ಸಾಮಾಜಿಕ ಚಿಂತನೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯ ಜವಾಬ್ದಾರಿ
ವ್ಯಕ್ತಿ ಪರಿಚಯ ಶತಾಯು ಸಿದ್ದಮ್ಮ
ಅಶ್ವಸೂರ್ಯ/ಶಿವಮೊಗ್ಗ: ಮಹಿಳೆ ಜಗವ ಬೆಳಗುವ ಜೀವ ಕಳೆ. ತನ್ನದೆಲ್ಲ ಧಾರೆಎರೆದು ಸಂಸಾರಕ್ಕೆ ಸಮರ್ಪಿಸಿ ಕೊಂಡಿರುವ ತ್ಯಾಗಮಯಿ .ಇನ್ನು ಕೆಲ ಮಹನೀಯ ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಎಲೆಮರೆಯ ಕಾಯಂತೆ ನಿಸ್ವಾರ್ಥ ಸಮಾಜಸೇವೆ ಮಾಡಿದ್ದಾರೆ. ಅಂತಹ ವರ ಸಾಲಿನಲ್ಲಿ ಓರ್ವ ಅಪರೂಪ ವ್ಯಕ್ತಿತ್ವದ ಮಹಿಳೆಯರಲ್ಲಿ ಶತಾಯು ಸಿದ್ದಮ್ಮನವರ ಪರಿಚಯ ಮಾಡಿಕೊಳ್ಳೋಣ.
ಸಿದ್ದಮ್ಮನವರು ಚಿಕ್ಕಮಗಳೂರು ಜಿಲ್ಲೆಯ ಚನ್ನಗೋಡನಹಳ್ಳಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ್ದಾರೆ. ಪ್ರಾಯ ಸೊಂಕುವ ಮೊದಲೇ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾರಾಯಣಪುರ ಪುಟ್ಟ ಹಳ್ಳಿಯ ಈರಪ್ಪ ಎಂಬುವರೊಡನೆ ವಿವಾಹವಾಗುತ್ತಾರೆ. ಗಂಡ ತುಂಬಾ ಕಟ್ಟುನಿಟ್ಟು ಬೇರೆ ಗಂಡಸರನ್ನು ಮಾತನಾಡುವಂತಿರಲಿಲ್ಲ. ಹೀಗಿರುವಾಗ ಒಮ್ಮೆ ಆ ಊರಿನಲ್ಲಿ ನಾಟಕ ಮಾಡಿದಾಗ ತನ್ನ ಸೀರೆ ಕೊಟ್ಟಿದ್ದಕ್ಕೆ ಗಂಡನಿಂದ ಒದೆ ತಿಂದಿದ್ದಾಳೆ. ದಿನವು ಬೈಗುಳದ ಸುರಿಮಳೆ. ಆದರೂ ನೊಂದುಕೊಳ್ಳದೆ ಸಪ್ತಪದಿ ತುಳಿದ ಗಂಡನೊಂದಿಗೆ ಹೊಂದಿಕೊಂಡು ಏಳು ಮಕ್ಕಳ ತಾಯಿ ಆಗಿದ್ದಾಳೆ.! ಏಳನೇ ಮಗುವಿಗೆ ಒಂದು ವರ್ಷ ತುಂಬುವ ಹೊತ್ತಿಗೆ ಗಂಡ ವಿಧಿವಶರಾಗುತ್ತಾರೆ.
ಈ ಕ್ರೂರ ವಿಧಿಯಾಟಕ್ಕೆ ಏಳು ಮಕ್ಕಳ ತಾಯಿ ಸಿದ್ದಮ್ಮ ವಿಧವೆಯಾದ ದೃತ್ತಿಗೆಡದೆ ಸಂಸಾರದ ಜವಾಬ್ದಾರಿ ಹೊತ್ತು ಏಕಾಂಗಿಯಾಗಿ ಮಕ್ಕಳಿಗೆ ತಂದೆ ತಾಯಿಯಾಗಿ ಬದುಕಿನ ಬಂಡಿ ದೂಡಿದ್ದಾಳೆ.ಜೀವನ ನಿರ್ವಹಣೆಗೆ ಪರೂರಿಗೆ ಹೋಗಿ ಕೂಲಿ ಮಾಡಿ ಕುಟುಂಬ ನಿರ್ವಹಿಸಿದ್ದಳು.