ರಂಗಾಯಣ ಶಿವಮೊಗ್ಗ: ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ನಾಟಕೋತ್ಸವ ಸುವರ್ಣ ಸಂಸ್ಕೃತಿ ಭವನದಲ್ಲಿ
ಅಶ್ವಸೂರ್ಯ/ಶಿವಮೊಗ್ಗ: ರಂಗಾಯಣ ಶಿವಮೊಗ್ಗ ಆಶ್ರಯದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ನಾಟಕೋತ್ಸವವನ್ನು ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ನಾಟಕೋತ್ಸವವು ಸೆಪ್ಟೆಂಬರ್ 21, 2024 ರ ಶನಿವಾರದಿಂದ 23, ಸೆಪ್ಟೆಂಬರ್ 2024 ರ ಸೋಮವಾರದವರೆಗೆ ಪ್ರತಿ ದಿನ ಸಂಜೆ 6.30 ಗಂಟೆಗೆ ಆರಂಭವಾಗಲಿದೆ. ನಾಟಕ ಪ್ರದರ್ಶನಗಳು ಇಂತಿವೆ.
ದಿನಾಂಕ:21-09-2024, ಶನಿವಾರದಂದು.
ನಾಟಕ: ” ಸರಸ ವಿರಸ ಸಮರಸ “
ನಿರ್ದೇಶನ: ಜೋಸೆಫ್ ಜಾನ್
ತಂಡ: ಸುಸ್ಥಿರ ಪ್ರತಿಷ್ಠಾನ (ರಿ), ಬೆಂಗಳೂರು
ದಿನಾಂಕ:22-09-2024, ಭಾನುವಾರ
ನಾಟಕ: ‘ನಾ ರಾಜಗುರು’
ರಂಗರೂಪ, ಪರಿಕಲ್ಪನೆ: ಮಹಾದೇವ ಹಡಪದ
ಅಭಿನಯ:ವಿಶ್ವರಾಜ ರಾಜಗುರು
ತಂಡ: ಆಟಮಾಟ (ರಿ) ಸಾಂಸ್ಕೃತಿಕ ಫಥ, ಧಾರವಾಡ
ದಿನಾಂಕ:23-09-2024, ಸೋಮವಾರ
ನಾಟಕ: ’ಬಹುಮುಖಿ’
ರಚನೆ:ವಿವೇಕ ಶಾನಭಾಗ
ನಿರ್ದೇಶನ: ಗಣಪತಿ ಬಿ ಹಿತ್ಲಕೈ
ತಂಡ: ಒಡ್ಡೋಲಗ ರಂಗಪರ್ಯಟನ, ಹಿತ್ಲಕೈ
ಟಿಕೆಟ್ ದರ ಒಬ್ಬರಿಗೆ ರೂ.30/-.
ನಾಟಕ ವೀಕ್ಷಿಸಲು ನೀವೂ ಬನ್ನಿ…. ನಿಮ್ಮವರನ್ನೂ ಕರೆತನ್ನಿ… ಎಲ್ಲರಿಗೂ ಆತ್ಮೀಯ ಸ್ವಾಗತ…
- ರಂಗಾಯಣ, ಶಿವಮೊಗ್ಗ