ಮೂರು ದಿನಗಳ ಕಾಲ ಅಭಿಮಾನಿ ಬಳಗದಿಂದ ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಅವರ ಅದ್ದೂರಿ ಹುಟ್ಟು ಹಬ್ಬ ಆಚರಣೆ.

ಮೂರು ದಿನಗಳ ಕಾಲ ಅಭಿಮಾನಿ ಬಳಗದಿಂದ ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಅವರ ಅದ್ದೂರಿ ಹುಟ್ಟು ಹಬ್ಬ ಆಚರಣೆ.

ಅಶ್ವಸೂರ್ಯ/ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಹೆಚ್.ಎಸ್. ಸುಂದರೇಶ್ ಸಾಮಾನ್ಯ ನಾಯಕರಲ್ಲ, ಕಾಂಗ್ರೆಸ್‌ನ ಕಟ್ಟಾಳು, ತನ್ನ ವಿದ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ಪ ಕ್ಷದಲ್ಲೊಂದು ಕಾಲಿರಿಸಿಕೊಂಡು ಬಂದಂತವರು. ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಯುತ್ತಿದ್ದ ಹಾಗೆ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು, ಕಾಂಗ್ರೆಸ್‌ ಪಕ್ಷದ ಯುವ ನಾಯಕನಾಗಿ ಹೊರಹೊಮ್ಮಿದ ಸುಂದರೇಶ್ ಕಳೆದ ಮೂವತ್ತೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಹಲವು ಜವಾಬ್ದಾರಿಯನ್ನು ಹೊತ್ತು ಪಕ್ಷಕ್ಕಾಗಿ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದಿರುವ ಶಿವಮೊಗ್ಗ ಜಿಲ್ಲೆಯ ಜನಪ್ರಿಯ ನಾಯಕ. ಸುಂದರೇಶ್ ತೀರ್ಥಹಳ್ಳಿ ಮೂಲದ ಕೃಷಿಕರ ಕುಟುಂಬದಿಂದ ಬಂದಂತವರು.ತಂದೆ ಶಂಕರಪ್ಪಗೌಡರು. ಒಕ್ಕಲಿಗ ಜನಾಂಗದವರಾದ ಸುಂದರೇಶ್ ಶಿವಮೊಗ್ಗ ನಗರದ ಜವಹರ್‌ ಲಾಲ್ ನೆಹರೂ ತಾಂತ್ರಿಕ ವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.

ವಿದ್ಯಾರ್ಥಿ ಜೀವನದಲ್ಲೆ ಶೋಷಣೆಯ ವಿರುದ್ಧ ಧ್ವನಿ ಎತ್ತಿ
ಹೋರಾಡಿದಂತವರು. ವಿದ್ಯಾರ್ಥಿಗಳಿಗೆ ಸಿಗಬೇಕಾದ
ಸೌಲಭ್ಯಗಳ ವಿರುದ್ಧ ತನ್ನದೇ ಯುವ ಪಡೆಯನ್ನ
ಬೆನ್ನಿಗಿಟ್ಟುಕೊಂಡು ಆಡಳಿತ ಮಂಡಳಿಯ ವಿರುದ್ಧ ತೊಡೆತಟ್ಟಿನಿಂತು ನ್ಯಾಯ ದೊರಕಿಸಿಕೊಟ್ಟವರು. ಅಂದೇ ತಮ್ಮಲ್ಲಿ ಹೋರಾಟದ ಮನೋಭಾವ ಬೆಳಸಿಕೊಂಡು ಬಂದ ಸುಂದರೇಶ್, ಹಗಲಿರುಳು ಕಾಂಗ್ರೆಸ್‌ ಪಕ್ಷದ ಕಟ್ಟಳಾಗಿ ದುಡಿದು ಯುವ ನಾಯಕನಾಗಿ ಬೆಳೆದು ನಿಂತಿದ್ದಿದ್ದರು.
ವಿದ್ಯಾರ್ಥಿಗಳ ಪಾಲಿನ ನಾಯಕರಾಗಿ ವಿದ್ಯಾರ್ಥಿ ಸಂಘದ ಚುನಾವಣೆಗೂ ಸ್ಪರ್ಧಿಸಿ ಅಧ್ಯಕ್ಷಗಿರಿ ಅಲಂಕರಿಸಿದ್ದರು.

