ಉತ್ತರ ಪ್ರದೇಶದಿಂದ ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿ ಕರೆತಂದ ಶಿವಮೊಗ್ಗ ಸಿಇಎನ್ ಪೊಲೀಸರ ತಂಡ.
ಅಶ್ವಸೂರ್ಯ/ಶಿವಮೊಗ್ಗ,ನ,27: ಶಿವಮೊಗ್ಗ ನಗರದ ಗೋಪಾಳದ ಸುಮಾರು 72 ವರ್ಷದ ಎಲ್.ಎಸ್ ಆನಂದ್ ಅರವರಿಗೆ ಅಪರಿಚಿತ ವ್ಯಕ್ತಿಯೊಬ್ಬ ನಾನು ಸಿ.ಬಿ.ಐ ಅಧಿಕಾರಿ ಎಂದು ಹೇಳಿ ವಿಡಿಯೋ ಕಾಲ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದ್ದು ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿದೆ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು ನೀವು ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ತಿಳಿಸಿ ಆನಂದ್ ಅವರಿಂದ ಒಟ್ಟು 41 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು, ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0111/24 ಕಲಂ 66(ಡಿ) ಐಟಿ ಆಕ್ಟ್ & 111,318(4), 319(2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತು.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು
ಹಾಗೂ ಶ್ರೀ ಅನಿಲ್ ಕುಮಾರ್ ಭೂಮ್ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಮತ್ತು ಶ್ರೀ ಕಾರಿಯಪ್ಪ ಎ, ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಇವರುಗಳ ಮಾರ್ಗದರ್ಶನದಲ್ಲಿ , ಕೃಷ್ಣಮೂರ್ತಿ ಕೆ ಡಿ.ವೈ.ಎಸ್ಪಿ. ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ,ಇವರ ಮೇಲ್ವಿಚಾರಣೆಯಲ್ಲಿ, ಶ್ರೀ ಮಂಜುನಾಥ್ ಪಿ.ಐ ಇವರ ನೇತೃತ್ವದ ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು ಶರತ್ ಕುಮಾರ್ ಬಿ.ಎಸ್ ಸಿಪಿಸಿ ಇವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತು,
ದೂರು ದಾಖಲಾಗುತ್ತಿದ್ದ ಹಾಗೆ ತಕ್ಷಣವೇ ಕಾರ್ಯಚರಣೆಗೆ ಇಳಿದ ತನಿಖಾ ತಂಡವು ನವೆಂಬರ್12ರಂದು ಈ ಪ್ರರಕಣದ ಒಂದನೆ ಆರೋಪಿಯಾದ ಮೊಹಮ್ಮದ್ ಅಹಮದ್, (45 ) ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು ಎರಡನೇ ಆರೋಪಿ ಅಭಿಶೇಕ್ ಕುಮಾರ್ ಶೇಟ್ (27) ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ ಇವರನ್ನು ಬಂಧಿಸಿ.
ಆರೋಪಿತರಿಂದ ಒಟ್ಟು 23,89,751/- ರೂ ಹಣವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.