ನಾಪತ್ತೆಯಾದವಳು ಶವವಾಗಿ ಪತ್ತೆ! ಜಡ್ಜ್‌ ಬಂಗಲೆ ಬಳಿಯೇ ಹೆಣ ಹೂತು ಹಾಕಿದ್ದ ಹಂತಕ!

ನಾಪತ್ತೆಯಾದವಳು ಶವವಾಗಿ ಪತ್ತೆ! ಜಡ್ಜ್‌ ಬಂಗಲೆ ಬಳಿಯೇ ಹೆಣ ಹೂತ್ತು ಹಾಕಿದ್ದ ಹಂತಕ!

ಅಶ್ವಸೂರ್ಯ/ಶಿವಮೊಗ್ಗ: ಕಳೆದ ನಾಲ್ಕು ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಪತ್ನಿ ಏಕ್ತಾ ಗುಪ್ತಾ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿಯೇ ಮಹಿಳೆಯನ್ನು ಹತ್ಯೆ ಮಾಡಿ ಅದೆ ಸ್ಥಳದಲ್ಲಿ ಹೂತು ಹಾಕಲಾಗಿತ್ತು. ಇನ್ನೂ ಈ ಮಹಿಳೆಯನ್ನು ಸ್ಥಳೀಯ ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಬರ್ಬರವಾಗಿ ಹತ್ಯೆಮಾಡಿ ಹೂತು ಹಾಕಿದ್ದಾನೆ ಎಂಬುದು ಪೊಲೀಸ್‌ ತನಿಖೆ ವೇಳೆ ವರದಿಯಾಗಿದೆ.

ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಶವ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ಮಾಹಿತಿ ಅಧಾರದ ಮೇಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶವ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಹಂತಕನನ್ನು ಹೆಡೆಮುರಿಕಟ್ಟಲು ಕಾರ್ಯಚರಣೆಗೆ ಇಳಿದಿದ್ದರು. ಹಂತಕನ ಬೇಟೆಗೆ ಇಳಿದ ಪೊಲೀಸರಿಗೆ ತನಿಖೆಯ ವೇಳೆ ಜಿಮ್‌ ಟ್ರೇನರ್‌ ವಿಮಲ್‌ ಸೋನಿ ಎಂಬಾತ ಉದ್ಯಮಿ ಪತ್ನಿ ಏಕ್ತಾ ಗುಪ್ತಾ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಕೂಡಲೇ ಕಾರ್ಯ ಪ್ರವೃತ್ತರಾದ ಕಾನ್ಫುರ ಪೋಲಿಸರು ಆರೋಪಿ ವಿಮಲ್ ಸೋನಿಯನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಆರೋಪಿ ವಿಮಲ್‌ ಕಾನ್ಪುರ ಗ್ರೀನ್‌ ಪಾರ್ಕ್‌ನಲ್ಲಿ ಜಿಮ್ ತರಬೇತುದಾರನಾಗಿದ್ದು ಈತನಿಂದ ಹತ್ಯೆಯಾದ ಮಹಿಳೆ ಆತನ ಜಿಮ್‌ಗೆ ಹೋಗುತ್ತಿದ್ದಳಂತೆ!ಕೊಲೆಯಾದ ಮಹಿಳೆಗೆ ವಿವಾಹವಾಗಿದ್ದು, ಆಕೆಯ ಪತಿ ಕಾನ್ಪುರದಲ್ಲಿ ಉದ್ಯಮಿಯಾಗಿದ್ದಾರೆ. ಕೊಲೆಯಾದ ಮಹಿಳೆ ಹಾಗೂ ಆರೋಪಿ ವಿಮಲ್‌ ನಡುವೆ ಆತ್ಮೀಯ ಗೆಳೆತನವಿದ್ದು ನಂತರ ಆರೋಪಿ ವಿಮೀಲ್ ಗೆ ಮದುವೆ ನಿಶ್ಚಯಾವಾದ ವಿಷಯ ತಿಳಿದ ಮಹಿಳೆಗೆ ತೀವ್ರ ಅಸಮಧಾನವಿತ್ತು ಎಂದು ಆರೋಪಿ ಹೇಳಿದ್ದಾನೆ.

ಜೂನ್ 24 ರಂದು ಮಹಿಳೆ ಗ್ರೀನ್‌ ಪಾರ್ಕನಲ್ಲಿರುವ ಜಿಮ್‌ಗೆ ಬಂದಿದ್ದಳು.ನಂತರ ನಾವಿಬ್ಬರೂ ಕಾರನಲ್ಲಿ ಕೂತು ಬಹಳ ಹೊತ್ತು ನನ್ನ ಮದುವೆಯ ಬಗ್ಗೆ ಮಾತನಾಡಿದ್ದೇವು .

ಆಕೆ ಸಿಟ್ಟಲ್ಲಿ ನನಗೆ ಅವಾಚ್ಯ ಶಬ್ಧದಿಂದ ನಿಂದಿಸತೊಡಗಿದಳು, ಇದರಿಂದ ಸಿಟ್ಟಿಗೆದ್ದ ನಾನು ಆಕೆಯ ಕುತ್ತಿಗೆಗೆ ಗುದ್ದಿದ್ದು, ಬಳಿಕ ಆಕೆ ಮೂರ್ಛೆ ಹೋದಳು. ನಂತರ ಆಕೆಯನ್ನು ಕೊಲೆ ಮಾಡಿ ಸರ್ಕಾರಿ ಅಧಿಕಾರಿಗಳಿಗೆ ಮಂಜರೂ ಮಾಡಿದ ವಸತಿ ಪ್ರದೇಶದಲ್ಲಿ ಆಕೆಯನ್ನು ಶವವನ್ನು ಹೂತು ಹಾಕಿದ್ದೆ!? ಎಂದು ಹೇಳಿಕೆ ನೀಡಿದ್ದಾನಂತೆ!?

ಆರೋಪಿಯ ಬಂಧನದ ಬಳಿಕ ಈ ಹತ್ಯಾ ಪ್ರಕರಣದ ಬಗ್ಗೆ ಮಾಧ್ಯಮದವರೊಂದಿಗೆ ಮತನಾಡಿದ ಉತ್ತರ ಕಾನ್ಪುರ ಡಿಸಿಪಿ ಶ್ರವಣ್ ಕುಮಾರ್ ಸಿಂಗ್ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಬಂಧಿತ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ಮೊಬೈಲ್‌ ಫೋನ್‌ ಬಳಸದೆ ಇರುವ ಕಾರಣಕ್ಕೆ ತನಿಖೆ ವಿಳಂಬವಾಯಿತು, ಈತನ ಜೊತೆಗೆ ಇನ್ನೂ ಯಾರಾದರೂ ಇದ್ದಾರ ಎನ್ನುವುದು ಹೆಚ್ಚಿನ ವಿಚಾರಣೆ ಮೂಲಕ ಹೊರ ಬರಬೇಕಿದೆ ಎಂದರು.

Leave a Reply

Your email address will not be published. Required fields are marked *

Optimized by Optimole
error: Content is protected !!