LEADER ಸಿದ್ಧರಾಮಯ್ಯ
ಜನಪ್ರಿಯ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು
ಬೆಳ್ಳಿತೆರೆಯ ಮೇಲೆ ಬರಲಿದೆ LEADER RAMAIAH. ಸಿಎಂ ಸಿದ್ದರಾಮಯ್ಯನವರ ಬಯೋಪಿಕ್: ಸಿಎಂ ಪಾತ್ರದಲ್ಲಿ ಅಭಿನಯಿಸುವ ನಟ ಯಾರು?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಯೋಪಿಕ್ ಲೀಡರ್ ರಾಮಯ್ಯ ಚಿತ್ರದ ಶೂಟಿಂಗ್ಗೆ ಭರ್ಜರಿ ತಯಾರಿ ನಡೆದಿದ್ದು, ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟನ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯ ವಿಧಾನಸಭೆಯ ಚುನಾವಣೆ ದಿನಾಂಕದ ಘೋಷಣೆಗೂ ಮುನ್ನವೇ ರಾಜಕೀಯ ವಲಯದಲ್ಲಿ ಒಂದೆಡೆ ಬಿರುಸಿನ ಚಟುವಟಿಕೆ ನಡೆಯುತ್ತಿದ್ದರೆ, ಅದೇ ವೇಳೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿ ಕರ್ನಾಟಕದ ಹೆಮ್ಮೆಯ ಜನ ನಾಯಕ ಸಿದ್ಧರಾಮಯ್ಯನವರ ಜೀವನಾಧಾರಿತ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನೆಡೆದಿತ್ತು. ಇನ್ನೇನು ಚಿತ್ರಕರಣ ಆರಂಭವಾಗಬೇಕಿತ್ತು ಚುನಾವಣೆಯ ಸಮಯದಲ್ಲಿ ಇವೆಲ್ಲಾ ಬೇಡ ಎಂದು ಖುದ್ದು ಸಿದ್ದರಾಮಯ್ಯನವರು ಹೇಳಿದ್ದರು ಎನ್ನಲಾಗಿತ್ತು. ಆದರೂ ಸಿನಿಮಾದ ಬಗ್ಗೆ ವಿಧ ವಿಧ ಸುದ್ದಿಗಳು ಹರಡಿದ್ದವು. ಇದಾದ ಬಳಿಕ ಕಳೆದ ಮಾರ್ಚ್ 30ರಂದು ಈ ಬಯೋಪಿಕ್ನ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿತ್ತು. ಲೀಡರ್ ರಾಮಯ್ಯ ಹೆಸರಿನ ಸಿನಿಮಾ ಪೋಸ್ಟರ್ ಅನ್ನು ಸಿದ್ದರಾಮಯ್ಯನವರ ಮನೆಯ ಮುಂದೆ ಅನಾವರಣ ಮಾಡಲಾಗಿತ್ತು. ನಂತರ ಆ ಸಿನಿಮಾದ ಬಗ್ಗೆ ಅಷ್ಟಾಗಿ ಸುದ್ದಿಗಳು ಹೊರಬರಲಿಲ್ಲ ಇದು ಇಲ್ಲಿಗೆ ಮುಗಿದ ಅಧ್ಯಾಯವೆಂದು ಸಿದ್ಧರಾಮಯ್ಯನವರ ಅಭಿಮಾನಿಗಳು ಅಂದು ಕೊಂಡಿದ್ದರು ಆದರೆ ಇದೀಗ ಸಿನಿಮಾ ಕುರಿತು ಸಾಕಷ್ಟು ಮಾಹಿತಿ ಹೊರಬಂದಿದೆ. ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಗಂಗಾವತಿ ಮೂಲದ ಹಯಾದ್ ಪೀರ್ ಸಂಸ್ಥೆಯು ಚಿತ್ರದ ಅಂತಿಮ ಹಂತದ ಸಿದ್ಧತೆಯಲ್ಲಿದೆ ಎಂದು ತಿಳಿದುಬಂದಿದೆ. ಲೀಡರ್ ರಾಮಯ್ಯ ಎಂದು ಹೆಸರಿಟ್ಟಿರುವ ಈ ಚಿತ್ರಕ್ಕೆ A KING RAISED BY THE PEOPLE ಅರ್ಥಾತ್ ಜನರಿಂದ ಬೆಳೆದು ಬಂದ ರಾಜ ಎಂಬ ಟ್ಯಾಗ್ಲೈನನ್ನು ಈ ಚಿತ್ರಕ್ಕೆ ನೀಡಲಾಗಿದೆ.
