ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಮಗುವನ್ನು ನೆನೆದು ನಿನ್ನನ್ನು ಜೀವಂತವಾಗಿ ಉಳಿಸಿಕೊಳ್ಳಲಾಗದ ನಮ್ಮನ್ನು ” ಕ್ಷಮಿಸಿ ಬೀಡು ಮಗಳೆ ” ಎಂದು ಕ್ಷಮೆಯಾಚಿಸಿದ ಕೇರಳ ಪೋಲಿಸರು….
ಕೇರಳ : ಐದು ವರ್ಷ ಪ್ರಾಯದ ಪುಟ್ಟ ಬಾಲಕಿಯನ್ನು ಕಾಮಾಂದನೊಬ್ಬ ಅತ್ಯಾಚಾರಗೈದು ಕೊಲೆ ಮಾಡಿ ಕಸದ ರಾಶಿಗೆ ಬಿಸಾಕಿದ ಪ್ರಕರಣ ಸಂಪೂರ್ಣ ರಾಷ್ಟ್ರವನ್ನೆ ಬೆಚ್ಚಿ ಬೀಳುವಂತೆ ಮಾಡಿದೆ. ಈ ಅಮಾನುಷ ಘಟನೆ ನಡೆದಿದ್ದು ಕೇರಳ ರಾಜ್ಯದಲ್ಲಿ. ಈ ಅಮಾನುಷ ಕೃತ್ಯಕ್ಕೆ ಬಲಿಯಾದ ಐದು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಪೊಲೀಸರು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಬಿಹಾರ ಮೂಲದ ದಂಪತಿಯ ಮಗಳಾದ ಐದಿ ವರ್ಷದ ಬಾಲಕಿಯನ್ನು ಬಿಹಾರ ಮೂಲದವನೆ ಅದ ರಾಕ್ಷಸನೊಬ್ಬ ಮಗುವನ್ನು ಅಪಹರಿಸಿ ಅತ್ಯಾಚಾರ ವೆಸಗಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚಿಲಕ್ಕೆ ತುಂಬಿ ಅನುಮಾನ ಬಾರದ ಹಾಗೆ ಅದರ ಮೇಲೆ ಕಸವನ್ನು ತುಂಬಿ ಸ್ಥಳೀಯ ಆಲುವಾದ ಮಾರುಕಟ್ಟೆಯ ಬಳಿಯ ಕಸದರಾಶಿಯಲ್ಲಿ ಎಸೆದು ಹೋಗಿದ್ದಾನೆ.
ಬಾಲಕಿ ನಾಪತ್ತೆಯಾದ ವಿಷಯ ತಿಳಿದ ಕೂಡಲೆ ಹುಡುಕಾಟಕ್ಕೆ ಮುಂದಾದ ಪೊಲೀಸರಿಗೆ ಸ್ಥಳೀಯ ರ ಸಹಕಾರ ಮತ್ತು ಸಿಸಿ ಟಿವಿ ಪುಟೆಜ್ ಅಧಾರದ ಮೇಲೆ ಮಗುವನ್ನು ಅಪಹರಿಸಿದವನನ್ನು ಬಂಧಿಸಿದ ನಂತರ ತಡರಾತ್ರಿ ಬಾಲಕಿಯ ಶವ ಪತ್ತೆಯಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದಾಗ ಕುಡಿದಮತ್ತಿನಲ್ಲಿದ್ದ ಆತನನ್ನು ವಿಚಾರಣೆ ಮಾಡಲು ಸಾಧ್ಯವಾಗದೆ ಮಾರನೆಯ ದಿನ ಮುಂಜಾನೆ ವಿಚಾರಣೆಗೆ ಒಳಪಡಿಸಿದಾಗ ಆತನೆ ಎಲ್ಲವನ್ನೂ ಹೇಳಿ ಬಾಕಿಯನ್ನು ಅತ್ಯಾಚಾರಮಾಡಿ ಹತ್ಯೆಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಮಗುವಿನ ಕುಟುಂಬ ವಾಸವಿದ್ದ ಕಟ್ಟಡದಲ್ಲೇ ವಾಸವಾಗಿದ್ದನಂತೆ ಪೊಲೀಸರ ಪ್ರಕಾರ, ಆರೋಪಿ ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದನಂತೆ.ಈ ಘಟನೆಗೆ ಕೇರಳ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಸ್ವತಃ ಕೇರಳ ಪೊಲೀಸರೇ ‘ಕ್ಷಮಿಸಿ ಮಗಳೇ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಕೇರಳ ಪೊಲೀಸರು ಬಾಲಕಿಯ ಪೋಷಕರಿಗೆ ಕ್ಷಮೆಯಾಚನೆಯ ಪೋಸ್ಟ್ ಮಾಡಿದ್ದಾರೆ. “ಮಗುವನ್ನು ಸುರಕ್ಷಿತವಾಗಿ ಪೋಷಕರ ಬಳಿಗೆ ಕರೆತರುವ ನಮ್ಮ ಪ್ರಯತ್ನ ವಿಫಲವಾಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮಗುವನ್ನು ಅಪಹರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಆರೋಪಿ ಕುಡಿದ ಮತ್ತಿನಲ್ಲಿದ್ದ ಕಾರಣ ಪ್ರಾಥಮಿಕ ವಿಚಾರಣೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರನೆಯ ದಿನ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಪೊಲೀಸರನ್ನು ತೀವ್ರವಾಗಿ ಖಂಡಿಸಿದೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅದೇ ಸಮಯದಲ್ಲಿ, ಮಾದಕ ದ್ರವ್ಯ ಮತ್ತು ಮದ್ಯದ ಅತಿಯಾದ ಸೇವನೆಯಿಂದ ಈ ಅಪರಾಧ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೇರಳ ರಾಜ್ಯದ ರಾಜ್ಯಪಾಲರು ಈ ಕೃತ್ಯವನ್ನು ಖಂಡಿಸಿದ್ದಾರೆ ಈ ಕೃತ್ಯಮಾಡಿದವನು ಮನುಷ್ಯನಾಗಲು ಸಾಧ್ಯವಿಲ್ಲ ಅವನು ರಾಕ್ಷಸ ಮನಸ್ಥಿತಿಯವನೆ ಆಗಿರಬೇಕು ಅಂತವರಿಗೆ ಕಠಿಣ ಶಿಕ್ಷೆಯಾಗ ಬೇಕೆಂದು ಹೇಳಿದ್ದಾರೆ.
ಪಾಪ ಇನ್ನೂ ತಾನು ಹುಟ್ಟಿ ಬೆಳೆದ ಸ್ಥಳವನ್ನೆ ಸರಿಯಾಗಿ ನೋಡದ ಅಪ್ಪ ಅಮ್ಮನ ಪ್ರೀತಿಯನ್ನು ಸರಿಯಾಗಿ ಅನುಭವಿಸುವ ಮೊದಲೇ ಐದು ವರ್ಷದ ಮಗು ಒಂದು ನೀಚನೊಬ್ಬನ ರಕ್ಕಸ ಮನಸ್ಥಿಗೆ ಸಾವಿನಂಚಿಗೆ ಸರಿದಿದೆ. ಇಂತಹ ರಕ್ಕಸ ಮನಸ್ಥಿತಿಯ ಆರೋಪಿಗೆ ಸರಿಯಾದ ಶಿಕ್ಷೆಯಾಗಬೇಕು.
ಸುಧೀರ್ ವಿಧಾತ,ಶಿವಮೊಗ್ಗ