ರಾಜಧಾನಿಯಲ್ಲಿ ಹನಿಟ್ರ್ಯಾಪ್ ಮೂವರ ಬಂಧನ.!
ಬೆಂಗಳೂರು: ಒಂದಿಬ್ಬರು ಯುವತಿಯರು ಟೆಲಿಗ್ರಾಮ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ತಂಡದಲ್ಲಿದ್ದ ಮೂವರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರು
‘ಅಬ್ದುಲ್ ಖಾದರ್, ಯಾಸಿನ್ ಹಾಗೂ ಶರಣ ಪ್ರಕಾಶ್ ಎಂದು ತಿಳಿದುಬಂದಿದೆ. ಇವರ ಜೊತೆ ಕೃತ್ಯದಲ್ಲಿ ಯುವಕರನ್ನು ಉದ್ಯಮಿಗಳನ್ನು ತಮ್ಮ ಖೆಡ್ಡಕ್ಕೆ ಕೆಡವಿಕೊಳ್ಳುತ್ತಿದ್ದ ಪ್ರಮುಖ ಇಬ್ಬರು ಯುವತಿಯರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಆ್ಯಪ್ ಮೂಲಕವೇ ಯುವಕರ ಉದ್ಯಮಿಗಳ ಸಂಪರ್ಕ
ಸಾಧಿಸುತ್ತಿದ್ದ ಇಬ್ಬರು ಯುವತಿಯರು, ಟೆಲಿ ಗ್ರಹಾಂ ಪದದ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ, ಸಲುಗೆಯಿಂದ ಮಾತನಾಡಿಸಿ ತಮ್ಮ ಟ್ರ್ಯಾಕ್ ಗೆ ತರುತ್ತಿದ್ದ ಯುವತಿಯರು ದಿನ ಕಳೆದಂತೆ ಯುವಕರು, ಯುವತಿಯರನ್ನು ಬಿಟ್ಟಿರದ ಪರಿಸ್ಥಿತಿಗೆ ಹೋಗಿದ್ದರಂತೆ ಎಂದು ಪೊಲೀಸರು ತಿಳಿಸಿದರು.
ಸರಿಯಾದ ಸಮಯ ನೋಡಿಕೊಂಡು ನಂಬಿದ ಯುವಕರಿಗೆ ಮನೆಯಲ್ಲಿ ಯಾರು ಇಲ್ಲ. ಬಾ’ ಎಂದು ಹೇಳುತ್ತಿದ್ದ ಯುವತಿಯರು, ಯುವಕರಿಗೆ ಲೈಂಗಿಕ ಆಸೆ ತೋರಿಸಿ ಪ್ರಚೋದಿಸುತ್ತಿದ್ದರಂತೆ ನಂತರ, ಜೆ.ಪಿ. ನಗರ ಬಳಿಯ ವಿನಾಯಕ್ ನಗರದಲ್ಲಿರುವ ತಮ್ಮ ಮನೆಗೆ ಯುವಕರನ್ನು ಕರೆಸಿಕೊಳ್ಳುತ್ತಿದ್ದರು ಎನ್ನುವುದು ಪೋಲಿಸರ ತನಿಖೆಯಿಂದ ಗೊತ್ತಾಗಿದೆ.
ದಾಳಿ ಮಾಡಿ, ಸುಲಿಗೆ: ‘ಯುವಕರು ಎಲ್ಲಾ ತಯಾರಿ ಮಾಡಿಕೊಂಡು ಯುವತಿಯರ ಮನೆಗೆ ಹೋಗುತ್ತಿದ್ದಂತೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದ ಯುವತಿಯರು, ಮೊದಲೇ ಸಕಲ ಸಿದ್ಧತೆ ಮಾಡಿಕೊಂಡಿರುವಂತಹ ಕೊಠಡಿಗೆ ಯುವಕರನ್ನು ಕರೆದೊಯ್ಯುತ್ತಿದ್ದರಂತೆ.!
ಯುವಕರನ್ನು ಬೆತ್ತಲೆಗೊಳಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಯುವತಿಯ ಕಡೆಯ ಆರೋಪಿಗಳು, ಮನೆಯೊಳಗೆ ನುಗ್ಗುತ್ತಿದ್ದರು. ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದರು’ ಯುವಕರಿಗೆ ದಮ್ಕಿ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
‘ಯುವಕರ ಮೊಬೈಲ್ ಕಸಿದುಕೊಳ್ಳುತ್ತಿದ್ದ ಆರೋಪಿಗಳು, ಪೋಷಕರು ಹಾಗೂ ಸ್ನೇಹಿತರ ಸಂಪರ್ಕ ಸಂಖ್ಯೆಗಳನ್ನು ತಿಳಿದುಕೊಳ್ಳುತ್ತಿದ್ದರು. ‘ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದೆಯಾ? ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ. ಅಕ್ರಮ ಸಂಬಂಧ ವಿಷಯವನ್ನು ಪೋಷಕರು ಹಾಗೂ ಸ್ನೇಹಿತರಿಗೆ ತಿಳಿಸುತ್ತೇವೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ’ ಎಂಬುದಾಗಿ ಬೆದರಿಸುತ್ತಿದ್ದರು.ಯುವಕರನ್ನು
‘ಮನೆಯಿಂದ ಬಿಟ್ಟು ಕಳುಹಿಸಬೇಕಾದರೆ ಹಣ ನೀಡುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು. ಮರ್ಯಾದೆಗೆ ಹೆದರಿ ಯುವಕರು, ಹಣ ನೀಡಿ ಹೋಗುತ್ತಿದ್ದರು’ ಎಂದು ಹೇಳಿದರು.
‘ತಿಂಗಳ ಹಿಂದೆಯಷ್ಟೇ ಆರೋಪಿಗಳ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ ವೈಟ್‌ಫೀಲ್ಡ್ ನಿವಾಸಿಯೊಬ್ಬರು ₹ 50 ಸಾವಿರ ನೀಡಿದ್ದರಂತೆ. ಇದಾದ ನಂತರವೂ ಆರೋಪಿಗಳು ಹಣಕ್ಕಾಗಿ ಪೀಡಿಸುತ್ತಿದ್ದರು. ನೊಂದ ಯುವಕ, ಠಾಣೆಗೆ ಹೋಗಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಹಲವು ತಿಂಗಳಿನಿಂದ ಈ ಕೃತ್ಯವನ್ನು ಎಸಗುತ್ತಿದ್ದು ಹಲವು ಯುವಕರನ್ನು ಖೆಡ್ಡಕ್ಕೆ ಕೆಡವಿ ಕೊಂಡು ಬೆದರಿಸಿ ಇದುವರೆಗೂ ಸುಮಾರು 30 ಲಕ್ಷ ರೂಪಾಯಿ ಸುಲಿಗೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಬಂಧಿತರಿಂದ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿರುವ ಪೋಲಿಸರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು ತಲೆ ಕರೆಸಿಕೊಂಡಿರುವ ಇಬ್ಬರು ಯುವತಿಯರಿಗಾಗಿ ಪೋಲಿಸರು ತೀವ್ರ ಶೋಧಕಾರ್ಯ ಮುಂದುವರೆಸಿದ್ದಾರೆ.
ಇನ್ನಷ್ಟು ಮಾಹಿತಿಯು ಯುವತಿಯರ ಬಂಧನದ ನಂತರವೆ ಬೆಳಕಿಗೆ ಬರಲಿದೆ
ಸುಧೀರ್ ವಿಧಾತ, ಶಿವಮೊಗ್ಗ