ಮುಳುಗುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಮೂವರು ಯವತಿಯರು ಈಜುಕೊಳದಲ್ಲಿ ಸಾವು.!
ಅಶ್ವಸೂರ್ಯ/ಶಿವಮೊಗ್ಗ: ಈಜುಕೋಳದಲ್ಲಿ ಒಬ್ಬಳು ಗೆಳತಿ ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಂತೆ ಕೋಳದಲ್ಲಿದ್ದ ಇನ್ನಿಬ್ಬರು ಗೆಳೆಯರು ಆಕೆಯನ್ನು ರಕ್ಷಿಸಲು ಮುಂದಾಗಿದ್ದಾರೆ.ಆದರೆ ಯುವತಿಯರಿಗೆ ಅತ್ತ ಮೇಲೆ ಬರಲು ಸಾಧ್ಯವಾಗಲಿಲ್ಲ ,ಕಾರಣ ಮೂವರು ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸ್ಥಳದಲ್ಲಿ ಯಾರು ಇರದ ಕಾರಣ ಯಾರ ನೆರವೂ ಸಿಗಲಿಲ್ಲ. ಈಜುಕೊಳದಲ್ಲಿ ಪ್ರಾಣ ಬಿಟ್ಟ ಮೂವರು ಯುವತಿಯರು ಕೊನೆ ಉಸಿರು ಎಳೆದಿದ್ದಾರೆ.!ಇವರ ಕ್ಷಣದ ವಿಡಿಯೋ ರೆಸಾರ್ಟ್ ನ ಸಿಸಿ ಟವಿಯಲ್ಲಿ ದಾಖಲಾಗಿದೆ. ಜೊತೆಗೆ ಮೂವರು ಯುವತಿಯರು ಈಜುಕೊಳಕ್ಕೆ ಇಳಿಯುವ ಮುನ್ನ ತಮ್ಮ ಮೊಬೈಲ್ ಅನ್ನು ವಿಡಿಯೋ ಮೂಡ್ ನಲ್ಲಿ ಸ್ಥಳದಲ್ಲಿ ಇಟ್ಟು ನೀರಿಗೆ ಇಳಿದಿದ್ದಾರೆ. ಅದರಲ್ಲೂ ಯುವತಿಯರ ಕೊನೆಯ ಕ್ಷಣದ ದೃಶ್ಯಾವಳಿಗಳು ದಾಖಲಾಗಿದೆ.
ಈ ಘಟನೆ ನೆಡೆದದ್ದು ಮಂಗಳೂರು ಬೀಚ್ ರೆಸಾರ್ಟ್ ಸ್ವಿಮ್ಮಿಂಗ್ ಪೂಲ್ನಲ್ಲಿ ಪ್ರಾಣ ಕಳೆದುಕೊಂಡ ಮೂವರು ಮೈಸೂರಿನ ಮೂಲದ ಯುವತಿಯರು.
ಶನಿವಾರ ಹಾಗೂ ಭಾನವಾರದ ವೀಕೆಂಡ್ ರಜಾ ಕಳಿಯಲು ಮಂಗಳೂರಿಗೆ ಬಂದಿದ್ದರು ಮಂಗಳೂರಿನ ಬೀಚ್ ರೆಸಾರ್ಟ್ಗೆ ತೆರಳಿದ ಮೂವರು ಯುವತಿಯರು ದುರಂತ ಅಂತ್ಯಕಂಡಿದ್ದಾರೆ. ರೆಸಾರ್ಟ್ನ ಈಜುಕೊಳದಲ್ಲಿ ಸಂತೋಷದಿಂದ ಆಡವಾಡುತ್ತಿದ್ದ ಸಂಧರ್ಭದಲ್ಲಿ ಒಬ್ಬಳು ಗೆಳತಿ ಅಪಾಯಕ್ಕೆ ಸಿಲುಕಿದ್ದಾಳೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ. ಗೆಳೆಯ ರಕ್ಷಣೆಗೆ ತೆರಳಿದ ಮತ್ತೊಬ್ಬಳು ನೀರಿನಲ್ಲಿ ಮುಳುಗಿದ್ದಾಳೆ.ಇದನ್ನು ಗಮನಿಸಿದ ಮೂರನೇ ಯವಳು ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಲು ಹೋಗಿ ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡ ಕಾರಣಕ್ಕೆ ಮುಳುಗಿ ಮೂವರು ಮೃತಪಟ್ಟಿದ್ದಾರೆ.
ಮೂವರು ಯುವತಿಯರ ಅಂತಿಮ ಕ್ಷಣದ ವಿಡಿಯೋ ಮನಕಲುಕವಂತಿದೆ. ಬೀಚ್ ರೆಸಾರ್ಟ್ನ ಈಜುಕೊಳದಲ್ಲಿ ಆಟವಾಡತ್ತಿದ್ದ ಮೈಸೂರಿನ ನಿಶ್ಚಿತ, ಪಾರ್ವತಿ ಹಾಗೂ ಕೀರ್ತನಾ ಸಾವನಪ್ಪಿದ ಯುವತಿಯರು.ಇವರ ಕೊನೆಯ ಕ್ಷಣದಲ್ಲಿನ ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಈಜುಕೊಳದಲ್ಲಿ ಸಾಹಯಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಗಾಳಿ ತುಂಬಿದ ಟ್ಯೂಬ್ಗಳನ್ನು ಹಾಕಲಾಗಿತ್ತು. ಆದರೆ ಟ್ಯೂಬ್ಗಳು ಆಳ ನೀರಿನ ಮೇಲ್ಬಾಗದಲ್ಲಿತ್ತು. ಟ್ಯೂಬ್ ಮೇಲೆ ವಿಶ್ರಾಂತಿ ಪಡೆಯುವ ಅಥವಾ ಟ್ಯೂಬ್ ಬಳಸಿ ಮತ್ತಷ್ಟು ಆಟವಾಡುವಾ ಆಲೋಚನೆಯಲ್ಲಿ ಒರ್ವ ಯುವತಿ ಟ್ಯೂಬ್ ತರಲು ನೀರಿನಲ್ಲಿ ನಡೆದುಕೊಂಡು ಸಾಗಿದ್ದಾಳೆ.