ಇವರ ನಾಯಕತ್ವದ ಗುಣ ಗಮನಿಸಿದ ಕಾಂಗ್ರೆಸ್ ಪಕ್ಷ ಕೈಬೀಸಿ ಕರೆದಿತ್ತು. ತಮ್ಮ ವಿಧ್ಯಾರ್ಥಿ ಜೀವನದಲ್ಲೆ ಸಕ್ರಿಯ
ರಾಜಕಾರಣಕ್ಕೂ ಹೆಜ್ಜೆಹಾಕಿದ ಸುಂದರೇಶ್ 1988ರಿಂದ 1993ರವರೆಗೆ ಎನ್‌ಎಸ್‌ಯುಐನ ಅಧ್ಯಕ್ಷರಾಗಿದ್ದರು.ಸಾಕಷ್ಟು ಹೋರಾಟ NSUI ಸಂಘಟನೆಯ ಕಾರ್ಯವೈಕರಿಯಿಂದ ವಿಧ್ಯಾರ್ಥಿನಾಯಕನಾಗಿ ಜನಪ್ರಿಯತೆ ಗಳಿಸಿದ ಸುಂದರೇಶ್ ಚತುರತೆಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷ 1993ರಲ್ಲಿ ಯುವ ಕಾಂಗ್ರೆಸ್‌ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಟ ಆಗುವುದರ ಬೆನ್ನಿಗೆ ಯುವಕರು ವಿದ್ಯಾರ್ಥಿಗಳು ಸುಂದರೇಶ್‌ ರವರ
ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಗ್ಗೆ ಹಾಕಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಹತ್ತು ವರ್ಷಗಳ ಕಾಲ ಸುಂದರೇಶ್‌ರವರನ್ನು ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಿತ್ತು. ದಿನದಿಂದ ದಿನಕ್ಕೆ ಸುಂದರೇಶ್ ನಾಯಕತ್ವದಲ್ಲಿ ಯುವ ಸಮೂಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. 1993ರಲ್ಲಿ ಶಿವಮೊಗ್ಗ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಆದೇಶ ಬರುತ್ತಿದ್ದಂತೆ ಸುಂದರೇಶ್ ಅವರನ್ನು ಕಾರ್ಪೋರೇಟರ್
ಆಗಿ ನಾಮನಿರ್ದೇಶನ ಮಾಡಿ ಸರ್ಕಾರ ನೇಮಕ ಮಾಡಿತ್ತು. ಕಾಂಗ್ರೆಸ್ ಪಕ್ಷದ ಜನಪ್ರಿಯ ಪ್ರಬಲ ನಾಯಕನಾಗಿ ಹೊರಹೊಮ್ಮಿದ ಸುಂದರೇಶ್‌ ಅವರು 1995ರಿಂದ 1997 ರವರೆಗೆ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮನವಾಗಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಇವರ ಪಕ್ಷದ ಕಾರ್ಯವೈಖರಿಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠರು ಇವರನ್ನು 2002ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕಮಾಡಿತ್ತು. ಸತತ ಐದು ವರ್ಷ ರಾಜ್ಯ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪಕ್ಷ ಸಂಘಟನೆಯ ಜೊತೆಗೆ ಯುವಕರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಸುಂದರೇಶ್ ದಿಟ್ಟ ಹೆಜ್ಜೆಯನ್ನೇ
