ಪಕ್ಷಿಕೆರೆಯಲ್ಲಿ ಕೊಲೆ ಪ್ರಕರಣ: ಕಾರ್ತಿಕ್ ಭಟ್ ತಾಯಿ, ಸಹೋದರಿಯ ಬಂಧನ.
ಅಶ್ವಸೂರ್ಯ/ಮುಲ್ಕಿ: ಪಕ್ಷಿಕೆರೆಯಲ್ಲಿ ಪತ್ನಿ ಹಾಗೂ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ತಾಯಿ ಹಾಗೂ ಆತನ ಅಕ್ಕನನ್ನು ಪೊಲೀಸರು ಬಂದಿಸಿದ್ದಾರೆ.
ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ರಾವ್ ಬಂಧಿತ ಆರೋಪಿಗಳು.
ಈ ಇಬ್ಬರ ವಿರುದ್ಧ ಕಾರ್ತಿಕ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ತಾಯಿ ಮತ್ತು ಮಗಳು ತಲೆ ತಿರುಗಿ ಬಿದ್ದಿದ್ದು, ಮೂಡಬಿದ್ರೆ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೋಲಿಸರ ಮಾಹಿತಿ ಪ್ರಕಾರ ಮೃತ ಕಾರ್ತಿಕ್ ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.
ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ರಾವ್
ಅನ್‌ಲೈನ್ ಆಟದ ಗೀಳು ಹೊಂದಿದ ಕಾರ್ತಿಕ್ ಸಾಕಷ್ಟು ಹಣ ಕಳೆದುಕೊಂಡಿರುವ ಸಂಶಯ ಕೂಡ ವ್ಯಕ್ತವಾಗಿದೆ!? ಈ ಕಾರಣದಿಂದ ಹಲವರ ಬಳಿ ಸಾಲ ಪಡೆದಿದ್ದರಂತೆ!? ಮನೆಯವರಿಂದಲೂ ತನಗೆ ಹಣದ ಸಹಾಯ ಸಿಗದಾಗ ಕಾರ್ತಿಕ್ ತೀವ್ರ ನೊಂದಿರುವ ಸಾಧ್ಯತೆ ಇದೆ ಜೊತೆಗೆ ಹೆತ್ತವರ ಕಿರುಕುಳವು ಜಾಸ್ತಿಯಾಗಿ ಸಾವು ಮನೆಯ ಹೊಸ್ತಿಲಿಗೆ ಆತನನ್ನು ತಂದು ನಿಲ್ಲುವಂತೆ ಮಾಡಿರಬಹುದು..!
ಕಾರ್ತಿಕ್ ತಂದೆ ತಾಯಿ
ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು,ಜಿಮ್ ನಿಂದ ಬಂದ ನಂತರ ಮನೆಯ ಕೋಣೆಯಲ್ಲಿ ಇರುತ್ತಿದ್ದಳಂತೆ ಇಡೀ ದಿನ! ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.? ಕಾರ್ತಿಕ್ ಮತ್ತು ಪ್ರಿಯಾಂಕ ಮೊಬೈಲ್ ಗಳು ಶೌಚಾಲಯದ ಕೊಮೊಡ್ ನಲ್ಲಿ ಸಿಕ್ಕಿದ್ದು ಈ ರೀತಿ ಯಾಕೆ ಮಾಡಿದ್ದಾರೆ ಎಂಬುವುದು ಇನಷ್ಟು ಸಂಶಯಕ್ಕೆ ಎಡೆ ಮಾಡಿದೆ. ಸದ್ಯ ಮುಲ್ಕಿ ಪೊಲೀಸರು ಇನ್ನಷ್ಟು ಮಾಹಿತಿಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮೃತ ಕಾರ್ತಿಕ್ ಗೆ ಮುದ್ದಾದ ಮಡದಿ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳವಂತಹ ಪರಿಸ್ಥಿತಿ ಎನಿತ್ತು.? ಮನೆಯಲ್ಲಿ ತಂದೆ ತಾಯಿ ಅಕ್ಕನ ಜೋತೆಗೆ ಹೊಂದಾಣಿಕೆ ಸರಿ ಇಲ್ಲವೆಂದ ಮೇಲೆ ಬೇರೆ ಮನೆ ಮಾಡಿಕೊಂಡು ಜೀವನ ನೆಡೆಸಬಹುದಿತ್ತು!? ಅದನ್ನು ಬಿಟ್ಟು ಇವನನ್ನೆ ನಂಬಿ ಬದುಕಿದ್ದ ಎರಡು ಜೀವವನ್ನು ತೆಗೆದು ತಾನು ಆತ್ಮಹತ್ಯೆ ಮಾಡಿಕೊಂಡು ವಿಕೃತವಾಗಿ ವರ್ತಿಸಿರುವ ಕಾರ್ತಿಕ್ ನನ್ನು ಏನೆಂದು ಹೇಳಬೇಕು!? ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾರ್ತಿಕ್ ಗೆ ಹೆತ್ತವರ ಮತ್ತು ಒಡ ಹುಟ್ಟಿದವರ ಹಿಂಸೆ ಒಂದು ಕಡೆಯಾದರೆ ಆತ ಮಾಡಿದ ಸಾಲ ಕೂಡಾ ಆತನನ್ನು ಈ ನಿಚ ಕೃತ್ಯಮಾಡಲು ಕಾರಣವಿರಬಹುದು? ಕಾರ್ತಿಕ್ ಮತ್ತು ಆತನ ಹೆತ್ತವರ ನೀಚತನಕ್ಕೆ ಬಲಿಯಾದದ್ದು ಮಾತ್ರ ಎರಡು ಅಮಾಯಕ ಜೀವಗಳು ( ತಾಯಿ ಮತ್ತು ನಾಲ್ಕು ವರ್ಷದ ಮಗು) ಎಂದರೆ ತಪ್ಪಾಗಲಾರದು.