ಟ್ಯೂಬ್ ಹಿಡಿದು ವಾಪಸ್ ತರಲು ಸಾಧ್ಯವಾಗಿಲ್ಲ. ಹೀಗಾಗಿ ಟ್ಯೂಬನ್ನು ಅಲ್ಲೆ ಬಿಟ್ಟಿದ್ದಾಳೆ. ಇದೇ ವೇಳೆ ಟ್ಯೂಬ್ ತರಲು ಹೋದ ಯುವತಿಯ ಹಿಂಭಾಗದಲ್ಲಿದ್ದ ಓರ್ವ ಯುವತಿ ನೀರಿನಲ್ಲೇ ಆಯ ತಪ್ಪಿದ್ದಾಳೆ. ಕೈಕಾಲು ಬಡಿದುಕೊಳ್ಳಲು ಆರಂಭಿಸಿದ್ದಾಳೆ. ಇದೇ ವೇಳೆ ಪಕ್ಕದಲ್ಲಿದ್ದ ಯುವತಿ ನೆರವಿಗೆ ಧಾವಿಸಿದ್ದಾಳೆ. ಕೈಚಾಚಿ ಯುವತಿಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಆದರೆ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ನೆರವಿಗೆ ಕೈಚಾಚಿದ ಯುವತಿ ಕೂಡ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಈ ವೇಳೆ ಮತ್ತಷ್ಟು ಗಾಬರಿಗೊಂಡ ಮೂರನೇ ಯುವತಿ ಇಬ್ಬರನ್ನು ರಕ್ಷಿಸಲು ಕೈ ನೀಡಿದ್ದಾಳೆ. ಪರಿಣಾಮ ಮೂವರು ನೀರಿನಲ್ಲಿ ಮುಳುಗಿದ್ದಾರೆ. ಬದುಕುಳಿಯಲು ಹಲವು ಪ್ರಯತ್ನ ಮಾಡಿದರೂ ಯುವತಿಯರಿಗೆ ಸಾಧ್ಯವಾಗಿಲ್ಲ. ಸರಿಯಾಗಿ ಈಜು ಬಾರದ ಕಾರಣ ಮೂವರು ಯುವತಿಯರು ನೀರಿನಲ್ಲೇ ತಮ್ಮ ಬದುಕಿನ ಅಂತ್ಯ ಕಂಡಿದ್ಸಾರೆ. ಕೊನೆಯ ಕ್ಷಣದ ಮೈಜುಮ್ಮೆನಿಸುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಮಂಗಳೂರಿನ ಉಚ್ಚಿಲ ಬಳಿ ಇರುವ ಸಾಯಿರಾಂ ವಾಸ್ಕೋ ರೆಸಾರ್ಟ್ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮೈಸೂರಿನ ನಿಶ್ಚಿತ, ಪಾರ್ವತಿ ಹಾಗೂ ಕೀರ್ತನಾ ಎಂಬ ಮೂವರು ಯುವತಿಯರು ಮಂಗಳೂರಿಗೆ ಬಂದು ರೆಸಾರ್ಟ್ ವೀಕೆಂಡ್ ವಿಶ್ರಾಂತಿ ಬಯಸಿದ್ದಾರೆ. ಆದರೆ ಮೂವರು ಈಜುಕೊಳದಲ್ಲಿ ಸಾವಿನಂಚಿಗೆ ಸರಿದು ಅಂತ್ಯಕಂಡಿದ್ದಾರೆ. ಯುವತಿಯರ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ನಡೆಸುತ್ತಿರುವ ಪೊಲೀಸರು ರೆಸಾರ್ಟ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೆಸಾರ್ಟ್ ಸುರಕ್ಷತಾ ನಿಯಮ ಪಾಲಿಸಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿದೆ.
ಬೀಚ್ ರೆಸಾರ್ಟ್ ನಿಯಮ ಉಲ್ಲಂಘಿಸಿರುವ ಕಾರಣ ಪರವಾನಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ತನಿಖೆ ಮುಗಿಯುವ ವರೆಗೂ ರೆಸಾರ್ಟ್ಗೆ ಪೊಲೀಸರು ಬೀಗ ಹಾಕಿದ್ದಾರೆ. ರೆಸಾರ್ಟ್ ಸೀಲ್ ಡೌನ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೇ ವೇಳೆ ನಿಯಮ ಉಲ್ಲಂಘಿಸಿರುವ ಇತರ ರೆಸಾರ್ಟ್ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ರೆಸಾರ್ಟ್ಗಳಿಗೆ ಎಚ್ಚರಿಕೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.ಹಲವು ರೆಸಾರ್ಟ್ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಇಂತಹ ರೆಸಾರ್ಟ್ಗೆ ಬೀಗ ಹಾಕಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.