ಅಕ್ರಮ ಚೀಟಿ ದಂಧೆ ಪುಷ್ಪಕಲಾ ಅಂಟಿ ಹಾಕಿದ್ಲು 250ಕ್ಕೂ ಅಧಿಕ ಜನರಿಗೆ ಟೋಪಿ! ರಾತ್ರೊ ರಾತ್ರಿ ಕಣ್ಮರೆಯಾದ ಪುಷ್ಪಕಲಾ…!
ಅಶ್ವಸೂರ್ಯ/ದೊಡ್ಡಬಳ್ಳಾಪುರ: ಸರಿ ಸುಮಾರು 250ಕ್ಕೂ ಅಧಿಕ ಮಂದಿಯನ್ನು ವಂಚಿಸಿ ಚೀಟಿ ಹಣ ನೀಡದೆ ಪುಷ್ಪಕಲಾ ಎನ್ನುವ ಮಹಿಳೆ ಎಸ್ಕೇಪ್ ಅದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೂಕಾಂಬಿಕಾ ಬಡಾವಣೆಯಲ್ಲಿ ನಡೆದಿದೆ .
ಹಣ ಕಳೆದುಕೊಂಡವರು
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪುಷ್ಪಕಲಾ ಎಂಬ ಮಹಿಳೆಯು ಯಾವುದೇ ಕಾನೂನು ಅನುಮತಿ ಇಲ್ಲದೆ ಅಕ್ರಮವಾಗಿ ಚೀಟಿ ದಂಧೆ ಸುಮಾರು ವರ್ಷಗಳಿಂದ ನೆಡೆಸುತ್ತಿದ್ದಳಂತೆ.!ಆದರೆ ಈಗ ಆಕೆಯ ಮೇಲೆ ನಂಬಿಕೆ ಇಟ್ಟು ಚೀಟಿ ಹಾಕಿದ್ದ 250ಕ್ಕೂ ಹೆಚ್ಚು ಮಂದಿ ಚೀಟಿದಾರರಿಗೆ ಹಣ ನೀಡದೆ ವಂಚಿಸಿ ಎಸ್ಕೇಪ್ ಆಗಿದ್ದಾಳೆ.ಹಣ ಕಳೆದುಕೊಂಡ ಬಡ ಮಹಿಳೆಯರು ಇದೀಗ ಆಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದ ಮೂಕಾಂಬಿಕಾ ಬಡಾವಣೆಯ ನಿವಾಸಿ ಈ ಪುಷ್ಪಕಲಾ ಅಂಟಿ.! ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈಕೆ ಕಳೆದ ನಾಲ್ಕೈದು ವರ್ಷಗಳಿಂದ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದಳು. ಕಳೆದ 4 ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರ ನಂಬಿಕೆ ಗಳಿಸಿದ್ದ ಪುಷ್ಪಾಕಲಾ ಬಳಿ ಸುತ್ತಮುತ್ತಲಿನ ಸುಮಾರು 250ಕ್ಕೂ ಹೆಚ್ಚು ಮಂದಿ ತಮ್ಮ ಮಕ್ಕಳ ಓದಿಗಾಗಿ, ಮದುವೆಗಾಗಿ,ತಮ್ಮ ಕನಸಿನ ಮನೆ ಕಟ್ಟುವ ಸಲುವಾಗಿ, ವ್ಯವಹಾರ ಮಾಡುವ ಸಲುವಾಗಿ ಹೀಗೆ ನಾನಾ ಕಷ್ಟಗಳನ್ನು ಪರಿಹರಿಸಿಕೊಳ್ಳವ ಸಲುವಾಗಿ ಚೀಟಿ ಹಾಕಿದ್ದರು.
