ಚೆನ್ನೈ: ಇತ್ತೀಚೆಗಷ್ಟೇ ಚಿತ್ರ ಕಲಾವಿದರು ನಿರ್ದೇಶಕರು ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾವಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ.ಕೇಲವು ದಿನಗಳ ಹಿಂದೆ ಖ್ಯಾತ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿಯ ಬೆನ್ನಿಗೆ ಇದೀಗ 1980-90ರ ದಶಕದಲ್ಲಿ ಪೋಷಕ ಪಾತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಮೋಹನ್ (60ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ!? ಮೋಹನ್ ಮೂಲ ತಮಿಳು ಚಿತ್ರರಂಗದವರಾಗಿದ್ದರು ದಕ್ಷಿಣ ಭಾರತದ ತೆಲುಗು ಕನ್ನಡ ಚಿತ್ರಗಳಲ್ಲೂ ಮೋಹನ್ ಅಭಿನಯಿಸಿದ್ದಾರೆ. ಅದರಲ್ಲೂ
ಕಮಲ್ ಹಾಸನ್ ನಟನೆಯ ಸೂಪರ್ ಹಿಟ್ ಸಿನಿಮಾ ತಮಿಳಿನ ಅಪೂರ್ವ ಸಹೋದರಗಳ್ ಹಾಗೂ ನಾನ್ ಕಡವುಳ್ ಸೇರಿದಂತೆ ನೂರಾರು ತಮಿಳು ಚಿತ್ರಗಳಲ್ಲಿ ಮೋಹನ್ ನಟಿಸಿದ್ದರು. ಆದರೆ ಇತ್ತೀಚೆಗೆ ಅವರಿಗೆ ಅವಕಾಶಗಳ ಕೊರತೆಯಿಂದಾಗಿ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದರಂತೆ. ಬದುಕು ಸಾಗಿಸಲು ಕೈಯಲ್ಲಿ ಕೇಲಸವಿಲ್ಲದ ಕಾರಣಕ್ಕೆ ನಟ ಮೋಹನ್ ತಿರುಪರಂಕುಂದ್ರಂನ ದೇವಸ್ಥಾನ ಒಂದರ ಸಮೀಪ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದರು ಎಂದು ತಿಳಿದುಬಂದಿದೆ.ನಂಬಲು ಅಸಾಧ್ಯ ವೇನಿಸಿದರು ಆತನ ಶವವಿದ್ದ ಸ್ಥಳವನ್ನು ನೋಡಿದಮಂದಿ ನಟ ಮೋಹನ್ ಭಿಕ್ಷೆ ಬೇಡುತ್ತಿದ್ದದ್ದು ನಿಜವೆಂದು ಹೇಳಿದ್ದಾರೆ.
ನಟ ಮೋಹನ್ ಅವರನ್ನು ನೋಡಿಕೊಳ್ಳುವವರು ಯಾರು ಇರಲಿಲ್ಲವಂತೆ ಕುಬ್ಜ ದೇಹವುಳ್ಳವರಾಗಿದ್ದ ಮೋಹನ್ ರಸ್ತೆಯಲ್ಲಿಯೇ ಕೊನೆಯುಸಿರೆಳೆದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ನಂತರ ಗುರುತುಪತ್ತೆ ಹಚ್ಚಲಾಗಿತ್ತು ಎಂದು ವರದಿ ತಿಳಿಸಿದೆ.
ನಿರ್ದೇಶಕ ಬಾಲಾ ಅವರ ನಾನ್ ಕಡವುಳ್ ತಮಿಳು ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಇದು ಅವರ ಕೊನೆಯ ಚಿತ್ರ ಇರಬೇಕು ಈ ಚಿತ್ರ ಭರ್ಜರಿ ಕಲೆಕ್ಷನ್ ಕೂಡಾ ಮಾಡಿತ್ತು. ಆದರೆ ಈ ಸಿನಿಮಾದಲ್ಲಿ ಮೋಹನ್ ನಟಿಸಿದ ನಂತರ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲವಂತೆ. ಈ ಕಾರಣದಿಂದಲೇ ಮೋಹನ್ ತಮ್ಮ ಊರಾದ ತಿರುಪರಂಕುಂದ್ರಂಗೆ ತೆರಳಿದ್ದರು. ಕುಬ್ಜ ದೇಹದ ಮೋಹನ್ ಗೆ ಅಲ್ಲಿಯೂ ಸೂಕ್ತವಾದ ಕೆಲಸ ಸಿಗದೇ, ರಸ್ತೆಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದೊದಗಿತ್ತು.
ಸುಮಾರು 10 ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ಕೂಡ ತೀರಿಕೊಂಡಿದ್ದರೆಂದು ತಿಳಿದುಬಂದಿದೆ ಜುಲೈ 31ರಂದು ಹಾಸ್ಯ ನಟ ಮೋಹನ್ ಮೃತದೇಹ ಪತ್ತೆಯಾಗಿದ್ದು, ನಟನ ದೇಹ ಗುರುತಿಸಲಾಗದ ಸ್ಥಿತಿಯಲ್ಲಿತ್ತೆಂದು ವರದಿಯಾಗಿದೆ..!!
ಸುಧೀರ್ ವಿಧಾತ , ಶಿವಮೊಗ್ಗ