ಈ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬಂದಿದೆ. ಅದೇನೆಂದರೆ, ಚಿತ್ರವನ್ನು ಗೌರಿಬಿದನೂರಿನ ಸತ್ಯರತ್ನಂ ನಿರ್ದೇಶನ ಮಾಡಲಿದ್ದು ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಅಂದಾಜು 30 ರಿಂದ 50 ಕೋಟಿ ರೂಪಾಯಿಯ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ ಇದೇ ಮೂರನೆಯ ತಾರೀಖಿನಂದು ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಆ ದಿನದಂದೇ ಚಿತ್ರ ಬಿಡುಗಡೆ ಮಾಡಬೇಕು ಅನ್ನೋದು ನಿರ್ದೇಶಕ ಸತ್ಯ ರತ್ನಮ್ ಅವರ ಕನಸಾಗಿತ್ತು. ಅದು ಸಾಧ್ಯವಾಲಿಲ್ಲ ಈಗ ಚಿತ್ರಕರಣ ಆರಂಭಿಸಲು ಅಂತಿಮ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಸಿದ್ಧರಾಮಯ್ಯ ಅವರ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಇದೆಯಂತೆ.! ಎಂದು ಮೊದಲಿನಿಂದಲೂ ಸೇತುಪತಿ ಅವರ ಹೆಸರು ಕೇಳಿಬರುತ್ತಿದ್ದು ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನಿರ್ಮಾಪಕರು ನಟ ಸೇತುಪತಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದು ವಿಜಯ್ ಸೇತುಪತಿ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವಿಜಯ್ ಸೇತುಪತಿ ಅವರ ಕೈಯಲ್ಲಿ ಸಾಕಷ್ಟು ಸಿನಿಮಾ ಒಪ್ಪಿಕೊಂಡಿರುವ ಕಾರಣಕ್ಕೆ ಸಿದ್ದರಾಮಯ್ಯನವರ ಪಾತ್ರದಲ್ಲಿ ನಟಿಸಲು ಇನ್ನೂ ಡೇಟ್ ಫಿಕ್ಸ್ ಮಾಡಿಲ್ಲವಂತೆ. ಅವರ ಡೇಟ್ಸ್ ಪಡೆಯಲು ಮತ್ತು ಕೆಲಸ ಆರಂಭಿಸಲು ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ವಿಜಯ್ ಸೇತುಪತಿಯೇ ನಟಿಸುವುದು ಪಕ್ಕಾ ಎನ್ನಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗು ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಅಷ್ಟಕ್ಕೂ ಈ ಚಿತ್ರ ಎರಡು ಭಾಗಗಳಲ್ಲಿ ಬರಲಿದೆಯಂತೆ.! ಕಾರಣವೇನೆಂದರೆ, ಮೊದಲ ಭಾಗದಲ್ಲಿ ಸಿದ್ದರಾಮಯ್ಯನವರ ಬಾಲ್ಯ ಮತ್ತು ಹುಡುಗಾಟ ಯೌವ್ವನದ ಕುರಿತು ಚಿತ್ರಕರಿಸಲಾಗುವುದಂತೆ ಕಥೆಯನ್ನು ಅವರ ನೀಜ ಜೀವನದ ನೈಜತೆಗೆ ಹತ್ತಿರವಾಗಿರಲಿದೆಯಂತೆ. ರಾಜಕೀಯ ಪ್ರವೇಶಕ್ಕೂ ಮುನ್ನ ಸಿದ್ದರಾಮಯ್ಯನವರ ವಕೀಲ ವೃತ್ತಿ ನಡೆಸುತ್ತಿದ್ದರು. ಈ ಬಗ್ಗೆಯೂ ಮೊದಲ ಭಾಗದಲ್ಲಿ ತೋರಿಸಲಾಗುತ್ತದೆಯಂತೆ. ಇದರ ಜೊತೆಗೆ ಸಿದ್ದರಾಮಯ್ಯನವರು ಯುವಕರಾಗಿದ್ದಾಗ ಮಾಡಿದ ಹೋರಾಟಗಳು ಹಾಗೂ ಅವರ ರಾಜಕೀಯ ಪಾದಾರ್ಪಣೆಯ ಬಗ್ಗೆಯೂ ಚಿತ್ರದಲ್ಲಿ ತೋರಿಸಲಾಗುವುದಂತೆ. ಆ ನಂತರದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿ. ಜನಪ್ರಿಯ ಜನ ನಾಯಕರಾಗಿ. ಸಚಿವರಾಗಿ ಮುಖ್ಯ ಮಂತ್ರಿಗಳಾಗಿ ರಾಜಕೀಯ ಅಂಗಳದಲ್ಲಿ ಹೆಜ್ಜೆಹಾಕಿದ ಸುಖ ದುಃಖದ ನೈಜ ಕಥೆಯನ್ನು ಚಿತ್ರದ ಎರಡನೇ ಭಾಗದಲ್ಲಿ ತೋರಿಸಲಾಗುತ್ತದೆಯಂತೆ. ಸಿದ್ದರಾಮಯ್ಯ ಕೂಡ ಚಿತ್ರದಲ್ಲಿ ಕೊನೆಯ ಅರ್ಧ ಗಂಟೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಶೂಟಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ ಎನ್ನಲಾಗಿದ್ದು. ಅದು ಯಾವಾಗ ಎನ್ನುವುದು ಮಾತ್ರ ಚಿತ್ರ ತಂಡವೇ ಹೇಳಬೇಕಿದೆ.
ಸುಧೀರ್ ವಿಧಾತ, ಶಿವಮೊಗ್ಗ