ರೌಡಿಶೀಟರ್ ಗಳಾದ ರಮೇಶ್ (35 ) ಮತ್ತು ಚೋಟಾ ವಿನೋತ್ (32)
ಚೆನ್ನೈ: ಸೋಮವಾರ ತಡರಾತ್ರಿ ಚೆನ್ನೈನ ಗುಡುವಂಚೇರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿ ಶೀಟರ್ ಗಳನ್ನು ಹೊಡೆದುರುಳಿಸಿದ್ದಾರೆ. ಪೋಲಿಸರ ಗುಂಡೆಟಿಗೆ ಉಸಿರಿ ಚಲ್ಲಿದ್ದಾರೆ ಇಬ್ಬರು ನಟೋರಿಯಸ್ ರೌಡಿಗಳು ..!
ಮುಂಜಾನೆ ಮೂರು ಗಂಟೆಯ ಸುಮಾರಿಗೆ ಇನ್ಸಪೆಕ್ಟರ್ ಮುರುಗೇಶನ್ ಅವರು ತಮ್ಮ ಪೊಲೀಸರ ಟೀಮ್ ನೊಂದಿಗೆ ವಾಹನಗಳ ತಪಾಸಣೆಗೆ ಇಳಿದಿದ್ದರು. ಅದೆ ಸಮಯದಲ್ಲಿ ವೇಗವಾಗಿ ಬಂದ ಕಪ್ಪು ಬಣ್ಣದ ಸ್ಕೋಡಾ ಕಾರೊಂದು ಸಬ್ ಇನ್ಸಪೆಕ್ಟರ್ ಶಿವಗುರುನಾಥನ್ ಅವರ ಮೇಲೆ ಹರಿಯಲು ಮುಂದಾಗಿತ್ತು. ತಕ್ಷಣವೇ ನನ್ನ ಮೇಲೆ ಕಾರೊಂದು ವೇಗವಾಗಿ ಬರುವುದನ್ನು ಗಮನಿಸಿದ ಶಿವಗುರುನಾಥನ್ ಹೇಗೋ ಅಪಾಯದ ಅಂಚಿನಿಂದ ತಪ್ಪಿಸಿಕೊಂಡಾಗ ಅ ಸ್ಕೋಡಾ ಕಾರು ನೇರವಾಗಿ ಹೋಗಿ ಪೊಲೀಸ್ ಜೀಪಿಗೆ ಗುದ್ದಿದೆ.ತಕ್ಷಣವೇ
ಕಾರಿನಲ್ಲಿದ್ದ ನಾಲ್ಕು ಮಂದಿ ರೌಡಿಗಳು ಕೆಳಕ್ಕಿಳಿದು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ ಈ ವೇಳೆ ಶಿವಗುರುನಾಥನ್ ಅವರ ಎಡಗೈಗೆ ಗಾಯವಾಗಿದೆ. ಇನ್ನೇನು ದುಷ್ಕರ್ಮಿಗಳು ಅವರ ತಲೆಗೆ ಹೊಡೆಯಲು ಮುಂದಾದಾಗ ಸಬ್ ಇನ್ಸಪೆಕ್ಟರ್ ಕೆಳಕ್ಕೆ ಬಿದ್ದಿದ್ದಾರೆ.
ಈ ವೇಳೆ ಸ್ವಯಂ ರಕ್ಷಣೆಗಾಗಿ ಮುರುಗೇಶನ್ ಮತ್ತು ಶಿವಗುರುನಾಥನ್ ರಿವಾಲ್ವರ್ ತೆಗೆದು ಶೂಟ್ ಮಾಡಿದ್ದಾರೆ. ಇವರುಗಳ ರಿವಲ್ವಾರ್ ನಿಂದ ಹಾರಿದ ಬುಲೆಟ್ ಗಳು ಗುರಿ ತಪ್ಪದೆ ರೌಡಿಶೀಟರ್ ಗಳಾದ ರಮೇಶ್ (35 ವ) ಮತ್ತು ಚೋಟಾ ವಿನೋತ್ (32) ಅವರುಗಳಿ ಬಿದ್ದಿದೆ ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರನ್ನೂ ತಕ್ಷಣವೇ ಸ್ಥಳಿಯ ಚೆಂಗಲಟಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ರೌಡಿಶೀಟರ್ ಚೋಟಾ ವಿನೋತ್ ನನ್ನು A+ ( ನಟೋರಿಯಸ್ ) ಮಾದರಿಯ ಆರೋಪಿ ಎಂದು ಗುರುತಿಸಲಾಗಿದ್ದು, ಈತನ ಮೇಲೆ ಸರಿ ಸುಮಾರು ಐವತ್ತಕ್ಕೂ ಹೆಚ್ಚು ಪ್ರಕರಣಗಳು ದಾಳಲಾಗಿದ್ದು ಹದಿನಾರು ಕೊಲೆ, ಹತ್ತು ಕೊಲೆ ಯತ್ನ, ಹತ್ತು ದರೋಡೆ ಮತ್ತು ಹದಿನೈದು ಗೂಂಡಾಗಿರಿಗೆ ಸಂಭಂಧಿಸಿದ ಪ್ರಕರಣಗಳು ಸೇರಿವೆ.
ಮತ್ತೋರ್ವ ರೌಡಿಶೀಟರ್ ರಮೇಶ್ ಮೇಲೆ ಮೂವತ್ತು ಪ್ರಕರಣಗಳಿದ್ದು, ಅದರಲ್ಲಿ ಆರು ಕೊಲೆ, ಏಳು ಕೊಲೆಯತ್ನ ಮತ್ತು ಎಂಟು ಗೂಂಡಾಗಿರಿ ಪ್ರಕರಣಗಳು ದಾಖಲಾಗಿವೆಯಂತೆ. ಇವರ ಜೋತೆಗಿದ್ದ ಇನ್ನಿಬ್ಬರು ರೌಡಿಗಳು
ಸ್ಥಳದಿಂದ ಪರಾರಿಯಾಗಿದ್ದಾರೆ. ಇವರಿಬ್ಬರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ
ಇಬ್ಬರು ನಟೋರಿಯಸ್ ರೌಡಿಗಳ ಎನ್ ಕೌಂಟರ್ ಮಾಡಿ ಮುಗಿಸಿದ ಪೋಲಿಸರ ಕಾರ್ಯಚರಣೆಯನ್ನು ಮೆಚ್ಚಿ ತಮಿಳು ನಾಡಿನಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ
ಸುಧೀರ್ ವಿಧಾತ, ಶಿವಮೊಗ್ಗ