ಸಾಹಿತ್ಯ ಗ್ರಾಮದಲ್ಲಿ ಕರ್ನಾಟಕ ಏಕೀಕರಣ ಮಾತು ಮಂಥನ, ಕನಕದಾಸರ ಜಯಂತಿ

ಸಾಹಿತ್ಯ ಗ್ರಾಮದಲ್ಲಿ ಕರ್ನಾಟಕ ಏಕೀಕರಣ ಮಾತು ಮಂಥನ, ಕನಕದಾಸರ ಜಯಂತಿ

ಅಶ್ವಸೂರ್ಯ/ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ೬೯ ನೆಯ ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಏಕೀಕರಣ ಹಿನ್ನಲೆ, ಆಶಯ, ಫಲಶೃತಿ ಕುರಿತು ಮಾತು ಮಂಥನ ಮತ್ತು ಕನಕದಾಸರ ಜಯಂತಿ ಕಾರ್ಯಕ್ರಮ ನವೆಂಬರ್ 18 ನೇ ಸೋಮವಾರ ಸಂಜೆ 6 ಕ್ಕೆ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದೆ.

ಏಕೀಕರಣ ಹೋರಾಟದ ಸಂದರ್ಭದಲ್ಲಿ ಶಾಸಕರಾಗಿದ್ದ ಬಿ. ಸ್ವಾಮಿರಾವ್‌ ಕಾರ್ಯವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿಗಳು, ವಿಮರ್ಶಕರಾದ ಪ್ರೊ. ರಾಜೇಂದ್ರ ಚೆನ್ನಿ, ಸಾಹಿತಿಗಳು, ವಿಶ್ರಾಂತ ಪ್ರಿನ್ಸಿಪಾಲರಾದ ಡಾ.
ಎಚ್. ಟಿ. ಕೃಷ್ಣಮೂರ್ತಿ ಅವರು ಮಾತು ಮಂಥನದಲ್ಲಿ ಭಾಗವಹಿಸಲಿದ್ದಾರೆ. ಮಾನಸ ಸಮೂಹ ಸಂಸ್ಥೆ ಮುಖ್ಯಸ್ಥರಾದ ಡಾ ರಜನಿಪೈ ಅವರನ್ನು ಅಭಿನಂದಿಸಲಾಗುವುದು. ನಮ್ಮೊಂದಿಗೆ ಅಧ್ಯಕ್ಷರಾದ ತಾಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಉಪಸ್ಥಿತರಿರುತ್ತಾರೆ.

ಏಕೀಕರಣ ಸಂದರ್ಭದಲ್ಲಿ ಕವಿಗಳು ಕಂಡ ಕಾವ್ಯ ಸಂಭ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಲಾವಿದರು, ಚಾಲುಕ್ಯ ನಗರದ ಸನ್ ಸಿಟಿ ವಿದ್ಯಾಸಂಸ್ಥೆ, ದ್ರೌಪದಮ್ಮ ವೃತ್ತದ ಬಳಿಯಿರುವ ಅನನ್ಯ ವಿದ್ಯಾಸಂಸ್ಥೆ, ಸರ್ಕಾರಿ ಪ್ರೌಢಶಾಲೆ ದುರ್ಗಿಗುಡಿ ಶಾಲಾ ವಿದ್ಯಾರ್ಥಿಗಳ ತಂಡದವರು ಭಾಗವಹಿಸಿ ಹಾಡು,ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು,ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!