ತೀರ್ಥಹಳ್ಳಿಯ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ “24” ರಂದು ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ

ತೀರ್ಥಹಳ್ಳಿಯ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ “24” ರಂದು ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ

ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿಯ ಹೆಮ್ಮೆಯ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ ಮತ್ತು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪುರಲೆ, ಶಿವಮೊಗ್ಗ ಇವರ ಸಹಯೋಗದಲ್ಲಿ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ 8ನೇ ವರ್ಷದ ಸರ್ವಸದಸ್ಯರ ಸಭೆಯ ಅಂಗವಾಗಿ.ತೀರ್ಥಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ”ವನ್ನು. ದಿನಾಂಕ : 24-09-2024 ಮಂಗಳವಾರದಂದು ಸಮಯ : ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆ ವರೆಗೆ ಮಾಧವ ಮಂಗಲ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ತುಂಗಾ ತೀರ, ತೀರ್ಥಹಳ್ಳಿ ನುರಿತ ಅನುಭವೀ ವೈದ್ಯರ ತಂಡದಿಂದ.ಮಧುಮೇಹ ವಿಭಾಗ, ಶ್ವಾಸಕೋಶ ವಿಭಾಗ, ಹೃದಯ ರೋಗ ವಿಭಾಗ ಮತ್ತು ಮೂತ್ರಕೋಶ (ಕಿಡ್ನಿ) , ಕೀಲು ಮತ್ತು ಮೂಳೆ ವಿಭಾಗ ಹಾಗೂ ಕಿವಿ,ಮೂಗು, ಗಂಟಲು ವಿಭಾಗ ಮತ್ತು ಕಣ್ಣಿನ ವಿಭಾಗ, ಚರ್ಮರೋಗ ವಿಭಾಗ, ನರರೋಗ ವಿಭಾಗಗಳಲ್ಲಿ ನುರಿತ ವೈದ್ಯರುಗಳಿಂದ ತಪಾಸಣೆಯ ಜೋತೆಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುವುದು ಜೊತೆಗೆ ದಂತ ಚಿಕಿತ್ಸಾ ವಿಭಾಗ ಮತ್ತು ಪ್ರಸೂತಿ, ಸ್ತ್ರೀ ರೋಗ ವಿಭಾಗ ಹಾಗೂ ಮಕ್ಕಳ ವಿಭಾಗದಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆಯ ಜೊತೆಗೆ ಖಾಯಿಲೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ‌ ನೀಡಲಿದ್ದು ಈ ಎಲ್ಲಾ ಪ್ರಯೋಜನವನ್ನು ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರು ಮತ್ತು ಅವರ ಕುಟುಂಬದವರ ಜೋತೆಗೆ ತೀರ್ಥಹಳ್ಳಿಯ ನಾಗರಿಕರು ಉಚಿತವಾಗಿ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ಈ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ, ಶ್ವಾಸಕೋಶ ಸ್ಕಾನಿಂಗ್ (ಉಸಿರಾಟ) ಹೃದಯ ಪರೀಕ್ಷೆ (ಐಕೋ),ಬಿ.ಪಿ, ಶುಗರ್, ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಕೂಡ ಉಚಿತವಾಗಿ ಮಾಡಲಾಗುವುದು.

“ರಕ್ತದಾನ ಮಹಾದಾನ”

ಇದೆ ಶಿಬಿರದಲ್ಲಿ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ರಕ್ತದಾನ ಮಾಡುವ ದಾನಿಗಳು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ರಕ್ತದಾನ ಮಾಡುವವರಿಗೆ ಸುಬ್ಬಯ್ಯ ಹೆಲ್ತ್ ಕಾರ್ಡ್ (subbaiah health card),ಅನ್ನು ಉಚಿತವಾಗಿ ಮಾಡಿಸಿಕೊಡಲಾಗುವುದು.

ಈ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ತೀರ್ಥಹಳ್ಳಿಯ ಹೆಮ್ಮೆಯ ಸಂಸ್ಥೆಯಾದ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಆಯೋಜಿಸಲಾಗಿದ್ದು ಈ ಸಂಘದ ಸರ್ವ ಸದಸ್ಯರುಗಳು ಹಾಗೂ ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕೆಂದು ಸಂಘದ ಪರವಾಗಿ ಅಧ್ಯಕ್ಷರಾದ ಬಿ ಆರ್ ರಾಘವೇಂದ್ರ ಶೆಟ್ಟಿ ಅವರು ವಿನಂತಿಸಿಕೊಂಡಿದ್ದಾರೆ.ಈ ಶಿಬಿರದಲ್ಲಿ ಹೃದಯ ತಪಾಸಣಾ ವಿಭಾಗಕ್ಕೆ ಮಾತ್ರ ಪೋನ್ ಮುಖಾಂತರ ಹೆಸರು ನೊಂದಾಯಿಸಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗೆ ಮತ್ತು ನೋಂದಾಣಿಗಾಗಿ ಸಂಪರ್ಕಿಸಿರಿ:
CALL- 9480282858, 9113231844, 9741626317, 9480498140,

ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ(ರಿ.) ಭಗತ್ ಕಾಂಪ್ಲೆಕ್ಸ್, ಛತ್ರಕೇರಿ, ತೀರ್ಥಹಳ್ಳಿ

Leave a Reply

Your email address will not be published. Required fields are marked *

Optimized by Optimole
error: Content is protected !!