ಬಿಜೆಪಿ ಅವಧಿಯ ಬಾಕಿ ಅನುದಾನವನ್ನು ಈಗ ಸರ್ಕಾರ ಕೊಡುತ್ತಿದೆ: ಸಚಿವ ಮಧು ಬಂಗಾರಪ್ಪ

ಬಿಜೆಪಿ ಅವಧಿಯ ಬಾಕಿ ಅನುದಾನವನ್ನು ಈಗ ಸರ್ಕಾರ ಕೊಡುತ್ತಿದೆ: ಸಚಿವ ಮಧು ಬಂಗಾರಪ್ಪ

ಅಶ್ವಸೂರ್ಯ/ಬೆಂಗಳೂರು: ಬಿಜೆಪಿ ಕಾಲದಲ್ಲಿ ಅನುದಾನ ಬಾಕಿ ಇಟ್ಟುಕೊಂಡಿರುವುದನ್ನು ನಮ್ಮ ಸರ್ಕಾರ ಕೊಡುತ್ತಿದೆ. ಹೀಗಾಗಿ ನಮಗೆ ಅನುದಾನ ಕಡಿಮೆ ಆಗುತ್ತಿದೆ ಎಂದು ಶಾಸಕರಿಂದ ಅನುದಾನ ಕೇಳ್ತಿರೋ ವಿಚಾರಕ್ಕೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅನುದಾನ ಸಿಗುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಳಲು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ 35-40 ಸಾವಿರ ಕೋಟಿ ಕಳೆದ ಸರ್ಕಾರ ನನ್ನ ಇಲಾಖೆಯಲ್ಲಿ ಹಣ ಬಾಕಿ ಇಟ್ಟಿದ್ದಾರೆ.ನನ್ನ ಇಲಾಖೆಯಲ್ಲಿ ಕೊಠಡಿಗಳಿಗೆ ಹಣ ಇಟ್ಟಿರಲಿಲ್ಲ. ಹಳೆ ಬಾಕಿ ಕೊಟ್ಟಿರೋದು ಸಿದ್ದರಾಮಯ್ಯ. ರಾಮಲಿಂಗಾರೆಡ್ಡಿ ಎಷ್ಟು ಹೊಸ ಬಸ್ ತಗೊಂಡಿದ್ದಾರೆ‌. ಬಿಜೆಪಿ ಅವರು ಬಸ್ ತಗೊಂಡಿಲ್ಲ. ಹೀಗಾಗಿ ನಾವು ಹೊಸ ಬಸ್ಸುಗಳನ್ನು ಖರೀದಿಮಾಡಿದ್ದೇವೆ ಬಡವರಿಗೆ ಮನೆಗಳನ್ನು ಕೊಟ್ಟಿರಲಿಲ್ಲ ಜಮೀರ್ ಕೊಡುತ್ತಿದ್ದಾರೆ ಇದಕ್ಕೆ ಹೊರೆಯಾಗಿದೆ ಎಂದರು.

ಗ್ಯಾರಂಟಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ. ಇದೆಲ್ಲ ಅಭಿವೃದ್ಧಿ ಅಲ್ಲವೇ? ಗ್ಯಾರಂಟಿಗಳಿಗೆ ನಮಗೆ ಎಷ್ಟು ಹಣ ಕೊರತೆ ಆಗಬಹುದು ಅಂತ ನಾವು ಹೈಕಮಾಂಡ್ ನಾಯಕರಿಗೂ, ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆವು. ಎಷ್ಟು ಅನುದಾನ ಕಡಿಮೆ ಬರಬಹುದು ಅಂತ ಹೇಳಿದ್ದೆವು. ಹಳೆ ಬಿಜೆಪಿ ಸರ್ಕಾರದ ಬ್ಯಾಕ್ ಲ್ಯಾಗ್ ಹಣದಿಂದ ನಮಗೆ ಸಮಸ್ಯೆ ಆಗಿದೆ. ಶಾಸಕರ ಅಳಲನ್ನು ಪಕ್ಷದ ಸಭೆಯಲ್ಲಿ ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರ ಬಳಿ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 1250 ಕೋಟಿ ರೂ. ಹಣ ಕೊಟ್ಟಿದ್ದೇವೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ವಿವರಿಸಿದರು.
ಸರ್ಕಾರದ ಭವಿಷ್ಯದ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಅದ್ಬುತವಾಗಿ ಸರ್ಕಾರ ಆಗಬಹುದು ಅಂತ ಪರಮೇಶ್ವರ್ ಹೇಳಿರಬಹುದು ಅಂತ ಅನಿಸುತ್ತಿದೆ. ಗ್ಯಾರಂಟಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತಮವಾಗುತ್ತದೆ ಅಂತ ಹೇಳಿರಬಹುದು‌. ಮಾಧ್ಯಮಗಳಿಗೆ ಅದು ಸರ್ಕಾರದ ವಿರುದ್ದ ಮಾತಾಡಿರಬಹುದು ಎಂದು ಅನ್ನಿಸಿರಬಹುದು.ಕಾಂಗ್ರೆಸ್ ಭವನ ಬೇಗ ಕಟ್ಟಿ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕೆಲಸ ಮಾಡಿ ಒಳ್ಳೆಯದೆ ಆಗೋತ್ತೆ ಅಂತ ಅವರು ನನಗೂ ಹೇಳಿದ್ದಾರೆ ಎಂದು ಪರಮೇಶ್ವರ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡರು.

Leave a Reply

Your email address will not be published. Required fields are marked *

Optimized by Optimole
error: Content is protected !!