ಆದರೆ ಪುಷ್ಪ ಅಂಟಿಯ ಗಂಡ ರುದ್ರ ಆರಾಧ್ಯ ಆ. 27ರಂದು ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾರೆ. ಮಕ್ಕಳು ಕಾಲೇಜಿಗೆ ಹೋಗಿದ್ದ ವೇಳೆ ಪುಷ್ಪಕಲಾ ಅಂಟಿ ಮನೆಯಿಂದ ನಾಪತ್ತೆಯಾಗಿದ್ದಾಳಂತೆ! ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸ್ ಆಫ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ನನಗೆ ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುದಾಗಿ ಹೇಳಿದ್ದಾಳೆ. ಪತಿ ರುದ್ರ ಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.
ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದೆ.ಪುಷ್ಪ ಅಂಟಿ ಕಣ್ಮರೆಯಾಗುತ್ತಿದ್ದಂತೆ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾ ಮಾಡಿರುವ ವಂಚನೆಯನ್ನು ಬಯಲು ಮಾಡಿದ್ದಾರೆ. ಇದೇ ವೇಳೆ ಕನ್ನಡಪರ ಹೋರಾಟಗಾರ ರಾಮಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಥಳೀಯ ಬಡ ಕುಟುಂಬದ ವರ್ಗದವರು, ಬಡ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಹೋಗುವ ಮಹಿಳೆಯರು, ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಚಿಟಿ ಹಣದೊಂದಿಗೆ ಪುಷ್ಪಕಲಾ ಅಂಟಿ ಎಸ್ಕೇಪ್ ಆಗಿದ್ದಾಳೆ. ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮದ ಮೂಲಕ ಬಡವರಿಗೆ ಹಣ ಕೊಡಿಸುವ ಕೆಲಸ ಮಾಡುತ್ತೇವೆʼʼ ಎಂದು ಕನ್ನಡ ಪರ ಹೋರಾಟಗಾರರು ಬಡವರ ಬೆನ್ನಿಗೆ ನಿಂತಿದ್ದಾರೆ.
ಕನ್ನಡಪರ ಹೋರಾಟಗಾರ ರಾಮಕೃಷ್ಣ
ನಿವೃತ್ತ ಶಿಕ್ಷಕರಾದ ಗಜೇಂದ್ರ ಮಾತನಾಡಿ, ʼʼಕಳೆದ 4 ವರ್ಷದಿಂದ ಪುಷ್ಪಕಲಾ ಶಿಸ್ತಿನಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇದೇ ನಂಬಿಕೆ ಮೇಲೆ ನಾನು ಸಹ ನಾಲ್ಕೈದು ಚೀಟಿಗಳ ಹಾಕಿದ್ದೆ. ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ. ಆಕೆಯ ವಂಚನೆಯಿಂದ ಸುಮಾರು 35 ಲಕ್ಷ ರೂ. ಹಣವನ್ನ ಕಳೆದುಕೊಂಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನೂ ದೊಡ್ಡಬಳ್ಳಾಪುರವಲ್ಲದೆ ಕರ್ನಾಟಕದ ನಗರ ಪಟ್ಟಣ ಗ್ರಾಮ ಗ್ರಾಮಗಳಲ್ಲೂ ಅಕ್ರಮ ಚೀಟಿ ದಂಧೆ ಭರ್ಜರಿಯಾಗಿ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಬೇಕಿದೆ.ಇನ್ನೂ ಶಿವಮೊಗ್ಗ ನಗರದಲ್ಲೂ ಅಕ್ರಮ ಚಿಟಿದಂಧೆ ಗಲ್ಲಿ ಗಲ್ಲಿಗಳಲ್ಲು ನೆಡೆಯುತ್ತಿದೆ.ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕದೆ ಹೋದರೆ ಇಂತಹ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಕ್ಷಣವೇ ಅಲರ್ಟ್ ಆಗಿ ಈ ಅಕ್ರಮ ಚಿಟಿ ದಂಧೆಯನ್ನು ಮಟ್ಟಹಾಕಬೇಕಿದೆ.