ತನ್ನ ಬಳಿ ಇದ್ದ ಒಂದು ಎಕರೆ ಜಮೀನನ್ನು ಕೊನೆ ತನಕ ಉಳಿಸಿಕೊಂಡಿದ್ದರು. ಜೊತೆ ಜೊತೆಗೆ ಊರಿನ ದೇವಸ್ಥಾನಕ್ಕೆ ಸುಣ್ಣ ಬಳಿದುಕೊಡುತ್ತಾಳೆ. ದೇವಸ್ಥಾನಗಳಿಗೆ ಹೂವು ಎತ್ತಿಕೊಡುವುದು, ಹಬ್ಬದ ದಿನಗಳಲ್ಲಿ ಊರಿನ ಹಲವರ ಮನೆಗೆ ಹೂಗಳ ಹಂಚುತಿದ್ದಳು. ತಾನು ತಿನ್ನುವ ಮುನ್ನ ಪ್ರಾಣಿ ಪಕ್ಷಿಗಳಿಗೆ ಒಂದೆರಡು ತುತ್ತು ಕೊಟ್ಟು ತಿಂದರೆ ಮಾತ್ರ ಆಕೆಯ ತುತ್ತು ಗಂಟಲಲ್ಲಿ ಇಳಿಯುತಿತ್ತು. ಎನ್ನುವುದು ಗ್ರಾಮದವರ ಮಾತು. ಊರಿನ ನೂರಾರು ಮಹಿಳೆಯರಿಗೆ ನಿಸ್ವಾರ್ಥದಿಂದ ಹೆರಿಗೆಯ ಮಾಡಿಸಿದ ಹಿರಿಮೆ ಸಿದ್ದಮ್ಮನದು. ಅಷ್ಟೇ ಅಲ್ಲ ಹಸುಗೂಸುಗಳಿಗೆ ಐದು ತಿಂಗಳಾಗುವ ತನಕ ತೈಲ ಸ್ನಾನ ಮಾಡಿಸಿಕೊಡುತ್ತಿದ್ದಳು. ಗ್ರಾಮದ ಬಾಂಣಂತಿಯರ ಸೇವೆಗೂ ಮುಂದಾಗುತ್ತಿದ್ದರು.ಕೆಟ್ಟ ದೃಷ್ಟಿ ಬಿದ್ದವರ ತೆಗೆಯುವ ಕಾಯಕ ಮಾಡುತ್ತಿದ್ದರು. ತನಗಿಂತ ಕಷ್ಟದಲ್ಲಿದ್ದವರಿಗೆ ತನ್ನಲ್ಲಿ ಇದ್ದದ್ದನ್ಬೆ ಕೊಡುತಿದ್ದಳು. ಎಲ್ಲರನ್ನು ಗೌರವದಿಂದ ಮಾತನಾಡಿಸಿಕೊಂಡು ಯಾರು ಏನು ಅಂದರು ಬೇಸರ ಮಾಡಿಕೊಳ್ಳದೆ ನಗುತ್ತ ಅವರನ್ನು ನಗಿಸುತ್ತಿದ್ದ ಸಿದ್ದಮ್ಮ. ಊರಿನ ಯಾರ ಮನೆಯಲ್ಲಿ ಕಾರ್ಯಕ್ರಮವಾದರೂ ಅಲ್ಲಿಯ ಕೆಲಸ ಕಾರ್ಯದಲ್ಲಿ ಸಿದ್ದಮ್ಮನದೆ ಸಿಂಹಪಾಲು. ತನ್ನ ಏಳು ಜನ ಮಕ್ಕಳಲ್ಲಿ ಐದು ಮಕ್ಕಳು ಉಳಿದಿರುತ್ತವೆ. ಅವರನ್ನು ಮದುವೆ ಮಾಡಿ ಮಕ್ಕಳು ಮೊಮ್ಮೊಕ್ಕಳು, ಮರಿಮಕ್ಕಳು, ಮುಮ್ಮರಿಮಕ್ಕಳವರೆಗೂ ಬಾಣಾಂತನ ಮಕ್ಕಳ ಆರೈಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ. ತೊಂಬ ತ್ತೇಳು ವರ್ಷ ದಾಟಿದರು ರಸ್ತೆ ಯ ಗುಡಿಸಿ ಸ್ವಚ್ಛಗೊಳಿಸುತ್ತಿದ್ದರು. ಸದಾ ಚುರುಕಿನಿಂದ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ನೂರರ ಆಸು ಪಾಸು ತಲುಪಿದರು. ಕೊನೆಯ ಆರು ತಿಂಗಳು ಹಾಸಿಗೆ ಹಿಡಿದಿದ್ದರು ಆಗ ಅವರ ಮಗ ತನ್ನ ತಾಯಿಯನ್ನು ಮಗುತರ ನೋಡಿ ಕೊಂಡಿದ್ದಾರೆ ಜೊತೆಗೆ ಅವರಿಗೆ ಅವರ ಕುಟುಂಬದ ಇತರ ಸದಸ್ಯರು ಸಹಕರಿಸಿದ್ದಾರೆ. 2023 ಡಿಸೇಂಬರ್ 9ರಂದು ದೈವಾದಿನರಾದರು.
ಶತಾಯು ಸಿದ್ದಮ್ಮನವರು ಸನ್ಮಾರ್ಗದಲ್ಲಿ ಬದುಕಿ ತಮ್ಮ ನಿಸ್ವಾರ್ಥ ಪರೋಪಕಾರದಿಂದ ಚಿರಾಯುವಾಗಿದ್ದಾರೆ. ತಮ್ಮ ಆದರ್ಶ ಗುಣಗಳಿಂದ ಅಮರರಾಗಿದ್ದಾರೆ. ಎಂತಹ ಅಪರೂಪದ ಅನನ್ಯ ಜೀವಕೆ ಅನಂತ ನಮನಗಳ ಸಲ್ಲಿಸೋಣ