ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್’ಗೆ ಬೆಚ್ಚಿಬಿದ್ದ ವಿದೇಶಿಗ.!
ಅಶ್ವಸೂರ್ಯ/ಶಿವಮೊಗ್ಗ: ಭಿಕ್ಷೆ ಬೇಡುವ ಬಾಲಕಿಯೊಬ್ಬಳು ಇಂಗ್ಲಿಷ್ ಮಾತನಾಡುವ ರೀತಿ ನೋಡಿ ವಿದೇಶಿಗರೊಬ್ಬರು ಫುಲ್ ಖುಷ್ ಆಗಿದ್ದಾರೆ.
ವಿದೇಶಿ ಪ್ರಜೆಯ ಬಳಿಗೆಹೋಗಿ ಭಿಕ್ಷೆ ಬೇಡುವ ಬಾಲಕಿ ಯೊಬ್ಬಳು ಭೀಕ್ಷೆಯನ್ನು ಇಂಗ್ಲಿಷ್ ನಲ್ಲಿಯೆ ಕೇಳಿ ಮಾತನಾಡಿಸದ್ದಾಳೆ. ಈಗ ಈ ವಿಡಿಯೋವೊಂದು ಬಾರಿ ವೈರಲ್ ಆಗಿದೆ. ಈ ವಿಡಿಯೋವನ್ನು @azizkavish ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.! ಇದರಲ್ಲಿ ನಾನು ರಾಜಸ್ತಾನದವಳು. ಬಡತನದ ಕಾರಣದಿಂದ ನನಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ನನಗೂ ಶಾಲೆಗೆ ಹೋಗಬೇಕೆನ್ನುವ ಆಸೆ ಇದೆ ಆದರೆ ಮನೆಯ ಬಡತನ ನನ್ನನ್ನೂ ಶಾಲೆಯಿಂದ ದೂರ ಸರಿಯುವಂತೆ ಮಾಡಿದೆ.ಯಾರಾದರೂ ಸಹಾಯ ಮಾಡಿದರೆ ನಾನು ಮತ್ತೆ ಶಾಲೆಗೆ ಹೋಗುವುದಾಗಿ ತನ್ನ ಮಬದ ಇಚ್ಛೆಯನ್ನು ವಿದೇಶಿ ಪ್ರಜೆಯ ಬಳಿ ಹೇಳಿಕೊಂಡಿದ್ದಾಳೆ ಬಾಲಕಿ. ಈ ಎಲ್ಲಾ ಮಾತುಗಳನ್ನು ಅವರ ಮುಂದೆ ಇಂಗ್ಲಿಷ್ ನಲ್ಲಿಯೇ ಮಾತನಾಡಿ ಹೇಳಿಕೊಂಡಿದ್ದಾಳೆ. ಹುಡುಗಿಯು ಇಂಗ್ಲಿಷ್ ಅನ್ನು ಸರಾಗವಾಗಿ ಮಾತನಾಡುವುದನ್ನು ನೋಡಿ ಶಾಕ್ ಆಗಿರುವ ವಿದೇಶಿ ಪ್ರಜೇ, ಯಾಕೆ ನೀನು ಭಿಕ್ಷೆ ಬೇಡುತ್ತಿದ್ದೀಯಾ? ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿ. ನಿನಗೆ ಕೆಲಸ ಸಿಗುತ್ತದೆ ಎಂದಿದ್ದಾನೆ. ಅದಕ್ಕೆ ಬಾಲಕಿಯು, ‘ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ಯಾರು ನನಗೆ ಕೆಲಸ ಕೊಡುವುದಿಲ್ಲ. ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನ ಕುಟುಂಬವನ್ನು ಸಾಕಲು ನಾನು ಶಾಲೆಯನ್ನು ತೋರೆದು ಭಿಕ್ಷಾಟನೆ ಮಾಡಬೇಕಾಗಿದೆ ‘ ಎಂದು ಹೇಳಿದ್ದಾಳೆ.ಆತ ಕೊನೆಗೆ ನಾನು ನಿನ್ನನ್ನು ಶಾಲೆಗೆ ಕಳುಹಿಸಿದರೆ ನೀನು ಹೋಗುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಹುಡುಗಿ ಹೌದು ಖಂಡಿತಾ ಹೋಗುತ್ತೇನೆ ಚನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ನನ್ನ ಕುಟುಂಬದವರನ್ನು ಸಾಕುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿದ ವಿದೇಶಿ ಪ್ರಜೆ ಫೌಂಡೇಶನ್ ಮೂಲಕ ಅವಳಿಗೆ ಸಹಾಯ ಮಾಡುವುದಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ಬಡಪಾಯಿ ಅಮಾಯಕ ಹೆಣ್ಣನ್ನು ನೋಡಿದ ಆಕೆಯ ಮಾತನ್ನು ಅಲಿಸಿದ ವಿದೇಶಿ ಪ್ರಜೆಗಿರುವ ಸಹಾಯ ಮನೋಭಾವ ನಮ್ಮ ಸ್ವದೇಶಿಗರಿಗೆ ಇಲ್ಲದೆ ಹೋಯಿತಾ ಎನ್ನುವುದು ಯಕ್ಷ ಪ್ರಶ್ನೇಯಾಗಿ ಉಳಿದಿದೆ…