೆಡವಿ ಕೊಳ್ಳುವ ಪ್ಲಾನ್ ರೇಡಿಯಾಗಿದ್ದು.
ಲೋಕಯುಕ್ತರ ಮಾರ್ಗದರ್ಶನದಂತೆ ಸತೀಶ್ ಅವರು ಶುಕ್ರವಾರ ಮುಂಗಡವಾಗಿ 10 ಲಕ್ಷ ರೂ. ನೀಡಲು ಬುಡಾ ಕಚೇರಿಗೆ ಹೋದಾಗ ಆಯುಕ್ತರು, ತಮ್ಮ ಪರಿಚಯದ ಸಿದ್ದೇಶ್ವರ ಎಂಬುವರ ಕೈಯಲ್ಲಿ ಕೊಡಲು ತಿಳಿಸಿದ್ದಾರೆ. ಅದರಂತೆ ಸಿದ್ದೇಶ್ವರ ಹಣ ಪಡೆಯುವಾಗ ಲೋಕಾಯುಕ್ತ ಡಿಎಸ್‌ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
.