ಆತ್ಮಹತ್ಯೆಗೆ ಶರಣಾದ ಮಹಿಳೆ.! ಸ್ಯಾನಿಟರಿ ಪ್ಯಾಡ್‌ನೊಳಗೆ ಇತ್ತು ಡೆತ್‌ನೋಟ್..!

ಆತ್ಮಹತ್ಯೆಗೆ ಶರಣಾದ ಮಹಿಳೆ.! ಸ್ಯಾನಿಟರಿ ಪ್ಯಾಡ್‌ನೊಳಗೆ ಇತ್ತು ಡೆತ್‌ನೋಟ್..!

ಅಶ್ವಸೂರ್ಯ/ಕಾಸರಗೋಡು: ಧರಿಸಿರುವ ಸ್ಯಾನಿಟರಿ ಪ್ಯಾಡ್‌ನೊಳಗಡೆ ಡೆತ್‌ನೋಟ್ ಬರೆದು ಬಚ್ಚಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಪ್ರಕರಣವೊಂದು ಕಾಸರಗೋಡಿನ ಬೋವಿಕ್ಕಾನದ ಪೊವ್ವಲ್ ಬೆಂಚುಕೋರ್ಟುವಿನಲ್ಲಿ ವರದಿಯಾಗಿದೆ. ಸ್ಯಾನಿಟರಿ ಪ್ಯಾಡ್‌ನೊಳಗಡೆ ಇದ್ದ ಡೆತ್‌ನೋಟ್ ಅನ್ನು ತೆಗೆದು ನೋಡಿದ ಪೊಲೀಸರಿಗೆ ಈಕೆ ಸಾವಿನ ಹಿಂದಿನ ಸತ್ಯ ಬಯಲಾಗಿದೆ. ಪತಿ ಜಾಫರ್ ಎಂಬಾತ ನೀಡಿದ ಕಿರುಕುಳದ ಕರಾಳತೆಯನ್ನು ಆಕೆ ಎಳೆಎಳೆಯಾಗಿ ಬರೆದು ತನಗಾದ ಚಿತ್ರಹಿಂಸೆಯನ್ನು ಅಕ್ಷರ ರೂಪದಲ್ಲಿ ಅನಾವರಣ ಮಾಡಿದ್ದಾಳೆ. ಆರೋಪಿ ಜಾಫರ್ ನ ಪತ್ನಿ ಆತ್ಮಹತ್ಯೆಗೆ ಶರಣಾದ ಹಣ್ಣು ಮೂಲತಃ ಸುಳ್ಯದ ಗಾಂಧಿನಗರದ ಅಲೀಮಾ ಅಲಿಯಾಸ್ ಶೈಮ (35) ಎಂಬಾಕೆ. ಈಕೆ ಆತ್ಮಹತ್ಯೆಗೂ ಮುನ್ನ ತನ್ನ ಮೇಲಾದ ದೌರ್ಜನ್ಯ, ಚಿತ್ರಹಿಂಸೆ ಗಂಡನ ಕಿರುಕುಳದ ಸಂಪೂರ್ಣ ವಿವರವನ್ನು ಡೆತ್‌ನೋಟ್ ನಲ್ಲಿ ಎಳೆ ಎಳೆಯಾಗಿ
ಬರೆದಿಟ್ಟಿದ್ದಾಳೆ. ಐದು ಮಕ್ಕಳತಾಯಿ ಅಲೀಮಾ ಮನೆಯ ಬಚ್ಚಲು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿ ಆತ್ಮಹತ್ಯೆಮಾಡಿಕೊಂಡ ಬೆನ್ನಲ್ಲೇ ಪತಿ ಜಾಫ‌ರ್ ರಾತ್ರಿಯೇ ಮನೆ ಊರು ಬಿಟ್ಟು ತಲೆಮರೆಸಿಕೊಂಡಿದ್ದಾನೆ. ದಂಪತಿಗಳ ನಡುವೆ ಜಗಳವಾಗಿದ್ದು ಪತಿಯ ಸಂಶಯದ ರೋಗವನ್ನು ಸಹಿಸಲಾಗದೇ, ತಾನು ನಿತ್ಯ ಅನುಭವಿಸಿದ ನರಕಯಾತನೆಯನ್ನು ಎಳೆಎಳೆಯಾಗಿ ಬರೆದಿಟ್ಟು ನನಗೆ ಆತ್ಮಹತ್ಯೆಯಲ್ಲದೇ ಬೇರೆ ದಾರಿಯೆ ಇಲ್ಲ ಎಂದು ಬರೆದಿದ್ದಾಳೆ. ಈ ಡೆತ್‌ನೋಟ್ ಅನ್ನು ತಾನು ಧರಿಸಿರುವ ಪ್ಯಾಡ್‌ನೊಳಗಿಟ್ಟು ಅಲೀಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.!


ವಿಪರೀತ ಸಂಶಯದ ಭೂತನಾಗಿದ್ದ ಪತಿ ನಿತ್ಯ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ದೈಹಿಕ ಹಲ್ಲೆಯ ಜೊತೆಗೆ ಮಾನಸಿಕವಾಗಿಯು ಹಿಂಸೆ ನೀಡಿ ದೌರ್ಜನ್ಯ ನಡೆಸಿದ್ದಾನೆ. ತನ್ನ ಮೊಬೈಲ್ ಕಿತ್ತುಕೊಂಡು, ಯಾರೊಂದಿಗೂ ಸಂಪರ್ಕವೇ ಇಲ್ಲದಂತೆ ಮಾಡಿದ್ದ‌. ತನ್ನನ್ನು ಬೆತ್ತಲು ಮಾಡಿ ಹಲ್ಲೆಗೈದು ಹೆಣ್ಣೊಬ್ಬಳಿಗೆ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆಂದು ಆಕೆ ಡೆತ್‌ನೋಟ್ ನಲ್ಲಿ ವಿವರಿಸಿದ್ದಾರೆ. ಲೈಂಗಿಕ ದೌರ್ಜನ್ಯವನ್ನೂ ಮಾಡುತ್ತಿದ. ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ಆಕೆ ಬರೆದಿಟ್ಟ ಪತ್ರ ಗುಪ್ತಾಂಗ ಭಾಗದಲ್ಲಿ ಪತ್ತೆಯಾಗಿದೆ.
ನಾಪತ್ತೆಯಾದ ಜಾಫ‌ರ್ ಇನ್ನೂ ಪತ್ತೆಯಾಗಿಲ್ಲ. ಮೃತ ಮಹಿಳೆ ಬರೆದಿಟ್ಟ ಪತ್ರ ಸಿಕ್ಕಿದ ಮೇಲೂ ಪ್ರಕರಣ ದಾಖಲಿಸಿರುವ ಪೊಲೀಸರು ಜಾಫ‌ರ್ ವಿರುದ್ಧ ಆತ್ಮಹತ್ಯಾ ಪ್ರೇರಣೆ, ನಿರಂತರ ದೌರ್ಜನ್ಯ, ನೈತಿಕ ಸಂಶಯದ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿ ಸುಳ್ಯ ಗಾಂಧಿನಗರ ಮೂಲದ ಮಹಿಳೆ ಕುಟುಂಬದವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾನವ ಹಕ್ಕು ಆಯೋಗಕ್ಕೆ ದೂರಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!