ಇಟ್ಟಿದ್ದರು. ಆ ಹೊತ್ತಿಗಾಗಲೇ ಕಾಂಗ್ರೆಸ್‌ ಪಕ್ಷದ ದೆಹಲಿ ದೊರೆಗಳಿಗೂ ಸುಂದರೇಶ್‌ರವರ ಶಕ್ತಿ ಏನೆಂಬುದು ಮನವರಿಕೆಯಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ಸುಂದರೇಶ್ ಕಾಂಗ್ರೆಸ್‌ನ ಯುವ ನಾಯಕನಾಗಿ ಮುಂಚೂಣಿಯಲ್ಲಿದ್ದರು. ಸಾಕಷ್ಟುಬಾರಿ ಎಂಪಿ, ಎಂಎಲ್‌ಎ, ಮತ್ತು ಎಂಎಲ್‌ಸಿ ಚುನಾವಣೆಗಳಲ್ಲಿ ನಮ್ಮ ರಾಜ್ಯವಲ್ಲದೆ ಬೇರೆ ರಾಜ್ಯಕ್ಕೂ ಇವರನ್ನು ವಿಕ್ಷಕರನ್ನಾಗಿ ಪಕ್ಷ ನೇಮಿಸಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಹೀಗೆ ಹತ್ತು ಹಲವು ಹುದ್ದೆಗಳನ್ನ ಅಲಂಕರಿಸಿ ಸರಿಯಾದ ನ್ಯಾಯ ಒದಗಿಸಿ, ಪಕ್ಷ ಸಂಘಟಿಸುವಲ್ಲಿ, ಪಕ್ಷ ಬೆಳೆಸುವಲ್ಲಿ ಯಶಸ್ವಿಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಸುಂದರೇಶ್, ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯಾದ್ಯಂತ ಸಾವಿರಾರು ಯುವಕರನ್ನು ಬೆನ್ನಿಗಿಟ್ಟಿಕೊಂಡಿರುವ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಜೊತೆಯಲ್ಲೂ ಸುಂದರೇಶ್ ಗರಡಿಯಲ್ಲಿ ಪಳಗಿದ ಯುವಕರೆ ಇದ್ದಾರೆ. ಆ ಮಟ್ಟಕ್ಕೆ ಯುವಕರನ್ನು ಬೆಳೆಸಿದ ಕೀರ್ತಿ
ಸುಂದರೇಶ್‌ ಅವರಿಗೆ ಸಲ್ಲುತ್ತದೆ. ಎಲ್ಲೂ ಜಾತಿ
ರಾಜಕಾರಣ ಮಾಡದೆ ಕಾಂಗ್ರೆಸ್ ನನ್ನ ಉಸಿರು ಎಂದು ದೃಢ ಹೆಜ್ಜೆ ಹಾಕಿ ಹೊರಟ ಸುಂದರೇಶ್‌ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಅತಿ ಸೂಕ್ಷ್ಮ ಹುದ್ದೆ.! ರೈತರ ಪಾಲಿನ ಸಂಜಿವಿನಿಯಾಗಿರುವ ಕಾಡಾ ಅಧ್ಯಕ್ಷಗಿರಿಯನ್ನು 2016ರ ನವೆಂಬರ್ 7ರಂದು ನಿಡಿ ಗೌರವಿಸಿದ್ದರು. ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ತನಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಲು ಮುಂದಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿ ರೈತರ ಜಮೀನಿಗೆ ತೊಂದರೆಯಾಗದ
ರೀತಿಯಲ್ಲಿ ಎಲ್ಲಾ ರೈತರ ಜಮೀನಿಗೆ ಸರಿಯಾಗಿ ಮಳೆಬಾರದಿದ್ದರು ಭದ್ರಾ ಡ್ಯಾಮಿನಲ್ಲಿದ್ದ ನೀರನ್ನೆ ಜಾಣ್ಮೆಯಿಂದ ಬಳಸಿಕೊಂಡು ರೈತರ ಜಮೀನಿಗೆ ನೀರನ್ನು
