ದೋಣಿ ಮಗುಚಿದ ದೃಶ್ಯ ಈಜಿ ದಡ ಸೇರುತ್ತಿರುವ ಕೇಲವು ಮೀನುಗಾರರು
ಬೈಂದೂರು ಸಮುದ್ರದ ಅಲೆಗಳ ಹೊಡೆತಕ್ಕೆ ಎಂಟು ಮಂದಿ ಇದ್ದ ಮೀನುಗಾರಿಕಾ ದೋಣಿ ಮಗುಚಿ ಒಬ್ಬರು ನೀರಿನಲ್ಲಿ ನಾಪತ್ತೆಯಾದರೆ ಇನ್ನೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಉಳಿದ ಏಳು ಮಂದಿ ಈಜಿಕೊಂಡು ದಡ ಸೇರಿದ್ದಾರೆ..!
ಉಪ್ಪಂದದ ಕಡಲ ತೀರದ ಸಮೀಪದಲ್ಲೇ ದೋಣಿ ಮಗುಚಿದ ಸಂಧರ್ಭದಲ್ಲಿ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಲು ಹರಸಹಾಸ ಪಡುತ್ತಿರುವ ಮೀನುಗಾರರ ವಿಡಿಯೋ…
ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ
ಬೈಂದೂರು: ಉಪ್ಪುಂದದ ಸಮುದ್ರದ ತೀರದ ಸಮೀಪದಲ್ಲೇ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು, ಇನ್ನೊಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯಾ ಮುಂದುವರೆದಿದೆ. ಮೃತಪಟ್ಟ ವ್ಯಕ್ತಿ
ನಾಗೇಶ್ (29) ನೀರಿನಲ್ಲಿ ಅಲೆಗಳ ಹೊಡೆತಕ್ಕೆ ನಾಪತ್ತೆಯಾದ ಯುವಕ ಸತೀಶ್ (31) ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದವರಲ್ಲಿ ಕೆಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
.ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸ್, ಅಗ್ನಿಶಾಮಕ ದಳ, ಕೋಸ್ಟಲ್ ಗಾರ್ಡ್ ಗಳು , ಮೀನುಗಾರಿಕಾ ಸಹಾಯಕ ನಿರ್ದೇಶಕರು ಕುಂದಾಪುರ ಸುಮಲತಾ, ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮೊದಲಾದವರು ಆಗಮಿಸಿದ್ದರು.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಚಿನ್ ಖಾರ್ವಿ ಮಾಲಿಕತ್ವದ “ಮಾಸ್ತಿ ಮರ್ಲು ಚಿಕ್ಕು ಪ್ರಸಾದ” ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆ ಬೆಳಗ್ಗೆ 11:00 ಗಂಟೆಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆ ಹೊರಟು ಮೀನುಗಾರಿಕೆ ಮುಗಿಸಿ ದಡಕ್ಕೆ ಬರುತ್ತಿರುವಾಗ ಸೋಮವಾರ 4 ಗಂಟೆಗೆ ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ನ ಕರ್ಕಿಕಳಿ ಎಂಬಲ್ಲಿ ಸಮುದ್ರದ ಅಲೆಗೆ ಸಿಕ್ಕಿ ದೋಣಿ ಮುಗಿಚಿ ಬಿದ್ದಿತ್ತು. ದೊಣಿಯಲ್ಲಿದ್ದ ಎಂಟು ಜನರಲ್ಲಿ 7 ಜನರು ಈಜಿ ದಡ ಸೇರಿದ್ದು ನಾಗೇಂದ್ರ ಖಾರ್ವಿ(29), ನಾಗೇಶ್ ಖಾರ್ವಿ (24), ದೇವೆಂದ್ರ ಖಾರ್ವಿ(25), ಅಣಪ್ಪ ಖಾರ್ವಿ(45), ಆದರ್ಶ ಖಾರ್ವಿ(20). ಸಚಿನ್ ಖಾರ್ವಿ(25), ಇನ್ನೊಬ್ಬ ಮೀನುಗಾರ ನಾಗೇಶ್ ಖಾರ್ವಿ(30) ಎಂಬುವವನು ತೀವ್ರ ಅಸ್ವಸ್ತರಾಗಿದ್ದು ಅಂಬುಲೆನ್ಸ್ ಮೂಲಕ ಬೈಂದೂರು ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸತೀಶ್ ಖಾರ್ವಿ(34) ನೀರುಪಾಲಾಗಿದ್ದಾರೆ. ಈ ಮೀನುಗಾರರು ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳು ಎಂಬ ಮಾಹಿತಿ ಲಭಿಸಿದೆ.
ಸುಧೀರ್ ವಿಧಾತ, ಶಿವಮೊಗ್ಗ