ಹರಿಸಿ ಅವರ ಪ್ರೀತಿ ಪಾತ್ರರಾಗಿದ್ದರು. ಇವರ ಅಧಿಕಾರ ಅವಧಿಯಲ್ಲಿ ನೀರಿಗಾಗಿ ಎಲ್ಲೂ ಗಲಾಟೆ, ಧರಣಿಗಳು ನಡೆಯದಂತೆ ಎಲ್ಲರನ್ನು ಸಂತೈಸಿಕೊಂಡು ಹೋಗಿದ್ದರು‌ ಸುಂದರೇಶ್.ಅ ನಂತರದಲ್ಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯಲ್ಲಿ ನರಸತ್ತು ಮಲಗಿತ್ತು. ಬಿಜೆಪಿಯ ಭದ್ರ ಕೋಟೆಯಾಗಿತ್ತು. ಅ ಸಂಧರ್ಭದಲ್ಲಿ 2019 ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ಸುಂದರೇಶ್ ಅವರನ್ನು ಕಾಂಗ್ರೆಸ್ ವರಿಷ್ಠರು ನೇಮಕ ಮಾಡಿದ್ದರು. ಐದು ವರ್ಷಗಳ ಕಾಲ ತಮ್ಮ ಹುದ್ದೆಗೆ ನ್ಯಾಯ ಒದಗಿಸಿದ ಸುಂದರೇಶ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ. ಕಾಂಗ್ರೆಸ್ ಪಕ್ಷವನ್ನು ತೊರೆದವರನ್ನು ಮತ್ತೆ ಕರೆದುಕೊಂಡು ಬಂದು ಜಿಲ್ಲೆಯಲ್ಲಿ ಪಕ್ಷವನ್ನು ಬಲ ಗೋಳಿಸುವಲ್ಲಿ ಯಶಸ್ವಿಯಾಗಿದ್ದರು.ನಿತ್ಯ ಕಾಂಗ್ರೆಸ್ ಕಛೇರಿಯಲ್ಲಿ ಹಬ್ಬದ ವಾತಾವರಣವಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂರು ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬಂದಿದ್ದರು ಸರಯಾಗಿ ಟಿಕೆಟ್ ನೀಡಿದ್ದೆ ಆಗಿದಿದ್ದರೆ ಇನ್ನೂ ಎರಡು ಸ್ಥಾನ ಕಾಂಗ್ರೆಸ್ ಪಾಲಿಗೆ ದಕ್ಕುತಿತ್ತು. ಹೆಚ್ ಎಸ್ ಸುಂದರೇಶ್ ಎಂದು ಧಣಿಯದೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಇವರನ್ನು ಕಾಂಗ್ರೆಸ್ ಸರ್ಕಾರ ಸೂಡಾ ಅಧ್ಯಕ್ಷರನ್ನಾಗಿ ನೇಮಿಸಿದೆ.ಹಾಲಿ ಸೂಡಾ ಅಧ್ಯಕ್ಷರಾಗಿರುವ ಸುಂದರೇಶ್ ಅಧಿಕಾರ ಅಲಂಕರಿಸುತ್ತಿದ್ದ ಹಾಗೆ ಸಾಕಷ್ಟು ಬದಲಾವಣೆಯೊಂದಿಗೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಮುಂದಾಗಿದ್ದಾರೆ. ಕಳೆದ 35 ವರ್ಷಗಳಿಂದಲೂ ರಾತ್ರಿ ಹಗಲೆನ್ನದೆ ಪಕ್ಷಕ್ಕಾಗಿ ಪಕ್ಷದ ಹಿತಕ್ಕಾಗಿ ದುಡಿಯುತ್ತಿರುವ ಸುಂದರೇಶ್ ಅವರ ಜನುಮ ದಿನದ ಆಚರಣೆಯನ್ನು ಅವರ ಅಭಿಮಾನಿಗಳು ಈ ಬಾರಿ ಅದ್ದೂರಿಯಾಗಿ ನೆರವೇರಿಸಲು ಮುಂದಾಗಿದ್ದಾರೆ. ಸೆಪ್ಟೆಂಬರ್ 17 ರಿಂದ ಮೂರು ದಿನಗಳ ಕಾಲ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದವರು ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ನಲ್ಲೂ ಹುಟ್ಟು ಹಬ್ಬದ ಆಚರಣೆಯನ್ನು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದಾರೆ.

ಹುಟ್ಟು ಹಬ್ಬದ ಕಾರ್ಯಕ್ರಮದ ಸ್ಥಳ ಮತ್ತು ಸಮಯ

ಸುಂದರೇಶ್ ಅಭಿಮಾನಿ ಬಳಗದ ಕಾರ್ಯಕ್ರಮದಂತೆ ಅನಾಥಾಶ್ರಮದ ಮಕ್ಕಳಿಗೆ ಅನ್ನದಾನದ ಜೋತೆಗೆ ಬೆಡ್ ಶೀಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 17-09-2024ರ ಮಂಗಳವಾರ ಬೆಳಗ್ಗೆ ದ್ರೌಪದಮ್ಮ ದೇವಸ್ಥಾನ ಮತ್ತು ಜುವೇಲ್ ರಾಕ್ ಹೊಟೇಲ್ ಹತ್ತಿರದ “ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಹೆಚ್ ಎಸ್ ಸುಂದರೇಶ್ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ನಂತರ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ಅಭಿಮಾನಿ ಬಳಗದಿಂದ ಬೃಹತ್ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ನಂತರ ಅಲ್ಲಿಂದ ಹಿಂದೂ ಮಹಾಸಭಾ ಗಣತಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಗಾಂಧಿಬಜಾರಿನ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

18-09-2024 ರಂದು ಬುಧವಾರ ಬೆಳಿಗ್ಗೆ 11ಗಂಟೆಗೆ ಆಶಾ ಕಿರಣ , ವಿಧ್ಯಾನಗರ, 12 ಗಂಟೆಗೆ ಶ್ರೀ ಶಾರದದೇವಿ ಅಂದರ ವಿಕಾಸ ಕೇಂದ್ರ, 1ಗಂಟೆಗೆ ಜೀವನ ಸಂಜೆ ವೃದ್ಧಾಶ್ರಮ ಗೋಪಾಳ, ಸಂಜೆ 4 ಗಂಟೆಗೆ ತಾಯಿಮನೆ, ಸಾಗರ ರಸ್ತೆ , 5 ಗಂಟೆಗೆ ಗುಡ್ ಲಕ್ ಅರೈಕೆ ಕೇಂದ್ರ, ಸಂಜೆ 6 ಗಂಟೆಗೆ ಹ್ಯಾಪಿ ಹೋಮ್ ಮಿಷನ್ ಕಾಂಪೌಂಡ್, ಅಭಿಮಾನಿಗಳ ಬಳಗದಿಂದ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.

ಇನ್ನೂ ಗುರುವಾರ 19-09-2024 ರಂದು ಬೆಳಗ್ಗೆ 10:30ಕ್ಕೆ ಮೆಗನ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ,11ಗಂಟೆಗೆ ಗೋಪಾಳ KHB ಕಾಲೋನಿ ರಂಗನಾಥ ಸ್ವಾಮಿ ದೇವಸ್ಥಾನ, 12:30 ಕ್ಕೆ ಗೋಪಾಲ ಗೌಡ ಬಡಾವಣೆ, ಸಂಜೆ 4 ಗಂಟೆಗೆ ಸೀಗೆ ಹಟ್ಟಿ, 4:30ಕ್ಕೆ ಆಜಾದ್ ನಗರ, 5 ಗಂಟೆಗೆ ಮದರಿ ಪಾಳ್ಯ, 5:30 ಕ್ಕೆ ತುಂಗಾನಗರ, ರಾತ್ರಿ 7 ಗಂಟೆಗೆ ಬೊಮ್ಮನಕಟ್ಟೆ, 7:30 ನವುಲೆ, 8 ಗಂಟೆಗೆ ಸಂತೆ ಮೈದಾನ ಮಿಳಘಟ್ಟ ,8:30 ಕ್ಕೆ ಹೊಸಮನೆ ಬಡಾವಣೆ ಹಾಗೂ ರಾತ್ರಿ 9 ಗಂಟೆಗೆ ಜೆ.ಪಿ ನಗರ ಏರಿಯಾಗಳಲ್ಲಿ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದವರಿಂದ ಅದ್ದೂರಿಯಾಗಿ ಹಾಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರು ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿರುವ ಹೆಚ್ ಎಸ್ ಸುಂದರೇಶ್ ಅವರ ಹುಟ್ಟು ಹಬ್ಬವನ್ನು ಅಚರಿಸಲಾಗುತ್ತಿದ್ದು ಅವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅವರ ಸ್ನೇಹಿತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಒಂದು ಕಾರ್ಯವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಸುಂದರೇಶ್ ಅಭಿಮಾನಿ ಬಳಗದವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!